ಬೆಂಗಳೂರು : ರಾತ್ರಿ ಕರ್ಫ್ಯೂನಿಂದ ಸೋಂಕು ನಿಯಂತ್ರಣ ಸಾಧ್ಯ ಎಂದು ಸಲಹೆ ಕೊಟ್ಟ ತಜ್ಞರು ಯಾರು? – ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್.
ರಾತ್ರಿ ಕರ್ಫ್ಯೂನಿಂದ ಸೋಂಕು ನಿಯಂತ್ರಣ ಸಾಧ್ಯ ಎಂದು ಸಲಹೆ ಕೊಟ್ಟ ತಜ್ಞರು ಯಾರು? ಇಂತಹ ವಿಚಾರದಲ್ಲಿ ಕನಿಷ್ಠ ಸಾಮಾನ್ಯ ಜ್ಞಾನ ಇರಬೇಕು. ಈಗಾಗಲೇ ಜನ ಸಂಕಷ್ಟದಲ್ಲಿದ್ದಾರೆ, ಅವರ ನಿತ್ಯದ ಬದುಕಿಗೆ ತೊಂದರೆ ಆಗದಂತೆ ಸೋಂಕು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ವೈದ್ಯಕೀಯ ವ್ಯವಸ್ಥೆ ಮಾಡಬೇಕು.
ಕೋವಿಡ್, ಲಾಕ್ ಡೌನ್‌ನಿಂದಾಗಿ ನೊಂದವರಿಗೆ, ನಷ್ಟ ಅನುಭವಿಸಿರುವವರಿಗೆ ಪರಿಹಾರ ನೀಡಿದ್ದಾರಾ? ಪಾಲಿಕೆ ವ್ಯಾಪ್ತಿಯ ವ್ಯಾಪಾರಸ್ಥರಿಗೆ ತೆರಿಗೆ ವಿನಾಯಿತಿ, ಉದ್ಯೋಗ ಭತ್ಯೆ ಕೊಟ್ಟಿದ್ದಾರಾ? ಬ್ಯಾಂಕ್ ಗಳಿಗೆ ಸೂಚನೆ ನೀಡಿ ಬಡ್ಡಿ ಮನ್ನಾ ಮಾಡಿಸಿದ್ದಾರಾ? ಪ್ರಚಾರಕ್ಕಾಗಿ ತಮಗೆ ತೋಚಿದಂತೆ ತೀರ್ಮಾನಿಸಿದರೆ ಕೇಳಲು ಸಾಧ್ಯವೇ?
ಬಿ.ಎಸ್.ಯಡಿಯೂರಪ್ಪ ಸರ್ಕಾರ ಬಂದ ಮೇಲೆ ಬಹುತೇಕ ನಿರ್ಧಾರಗಳಲ್ಲಿ ಯೂ ಟರ್ನ್ ಹೊಡೆದಿದೆ, ರಾತ್ರಿ ಕರ್ಫ್ಯೂ ಗೊಂದಲ ಹೊಸದೇನಲ್ಲ. ನಮ್ಮ ಯುವ ಜನರಿಗೆ ಈ ಸಚಿವರಿಗಿಂತ ಉತ್ತಮ ಪರಿಜ್ಞಾನ ಇದೆ. ಕೊರೊನ ಮಾಹಾಮಾರಿ ಆದಷ್ಟು ಬೇಗ ತೊಲಗಿ, ಜನರಿಗೆ ನೆಮ್ಮದಿ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ.

ವರದಿ: ಸಿಸಿಲ್ ಸೋಮನ್
