ಶಿವಮೊಗ್ಗ: ಸಚಿವರಾದ ಕೆ.ಎಸ್ ಈಶ್ವರಪ್ಪ ನವರು ಶಿವಮೊಗ್ಗ ನಗರದಲ್ಲಿ ಗ್ರಾಮ ಸ್ವರಾಜ್ಯ ಸಮಾವೇಶ ಉದ್ಘಾಟಿಸಿದರು.

ಶಿವಮೊಗ್ಗ ನಗರದ ಗ್ರಾಮ ಸ್ವರಾಜ್ಯ ಉದ್ಘಾಟನಾ ಕಾರ್ಯಕ್ರಮವು ನಗರದ ಶಿವಪ್ಪ ನಾಯಕ ಪ್ರತಿಮೆಗೆ ಮಾಲಾರ್ಪಣೆ ಯೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಸ್ ಈಶ್ವರಪ್ಪನವರು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಸಂಸದರಾದ ಶ್ರೀ ಬಿ.ವೈ.ರಾಘವೇಂದ್ರ , ಜಿಲ್ಲಾಧ್ಯಕ್ಷರಾದ ಟಿ.ಡಿ ಮೇಘರಾಜ್, ವಿಧಾನಪರಿಷತ್ ಶಾಸಕರಾದ ರುದ್ರೇ ಗೌಡ್ರು, ರಾಜ್ಯ ಕಾರ್ಯದರ್ಶಿಗಳಾದ ತುಳಸಿ ಮುನಿರಾಜು ಗೌಡ, ರಾಜ್ಯ ವಿಧಾನಸಭೆ ಸದಸ್ಯ ಭಾರತಿ ಶೆಟ್ಟಿ, ಬಿಜೆಪಿ ಮುಖಂಡರಾದ ಭಾನು ಪ್ರಕಾಶ್ ಜೀ, ಗಿರೀಶ್ ಪಟೇಲ್ ಜೀ, ಸುರೇಖಾ ಮುರುಳಿದರ್, ಸಿದ್ದರಾಮಣ್ಣ, ಅರುಣ್ ಕುಮಾರ್, ಎಸ್.ಎಸ್ ಜ್ಯೋತಿಪ್ರಕಾಶ್ , ಹರಿಕೃಷ್ಣ ಎಂಬಿ, ಹಾಗೂ ಪ್ರಮುಖರು, ಮಹಾನಗರ ಪಾಲಿಕೆಯ ಸದಸ್ಯರುಗಳು, ಪದಾಧಿಕಾರಿಗಳು ಉಪಸ್ಥಿತರಿದ್ದರು.

ವರದಿ: ಸಿಸಿಲ್ ಸೋಮನ್
