ಬೆಂಗಳೂರು : ಎಪಿಎಂಸಿ ಕಾಯ್ದೆಯನ್ನೇ ರದ್ದುಗೊಳಿಸುವುದಾಗಿ 2019ರ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಕಾಂಗ್ರೆಸ್, ಈಗ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಂದ್ ಬೆಂಬಲಿಸಿದೆ – ರಾಜ್ಯ ಬಿಜೆಪಿ ಉಪಾಧ್ಯಕ್ಷರು ಶ್ರೀ ಬಿ.ವೈ. ವಿಜಯೇಂದ್ರ.
ಎಪಿಎಂಸಿ ಕಾಯ್ದೆಯನ್ನೇ ರದ್ದುಗೊಳಿಸುವುದಾಗಿ 2019ರ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಕಾಂಗ್ರೆಸ್, ಈಗ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಂದ್ ಬೆಂಬಲಿಸಿದೆ. ಕಾಂಗ್ರೆಸ್ ಕೈಲಾಗದ ಕೆಲಸವನ್ನು
ನರೇಂದ್ರ ಮೋದಿ ಸರ್ಕಾರ ಮಾಡಿ ರೈತರಿಗೆ ಹೆಚ್ಚಿನ ಅನುಕೂಲ ಕಲ್ಪಿಸಿದೆ. ನಿಮ್ಮ ಸ್ವಾರ್ಥಕ್ಕಾಗಿ ರೈತರನ್ನು ದಾರಿ ತಪ್ಪಿಸಬೇಡಿ.
ರೈತರಿಗೆ ಮುಕ್ತ ಮಾರುಕಟ್ಟೆ ಕಲ್ಪಿಸಬೇಕೆಂದು ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಹೇಳಿದ್ದನ್ನು ಕಾಂಗ್ರೆಸ್ ಮರೆತಿದೆ. ತಾನು ಆಡಿದ್ದನ್ನು ಎಂದಿಗೂ ಜಾರಿಗೆ ತರದ ಕಾಂಗ್ರೆಸ್, ಈಗ ಬಿಜೆಪಿ ಸರ್ಕಾರದ ಸುಧಾರಣಾ ಕ್ರಮಗಳನ್ನು ವಿರೋಧಿಸಿ ತನ್ನ ಅಸಲೀ ಬಣ್ಣ ಬಯಲು ಮಾಡಿಕೊಂಡಿದೆ. ರೈತರು ನಿಮ್ಮನ್ನು ಕ್ಷಮಿಸುವುದಿಲ್ಲ.
ಬಿಜೆಪಿ ಸರ್ಕಾರದ ಕ್ರಮದಿಂದ ಧೃತಿಗೆಟ್ಟ ಪಂಜಾಬ್, ಹರಿಯಾಣದ ಮಧ್ಯವರ್ತಿಗಳು ರೈತರನ್ನು ಪ್ರಚೋದಿಸಿ, ಗೊಂದಲ ಉಂಟುಮಾಡಿ ಪ್ರತಿಭಟನೆಗೆ ಕುಮ್ಮಕ್ಕು ನೀಡಿದ್ದಾರೆ. ಇದೇ ರೀತಿ ರಾಜ್ಯದಲ್ಲಿ ಕಾಂಗ್ರೆಸ್ಸಿಗರು ಅನ್ನದಾತರನ್ನು ತಮ್ಮ ಅವಕಾಶವಾದಿ ರಾಜಕೀಯಕ್ಕೆ ಬಳಸಿಕೊಳ್ಳಲು ಪ್ರಯತ್ನಿಸಿ ನೀಚ ರಾಜಕಾರಣ ಮಾಡುತ್ತಿದ್ದಾರೆ.

ವರದಿ: ಸಿಸಿಲ್ ಸೋಮನ್
