ಬೆಂಗಳೂರು : ಕಾಂಗ್ರೆಸ್ ನಾಯಕರನ್ನ ಅನ್ನದಾತರ ಪರ ಕೈಜೋಡಿಸುವ ಶ್ರೀ ರಾಹುಲ್ ಗಾಂಧಿ ಅವರ ನಡೆಯನ್ನು ಟೀಕಿಸಿರುವ ಬಿಜೆಪಿ ನಾಯಕರ ವರ್ತನೆ ಹೇಳಿಕೆಯನ್ನು ಖಂಡಿಸಿ ಇಂದು ಪ್ರತಿಭಟನೆ.

“ಮಾನ್ಯ ವರದಿಗಾರರಿಗೆ” ವಿಷಯ: ಬಿಜೆಪಿ ಪಕ್ಷದ ನಾಯಕರು ಸಚಿವರು ಜನರ ಸಮಸ್ಯೆಯನ್ನು ಬಗೆಹರಿಸದೆ ಉದ್ದೇಶಪೂರ್ವಕವಾಗಿ ರಾಜ್ಯದಲ್ಲಿ ಗೋ ಹತ್ಯೆ ವಿಷಯವನ್ನು ಪ್ರಸ್ತಾಪಿಸಿ ಜನರ ಗಮನವನ್ನು ಬೇರೆಡೆಗೆ ಸೆಳೆದು ದೇಶದ ಅನ್ನದಾತರು ತಮ್ಮ ಬೇಡಿಕೆಯನ್ನು ಈಡೇರಿಸಬೇಕೆಂದು ಒತ್ತಾಯಿಸಿ ಅಹೋರಾತ್ರಿ ಧರಣಿ ನಡೆಸುತ್ತಿದ್ದರೂ ಪ್ರಧಾನಿ ಹಾಗೂ ಕೇಂದ್ರ ಸಚಿವರು ರೈತರ ಮನವಿಯನ್ನು ಪರಿಗಣಿಸದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಜನರ ಪರ ಮಾತನಾಡುವ ಕಾಂಗ್ರೆಸ್ ನಾಯಕರನ್ನ ಅನ್ನದಾತರ ಪರ ಕೈಜೋಡಿಸುವ ಶ್ರೀ ರಾಹುಲ್ ಗಾಂಧಿ ಅವರ ನಡೆಯನ್ನು ಟೀಕಿಸಿರುವ ಬಿಜೆಪಿ ನಾಯಕರ ವರ್ತನೆ ಹೇಳಿಕೆಯನ್ನು ಖಂಡಿಸಿ ಇಂದು ಪ್ರತಿಭಟನೆ ನಡೆಸಲಾಯಿತು.
ದೇಶದ ರೈತರ ವಿರುದ್ಧ ಕೇಂದ್ರ ಸರ್ಕಾರ ಮಸೂದೆ ಮೂಲಕ ಜಾರಿಗೆ ತಂದಿರುವ ಕಾನೂನನ್ನು ತಡೆಗಟ್ಟಬೇಕು ಕೂಡಲೇ ರೈತರ ಬೇಡಿಕೆಗಳಿಗೆ ಸ್ಪಂದಿಸಬೇಕೆಂದು ಹೋರಾಟ ನಡೆಸುತ್ತಿರುವ ರೈತರನ್ನೇ ಅನುಮಾನವಾಗಿ ಕಾಣುವ ಕೇಂದ್ರ ಸರ್ಕಾರ ರೈತರ ಹೋರಾಟಕ್ಕೆ ಬೆಲೆ ನೀಡುತ್ತಿಲ್ಲ ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿರುವ ಕಾಂಗ್ರೆಸ್ ಮುಖಂಡರಾದ ಶ್ರೀ ರಾಹುಲ್ ಗಾಂಧಿ ರವರ ಬಗ್ಗೆ ಕೇಂದ್ರ ಹಾಗೂ ರಾಜ್ಯ ಬಿಜೆಪಿ ನಾಯಕರು ಆಧಾರ ರಹಿತ ಟೀಕೆಗಳನ್ನು ಮಾಡುತ್ತಿದ್ದಾರೆ ಕರ್ನಾಟಕದ ಕಂದಾಯ ಸಚಿವರಾದ ಆರ್ ಅಶೋಕ್ ರವರು ತಮ್ಮ ಹಿಂದಿನ ಅವಧಿಯಲ್ಲೇ ಬಗರ್ ಹುಕುಂ ಭೂಮಿಯನ್ನು ಶ್ರೀಮಂತರಿಗೆ ಹಂಚಿಕೆ ಮಾಡಿ ಇಂದು ರೈತರ ಬಗ್ಗೆ ಮಾತನಾಡುತ್ತಿದ್ದರೆ ರೈತರ ಭೂಮಿಯನ್ನು ನುಂಗಿದ ಕಂದಾಯ ಸಚಿವರು ಶ್ರೀ ರಾಹುಲ್ ಗಾಂಧಿ ರವರ ಬಗ್ಗೆ ಮಾತನಾಡುವ ಯೋಗ್ಯತೆ ಇದೆಯೇ ? ಇನ್ನು ಬಿಜೆಪಿಯ ಅಮವಾಸೆ ಸೂರ್ಯ ಕಾಂಗ್ರೆಸ್ ಬಗ್ಗೆ ನಾಟಕ ಮಂಡಳಿ ಎಂದು ಟೀಕಿಸಿದ್ದಾರೆ ಆದರೆ ದೇಶದಲ್ಲಿ ನಾಟಕವಾಡುತ್ತಿರುವ ಅವರು ನಾಟಕ ಕಂಪನಿ ಮಾಲೀಕರು ಯಾರೆಂಬುದು ದೇಶದ ಪ್ರತಿಯೊಬ್ಬ ಪ್ರಜೆಗೂ ತಿಳಿದಿದೆ ದೇಶದ ಜನರನ್ನು ವಂಚಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಆಡಳಿತದಿಂದ ಇಂದು ದೇಶ ಪ್ರತಿ ಹಂತದಲ್ಲೂ ಅಭಿವೃದ್ಧಿಯಲ್ಲಿ ಹಿಂದೆ ಸರಿದಿದೆ ಎಂಬುದು ಜಗಜ್ಜಾಹೀರವಾಗಿದೆ ಇದನ್ನು ಮರೆಮಾಚಲು ಆಧಾರ ರಹಿತ ಟೀಕೆಗಳನ್ನು ನೀಡುವುದು ಇವರ ಕಾಯಕವಾಗಿದೆ.

ಬಿಜೆಪಿಯ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟಿಲ್ ಗೆ ರಾಜಕೀಯ ಅನುಭವದ ಕೊರತೆ ಎದ್ದುಕಾಣುತ್ತದೆ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ ಎಂಬುದು ಅವರ ಹೇಳಿಕೆ ಅತ್ಯಂತ ಅಪಹಾಸ್ಯವಾಗಿದೆ ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದೆ ಹಾಗಾದರೆ ಅರಾಜಕತೆ ಸೃಷ್ಟಿಸುತ್ತಿರುವ ಅವರು ಬಿಜೆಪಿಯವರೇ ಎಂಬುದು ಅವರ ಹೇಳಿಕೆಯಿಂದ ಬಹಿರಂಗವಾಗಿದೆ ಈಗಲಾದರೂ ಅರಾಜಕತೆಗೆ ಮೂಲ ಕಾರಣ ಬಿಜೆಪಿ ಪಕ್ಷ ಎಂಬುದು ಅವರ ಹೇಳಿಕೆಯಿಂದ ಬಹಿರಂಗವಾಗಿದೆ.ಧರ್ಮದ ಹೆಸರಿನಲ್ಲಿ ಜಾತಿ ಹೆಸರಿನಲ್ಲಿ ರಾಜಕಾರಣ ಮಾಡುವ ಬಿಜೆಪಿಯ ಸಿ.ಟಿ.ರವಿ ಪ್ರತಿನಿತ್ಯ ಗೋ ಹತ್ಯೆ ನಿಷೇಧ ವಿಷಯಗಳನ್ನು ಪ್ರಸ್ತಾಪಿಸಿ ಕಾಂಗ್ರೆಸ್ ನಾಯಕರ ವಿರುದ್ಧ ಸುಳ್ಳಿನ ಅಪ ಪ್ರಚಾರವನ್ನು ನಡೆಸುತ್ತಿದ್ದಾರೆ ಗೋಹತ್ಯೆ ನಿಷೇಧದ ಬಗ್ಗೆ ಕೇಂದ್ರ ಸರ್ಕಾರವೇ ಸ್ಪಷ್ಟ ನೀತಿಯನ್ನು ಹೊಂದಿಲ್ಲ ಎಂಬುದರ ಬಗ್ಗೆ ಅವರಿಗೆ ಅರಿವಿಲ್ಲ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರದ ಅವಧಿಯಲ್ಲೇ ಅತಿಹೆಚ್ಚು ಗೋಮಾಂಸ ರಪ್ತಾಗುತ್ತಿದೆ ಇದರ ಬಗ್ಗೆ ಮೊದಲು ಬಿಜೆಪಿ ನಾಯಕರು ಜನತೆಗೆ ತಿಳಿಸಬೇಕು ಅದನ್ನು ಮರೆಮಾಚಲು ಸುಳ್ಳಿನ ಮಾಹಿತಿ ಹಾಗೂ ಹೇಳಿಕೆಗಳನ್ನು ನೀಡಿ ಕಾಲಹರಣ ಮಾಡುತ್ತಿದ್ದಾರೆ ಇವರಿಂದ ಯಾವುದೇ ರೀತಿಯ ಅಭಿವೃದ್ಧಿ ರಾಜ್ಯಕ್ಕೆ ದೇಶಕ್ಕೆ ಸಿಗುವುದಿಲ್ಲ ಕೇವಲ ಭಾಷಣಕ್ಕೆ ಪ್ರಚಾರಕ್ಕೆ ಮಾತ್ರ ಬಿಜೆಪಿ ಪಕ್ಷ ಸೀಮಿತವಾಗಿದೆ ಬಿಜೆಪಿ ನಾಯಕರ ಸುಳ್ಳಿನ ಮಾಹಿತಿ ಹಾಗೂ ನಡೆಯನ್ನು ಖಂಡಿಸಿ ಪ್ರತಿಭಟನೆ ಹಾಗೂ ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಮೆರವಣಿಗೆಯನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿಯ ಮುಖ್ಯಸ್ಥರಾದ ಎಂ ರಾಮಚಂದ್ರಪ್ಪ, ಎಸ್ ಮನೋಹರ್ ರವರು ಜಿ ಜನಾರ್ದನ್, ಎ ಆನಂದ್, ಈ ಶೇಖರ್, ಎಂ. ಎ. ಸಲೀಂ (ಮಾಧ್ಯಮ ಕಾರ್ಯದರ್ಶಿ) ಎಲ್ ಜಯಸಿಂಹ, ಶ್ರೀಧರ್, ಪ್ರಕಾಶ್, ಮಹೇಶ್, ಪುಟ್ಟರಾಜು, ಶಶಿಭೂಸಣ್, ಚಂದ್ರು ಹಾಗೂ ಪಕ್ಷದ ಮುಖಂಡರುಗಳಾದ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನ ರೀತಿಯಲ್ಲಿ ಭಾಗವಹಿಸಿದ್ದರು.

ವರದಿ: ಸಿಸಿಲ್ ಸೋಮನ್
