ಸಾಗರ: ನಾಯಕನಾಗಿರುವುದು ಸುಲಭವಲ್ಲ ನಾಯಕನು ಎಂದಿಗೂ ಬಿಟ್ಟುಕೊಡದ ಮತ್ತು ನಿರಂತರವಾಗಿ ಸಕ್ರಿಯವಾಗಿರುವ ವ್ಯಕ್ತಿ. ಅವರು ಪರಿಹಾರಗಳನ್ನು ಹುಡುಕುವವರೆಗೂ ಹುಡುಕುತ್ತಾರೆ – ಮಾಜಿ ಶಾಸಕರು ಶ್ರೀ ಗೋಪಾಲ ಕೃಷ್ಣ ಬೇಳೂರು.

ಸಾಗರ ಮತ್ತು ಹೊಸನಗರ ರಸ್ತೆಯಲ್ಲಿ, ಹರಿದ್ರಾವತಿಯಲ್ಲಿ ರಸ್ತೆಗೆ ಅಡ್ಡವಾಗಿ ದೊಡ್ಡ ಮರವೊಂದು ಬಿದ್ದು ರಸ್ತೆಯಲ್ಲಿ ಓಡಾಡುವ ಪ್ರಯಾಣಿಕರಿಗೆ ತೊಂದರೆಯಾಗಿತ್ತು.
ಇದನ್ನು ನೋಡಿದ ಮಾಜಿ ಶಾಸಕರು ಮತ್ತು ಕೆಪಿಸಿಸಿ ವಕ್ತಾರರಾದ ಶ್ರೀ ಗೋಪಾಲ ಕೃಷ್ಣ ಬೇಳೂರು ಅವರು ತಮ್ಮ ಕಾರನ್ನು ನಿಲ್ಲಿಸಿ ಮರವನ್ನು ಕಡಿದು ರಸ್ತೆಯನ್ನು ತೆರವು ಗೊಳಿಸಿ ರಸ್ತೆಯನ್ನು ಜನರ ಓಡಾಟಕ್ಕೆ ಅನುವು ಮಾಡಿಕೊಟ್ಟರು . ಕಲಸೆ ಕೃಷ್ಣಪ್ಪ , ವಿಜಯ ಮೊಗವೀರ , ರಾಕೇಶ್ ಗೌತಮಪುರ ಮತ್ತು ಗ್ರಾಮಸ್ತರು ಸಹಕರಿಸಿದರು .

ವರದಿ: ಸಿಸಿಲ್ ಸೋಮನ್
