ಸಾಗರ : ಬಿಜೆಪಿ ಸಿದ್ದಾಂತ ಪಂಚಾಯ್ತಿ ಚುನಾವಣೆಯಲ್ಲಿ ಬರದು – ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು.
ಬಿಜೆಪಿ ಪಕ್ಷದ ತತ್ವ ಸಿದ್ದಾಂತಗಳು ಗ್ರಾಮ ಪಂಚಾಯಿತಿಯ ಚುನಾವಣೆಯಲ್ಲಿ ಚಲಾವಣೆಗೆ ಬರದು. ಆದ್ದರಿಂದ ಕಾಂಗ್ರೆಸ್ ಪಕ್ಷದ ಬೆಂಬಲದಿAದ ಚುನಾವಣೆಗೆ ಸ್ಪರ್ಧಿಸುವ ಉಮೇದುದಾರರು ದಿಟ್ಟತನ ಮತ್ತು ಛಲದಿಂದ ಚುನಾವಣೆಯನ್ನು ಎದುರಿಸಿ ಎಂದು ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಪಟ್ಟಣದ ರಾಮಮಂದಿರದಲ್ಲಿ ಆಯೋಜಿಸಲಾಗಿದ್ದ ಗ್ರಾಮ ಪಂಚಾಯ್ತಿ ಚುನಾವಣಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿ ಬಿಜೆಪಿಯವರು ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿನ ಪ್ರಣಾಳಿಕೆಯಲ್ಲಿ ಲೋಕಾಯುಕ್ತವನ್ನು ಪುನ: ಜಾರಿಗೊಳಿಸುವುದಾಗಿ ಘೋಷಿಸಲಾಗಿದ್ದರೂ ಕೂಡಾ ಈ ವರೆಗೂ ಅಧಿಕಾರ ನೀಡದಿರುವುದನ್ನು ನೋಡಿದರೆ ಪುನ: ಯಡಿಯೂರಪ್ಪ ಮತ್ತೆ ಜೈಲಿಗೆ ಹೋಗಬೇಕಾಗುವುದೆಂಬ ಭಯದಲ್ಲಿ ಈ ವರಗೂ ಅದನ್ನು ಅನುಷ್ಟಾನಗೊಳಿಸಲು ಹಿಂದೇಟು ಹಾಕುತ್ತಿದ್ದಾರೆಂದರು. ಅವರು ಈ ಗ್ರಾಮ ಪಂಚಾಯ್ತಿ ಚುನಾವಣೆಗೆ ಅಭ್ಯರ್ಥಿಗಳ ಹುಡುಕಾಟದಲ್ಲಿಯೇ ನಿರತರಾಗಿರುವುದರ ಬಗ್ಗೆ ಸಭೆಯಲ್ಲಿ ವಿವರಿಸಿ ಈ ಹಿಂದಿನ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಲಾಗಿರುವ ಹತ್ತು ಹಲವು ಕಾರ್ಯಕ್ರಮಗಳಿಂದಾಗಿ ಮತದಾರರು ರಾಜ್ಯದಲ್ಲಿ ಪುನ: ತಳಮಟ್ಟದಲ್ಲಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಬೆಂಬಲಿಸುವತ್ತಾ ಮುಂದಾಗಿದ್ದಾರೆ ಎಂದರು.
ಈ ಭಾರಿಯಲ್ಲಿ ಬಿಜೆಪಿ ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿದ್ದರೂ ಕೂಡಾ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಬಿಜೆಪಿಯ ತತ್ವಸಿದ್ದಾಂತ ಯಾವುದು ಲೆಕ್ಕಕ್ಕೆ ಬರದು ಎಂದ ಹೇಳಿ ಅಭ್ಯರ್ಥಿಗಳು ತಮ್ಮ ವಾರ್ಡ್ ವ್ಯಾಪ್ತಿಯಲ್ಲಿ ಮತದಾರರನ್ನು ಪ್ರೀತಿ ವಿಶ್ವಾಸದೊಂದಿಗೆ ತಮ್ಮ ಕಡೆ ಸೆಳೆದುಕೊಳ್ಳುವ ಪ್ರಯತ್ನ ನಡೆಸಿ ಯಾವುದೇ ಜಾತಿ ನಿಗಮ ಮಂಡಳಿ ಮಾಡುವ ಮುನ್ನ ಅರ್ಥಿಕ ವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡ ಹಣ ನೀಡಬೇಕು.
ಆದರೆ ಕ್ಷೇತ್ರದ ಮೂಲಕ ಹಿಂದಿನ ಸರ್ಕಾರದ ಯೋಜನೆಗಳಾದ ಆಶ್ರಯ ಫಲಾನುಭವಿಗಳಿಗೆ ಇನ್ನೂ ಹಣ ನೀಡುವಲ್ಲಿ ವಿಫವಾಗಿರುವುದು ಮತ್ತು ಅತಿವೃಷ್ಟಿ ಮತ್ತು
ಅನಾವೃಷ್ಟಿಯಲ್ಲಿ ಮನೆಮಠ ಕಳೆದುಕೊಂಡವರಿಗೆ ಪರಿಹಾರ ವಿತರಣೆಯಲ್ಲಿ ವಿಳಂಬ ನೀತಿ ಅನುಸರಿಸಿರುವ ಸರ್ಕಾರದ ಕ್ರಮವನ್ನು ತರಾಟೆಗೆ ತಗೆದುಕೊಂಡ ಅವರು ಸರ್ಕಾರದ ಯೋಜನೆಗಳಿಗೆ ಹಣ ನೀಡಲು ಸರ್ಕಾರದಲ್ಲಿ ಹಣವಿಲ್ಲದಿರುವಾಗ ಜಾತಿ ನಿಗಮಗಳಿಗೆ ಹಣ ಬಿಡುಗಡೆ ಮಾಡಿರುವುದನ್ನು ತೀವ್ರವಾಗಿ ಖಂಡಿಸಿ ಇದನ್ನೆ ಚುನಾವಣಾ ಪ್ರಚಾರದ ಅಸ್ತçವಾಗಿಸಿಕೊಳ್ಳಿ ಎಂದರು.
ತಾಲ್ಲೂಕ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು.
ಜಿ.ಪಂ.ಸದಸ್ಯೆ ಶ್ವೇತಾ ಆರ್. ಬಂಡಿ, ಬಂಡಿ ರಾಮಚಂದ್ರ,ಡಾ.ಅಬೂಬಕರ್,ಹರತಾಳು ಸಾಕಮ್ಮ,ಅಶ್ವಿನಿಕುಮಾರ್,ಡಿ.ಈ.ಮಧುಸೂದನ್.ಉಬೇದುಲ್ಲಾ ಷರೀಫ್,ಅಶೀಫ್,ಎಂ.ಎA.ಪರಮೇಶ್,ಜಿ.ಆರ್, ಗೋಪಾ¯ ಕೃಷ್ಣ,ಫ್ಯಾನ್ಸಿ ರಮೇಶ್. ಆಟೋ ಗಪೂರ್. ಇನ್ನಿತರರು ಉಪಸ್ಥಿತರಿದ್ದರು.

ವರದಿ: ಹರ್ಷ ಸಾಗರ
