
ಕೊಲ್ಲೂರು: ಶಿವಮೊಗ್ಗ ಜಿಲ್ಲೆಯ ಕೊಡಚಾದ್ರಿ ಬೆಟ್ಟದಲ್ಲಿರುವ ಮೂಲ ಮೂಕಾಂಬಿಕ ದೇವರ ಸನ್ನಿದಿಗೆ ಪುರಾಣದ ಇತಿಹಾಸ ಇದೆ ಆದರೆ ಇದು ನಮ್ಮ ರಾಜ್ಯದ ಕನ್ನಡಿಗರಿಗಿಂತ ಕೇರಳ ಮತ್ತು ತಮಿಳುನಾಡಿಗರಿಗೆ ಹೆಚ್ಚು ಗೊತ್ತು.

ಕೊಲ್ಲೂರು ಮೂಕಾಂಬಿಕ ದರ್ಶನಕ್ಕೆ ಬಂದವರು ಕೊಡಚಾದ್ರಿ ಮೂಲ ಮೂಕಾಂಬಿಕ ದೇವಿ ದಶ೯ನ ಮಾಡಿ ಅಲ್ಲಿರುವ ಬಾರಾಪಂಥ ಯೋಗಿಗಳ ಸಿದ್ಧ ಪೀಠ ಮತ್ತು ಅದರ ಎದುರಿನ ಪುರಾತನ ಕಬ್ಬಿಣದ ಸ್ಥಂಭ ಮತ್ತು ಶಿಖರದ ಮೇಲಿನ ಸವ೯ಜ್ಞ ಪೀಠ ನಂತರ ಶಂಕರಾಚಾಯ೯ರು ತಪಸ್ಸುಗೈದ ಚಿತ್ರ ಮೂಲದ ಗುಹೆಯಲ್ಲಿ ಧ್ಯಾನ ಮಾಡಿ ವಾಪಾಸ್ ಬರುತ್ತಾರೆ.

ಈಗ ಇಲ್ಲಿಗೆ ಸವ೯ ಋತು ರಸ್ತೆ ಇಲ್ಲವಾದರೂ ಸಾದಾರಣ ರಸ್ತೆ ಜೀಪುಗಳಲ್ಲಿ ಪ್ರಯಾಣಿಸಲು ಸಾಧ್ಯವಿದೆ ಆದರೆ ಈ ಮೂಲ ಮೂಕಂಬಿಕ ದೇವಸ್ಥಾನದ ಅಚ೯ಕರಾದ ಬಳೆಗಾರ ಜೋಗಿ ಸಮಾಜದ ಕುಟುಂಬಕ್ಕೆ 800 ವರ್ಷದ ಇತಿಹಾಸ ಇದೆ ಆಗೆಲ್ಲ ರಸ್ತೆ ಇಲ್ಲ ವಾಹನ ಇಲ್ಲ ಆದರೂ ಇವರು ನಿರಂತರ ಪೂಜೆ ನಡೆಸಿಕೊಂಡು ಬಂದವರು, ನಾರಾಯಣ ಜೋಗಿ ಮತ್ತು ಕಾವೇರಮ್ಮ ದಂಪತಿ, ಅವರ ಮಗ ರಾಮ ಜೋಗಿ ಮತ್ತು ಸುಶೀಲಮ್ಮ ದಂಪತಿ ಅವರ ಮಗ ನಾಗೇಂದ್ರ ಜೋಗಿ ತನಕ ಜನ ಗುರುತಿಸುತ್ತಾರೆ ಅದಕ್ಕೂ ಹಿಂದಿನ ಅಚ೯ಕ ಕುಟುಂಬ ಸ್ಥಳಿಯರಿಗೆ ನೆನಪಿನಲ್ಲಿ ಉಳಿದಿಲ್ಲ.

ಪ್ರತಿ 12 ವರ್ಷಕ್ಕೊಮ್ಮೆ ಬಾರಾಪಂತ ಯಾತ್ರೆ ನಾಸಿಕ್ ನಿಂದ ಕೊಡಚಾದ್ರಿಗೆ ಬರುತ್ತಿತ್ತು ಕಾರಣ ಮೂಲ ಸಿದ್ದ ಪೀಠ ಇಲ್ಲಿಯೇ ಇತ್ತು ಕಾಲ ಕ್ರಮೇಣ ಸಿದ್ಧಪೀಠ ಕೊಡಚಾದ್ರಿಯ ಬುಡದ ಕಮಲಶಿಲೆ ಸಮೀಪದ ಹಲವಾರಿ ಮಠಕ್ಕೆ ಸ್ಥಳಾಂತರ ಆಗಿರಬೇಕು.

ಈ ದೇವಾಲಯ ಮುಜರಾಯಿ ಇಲಾಖೆಗೆ ಸೇರಿದೆ, ಮೈಸೂರು ಮಹಾರಾಜರಾದ ಕೃಷ್ಣರಾಜ ಒಡೆಯರ್ ಇಲ್ಲಿ ತಂಗಿ ಮೂಲ ಮೂಕಾಂಬಿಕ ತಾಯಿ ಪೂಜಿಸಿದ ಇತಿಹಾಸ ದಾಖಲೆ ಇದೆ.
ಈಗ ಆಗು೦ಬೆಯಲ್ಲಿ ವರ್ಷಕ್ಕೊಮ್ಮೆ ಕಾಣುವ ಕಾಡಾನೆ ಒ0ದು ದಿನ ಸಂಜೆ ಮೂಲ ಮೂಕಾಂಬಿಕ ದೇವಾಲಯದ ಎದುರು ಬಂದು ಘೀಳಿಟ್ಟಾಗ ನೆರೆದ ಭಕ್ತರು ಪ್ರವಾಸಿಗಳು ತುಂಬಾ ಭಯ ಪಟ್ಟಿದ್ದರಂತೆ ನಂತರ ಹಾಗೇ ವಾಪಾಸು ಹೋಗಿದ್ದು ಇಲ್ಲಿಯವರು ನೆನಪಿಸುತ್ತಾರೆ.

ಇಲ್ಲಿ ನಡೆಯುವ ಶಕ್ತಿ ಪೂಜೆಗೆ ವಿಶೇಷ ಶಕ್ತಿ ಇದೆ ಎಂಬ ಪ್ರತೀತಿ ಇದೆ, ಶಕ್ತಿ ಪೂಜೆಗೆ ಹೆಚ್ಚು ಜನ ಕೇರಳದಿಂದ ಬರುತ್ತಾರೆ.
ಈ ಶಕ್ತಿ ಪೂಜೆ ನಡೆದು ಬಂದದ್ದು ಈಗಿಂದಲ್ಲ ಸಾವಿರಾರು ವರ್ಷದಿಂದ.
ಈ ಪೂಜೆಗೆ ಸುಮಾರು 3 ಸಾವಿರದಿಂದ 4 ಸಾವಿರ ಖಚಾ೯ಗುತ್ತದೆ (ಬಲಿ ಪೂಜೆ ಸೇರಿ) ನಾನು ಇಲ್ಲಿನ ಶಕ್ತಿ ಪೂಜೆಯಲ್ಲಿ ಸಂಪೂಣ೯ ಭಾಗವಹಿಸಿದ್ದೆ 8 ವರ್ಷದ ಹಿಂದೆ.
ಅನೇಕರು ಸಾವಿರಾರು ವರ್ಷದ ಈ ಶಕ್ತಿ ಪೂಜೆ ನಿಲ್ಲಿಸಲು ಪ್ರಯತ್ನಿಸಿ ವಿಫಲರಾದ ಉಧಾಹರಣೆ ಇದೆ.

ರಾಜ್ಯ ಸಕಾ೯ರ ಇದನ್ನೆಲ್ಲ ಸಮಪ೯ಕ ವಾಗಿ ಬಳಸಿ ಇದನ್ನು ಪ್ರಮುಖ ಪೂಜಾ ಪ್ರವಾಸಿ ಕೇಂದ್ರ ಮಾಡಬಹುದು.
ಪ್ರಸಿದ್ಧ ಸ್ವಾಮಿ ಒಬ್ಬರು ಇಲ್ಲಿನ ಶಕ್ತಿ ಪೂಜೆ ನಿಲ್ಲಿಸಲು ಪ್ರಯತ್ನಿಸಿ ವಿಫಲರಾದ ಕಥೆ ಇಲ್ಲಿನ ಅಚ೯ಕರ ಪತ್ನಿ ಸುಶೀಲಮ್ಮ ರಾಮ ಜೋಗಿ (ಈಗ ಇಲ್ಲ) ಅವರು ನನಗೆ ವಿವರಿಸಿದ್ದರು.
ಹಿಂದಿನ ದಿನವೇ ಬೆಟ್ಟಕ್ಕೆ ಬಂದು ಪರಮೇಶ್ವರ ಭಟ್ಟರ ಅಥಿತಿ ಆಗಿ ತಂಗಿದ್ದ ಸ್ವಾಮಿ ಬೆಳಿಗ್ಗೆ ಮೂಲ ಮೂಕಾಂಬಿಕ ದಶ೯ನಕ್ಕೆ ಬಂದವರು ಒ0ದು ಹುಕುಂ ಮಾಡುತ್ತಾರೆ ” ಇವತ್ತಿಂದ ಇಲ್ಲಿ ಶಕ್ತಿ ಪೂಜೆಯ ಬಲಿ ನಡೆಸಬಾರದು” ಅಂತ ಆಗ ಸುಶೀಲಮ್ಮ ಗುರುಗಳೇ ನೀವೇ ದೇವಿಯ ಪೂಜೆ ಮಾಡಿ ಆರತಿ ಬೆಳಗಿ ಈ ರೀತಿ ಆದೇಶ ನೀಡಿ, ನಾವು ಪಾಲಿಸುತ್ತೇವೆ ಏಕೆಂದರೆ ಈ ವರೆಗೆ ಅನೇಕ ಅಧಿಕಾರಿಗಳು ಈ ರೀತಿ ಆದೇಶ ಮಾಡಿ ಹೋದವರೇ ಪುನಃ ಬಂದು ಪ್ರಾರಂಬಿಸಿ ಅಂದ ಉದಾಹರಣೆ ಇದೆ ” ಅಂದಾಗ ಕಣ್ಣು ಮುಚ್ಚಿ ಪ್ರಾಥಿ೯ಸಿದ ಆ ಸ್ವಾಮಿಗಳು ನಂತರ “ಈಗ ಹೇಗೆ ನಡೆಯುತ್ತಿದೆ ಹಾಗೆ ಮುಂದುವರಿಯಲಿ ” ಎಂದರಂತೆ.

ಬಲಿ ಪೂಜೆ ನಿಲ್ಲಿಸಿದರೆ ಆಗಮ ಪೂಜೆಗಾಗಿ ಅಚ೯ಕರ ನೇಮಿಸಿ ತಲತಲಾಂತರದಿಂದ ನೂರಾರು ವಷ೯ದಿಂದ ಕೊಡಚಾದ್ರಿಯ ಬೀಕರ ಮಳೆ ಗಾಳಿ ಚಳಿಯಲ್ಲಿ ಪೂಜೆ ನಡೆಸಿದ ಬಳೆಗಾರ ಅರ್ಚಕರನ್ನ ಬದಲಿಸ ಬೇಕೆಂಬ ಸಣ್ಣತನದ ಅನೇಕರ ಬಯಕೆ ಈಡೇರಲಿಲ್ಲ.
ನೂರಾರು ವರ್ಷದಿಂದ ಹೊಟ್ಟಿ ಬಟ್ಟೆ ಕಟ್ಟಿ ಮೂಲ ಮೂಕಾಂಬಿಕ ದೇವಿಯ ಸೇವೆ ಮಾಡಿದ ಈ ಬಳೆಗಾರ ಕುಟುಂಬದ ನಾಗೇಂದ್ರ ಜೋಗಿ ಈಗ ವ್ಯವಹಾರ ಕೃಷಿ ಮತ್ತು ರಾಜಕೀಯದಲ್ಲಿ ಸಕ್ರಿಯ ಆಗಿರುವುದು ಅನೇಕರ ಹೊಟ್ಟೆ ಕಿಚ್ಚಿಗೆ ಕಾರಣ ಆಗಿದ್ದು ಸುಳ್ಳಲ್ಲ.

ಈಗ ಸಂಜೆ 6 ರ ಒಳಗೆ ಬೆಟ್ಟಕ್ಕೆ ಹೋದವರು ಕಡ್ಡಾಯವಾಗಿ ವಾಪಾಸ್ ಬರಲೇ ಬೇಕಾದ ವನ್ಯಜೀವಿ ಅರಣ್ಯದ ಕಾನೂನು ಬೇರೆ ಇದೆ ಹಾಗಾಗಿ ಇಲ್ಲಿ ಶಕ್ತಿ ಪೂಜೆ ಕಷ್ಟಸಾಧ್ಯವಾಗಿದೆ.
ಇಲ್ಲಿ ಶಕ್ತಿ ಪೂಜೆ ಮಾಡಿದರೆ ಶತ್ರು ನಾಶ ಎಂಬ ಪ್ರತೀತಿ ಇದೆ ಇಲ್ಲಿ ಶಕ್ತಿ ಪೂಜೆ ಮಾಡಿಸಬೇಕೆಂಬ ಅಪೇಕ್ಷೆ ಇದ್ದವರು ಮಾಹಿತಿಗಾಗಿ ಇಲ್ಲಿನ ಪರಂಪರಾ ಅಚ೯ಕ ಕುಟುಂಬದ *ನಾಗೇಂದ್ರ ಜೋಗಿ (ಮಾಜಿ ಗ್ರಾ.ಪಂ ಅಧ್ಯಕ್ಷರು ನಿಟ್ಟೂರು ) ಇವರನ್ನ ಸಂಪಕಿ೯ಸ ಬಹುದು ಇವರ ಸಂಪರ್ಕ ಸೆಲ್ ನಂಬರ್ 9449500806

ಲೇಖನ: ಅರುಣ್ ಪ್ರಸಾದ್
