ಸಾಗರ: ಬಿ.ಎಸ್.ಎನ್.ಡಿ.ಪಿ. ಸಂಘಟನೆಯ ವತಿಯಿಂದ ಉಪವಿಭಾಗಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಸಮಾಜದ ಬೇಡಿಕೆ.

ಈ ಮೂಲಕ ಬಿ.ಎಸ್.ಎನ್.ಡಿ.ಪಿ. ಸಂಘಟನೆಯ ವತಿಯಿಂದ ಮನವಿ ಮಾಡುವುದೇನೆಂದರೆ , ಈಡಿಗ , ಬಿಲ್ಲವ , ನಾಮಧಾರಿ , ಸಮಾಜದ 26 ಉಪ ಪಂಗಡಗನ್ನೊಳಗೊಂಡ ಸಮುದಾಯ ರಾಜ್ಯದಲ್ಲಿ ಸರಿಸುಮಾರು ಒಂದು ಕೋಟಿಯಷ್ಟು ಜನಸಂಖ್ಯೆ ಇದ್ದು , ರಾಜ್ಯದ ನಾಲ್ಕನೇ ಸ್ಥಾನದಲ್ಲಿರುವ ಸಮಾಜ. ಸರ್ಕಾರದ ನೀತಿ ನಿಯಮಗಳಿಗೆ ಬಲಿಯಾಗಿ ತಮ್ಮ ಕುಲವೃತ್ತಿಯಾದ ಮೂರ್ತೆಗಾರಿಕೆಯನ್ನು ಕಳೆದುಕೊಂಡು ಪರ್ಯಾಯವಾಗಿ ಮೊರೆಹೋದ ಸ್ವಂತ ಜಮೀನು ಇಲ್ಲದೆ ವ್ಯವಸಾಯದಲ್ಲಿ ಪ್ರಗತಿ ಕಾಣದೆ , ಶೈಕ್ಷಣಿಕವಾಗಿ ಪ್ರಗತಿ ಕಾಣದೆ ದೊಡ್ಡ ಪ್ರಮಾಣದ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದ ಪರಿಣಾಮವಾಗಿ , ಈ ಸಮಾಜದ ಶೇ. 75 ಕ್ಕಿಂತಲೂ ಆಧಿಕ ಭಾಗದ ಜನರು ಆರ್ಥಿಕವಾಗಿ , ಶೈಕ್ಷಣಿಕವಾಗಿ, ಸಮಾಜಿಕವಾಗಿ ಹಾಗೂ ರಾಜಕೀಯವಾಗಿ ಬಹಳಷ್ಟು ಹಿಂದುಳಿದ ಸಮುದಾಯವಾಗಿದೆ.

ಅದರ ಜೊತೆಗೆ ಇನ್ನಷ್ಟು ಧಾರ್ಮಿಕ ಕ್ಷೇತ್ರದಲ್ಲಿ ಅನ್ಯಾಯಳಿಗೆ ಒಳಗಾಗಿದೆ. ಆದ ಕಾರಣ ಈ ಸಮಾಜದ ಸಮಗ್ರ ಅಭಿವೃದ್ಧಿಗೆ ಸರ್ಕಾರ ನಮ್ಮ ಸಮಾಜದ ಈ ಕೆಳಕಂಡ ಬೇಡಿಕೆಗಳನ್ನು ತಕ್ಷಣ ಈಡೇರಿಸಬೇಕೆಂದು ವಿನಂತಿ.
ಸಮಾಜದ ಬೇಡಿಕೆಗಳು:-
- ನಮ್ಮ ಸಮಾಜದ ಸಿಗಂದೂರು ಶ್ರೀ ಚೌಡೇಶ್ವರಿ ದೇವಾಲಯಕ್ಕೆ ಸರ್ಕಾರ ನೇಮಿಸಿರುವ ಮೇಲ್ವಿಚಾರಣ ಹಾಗೂ ಸಲಹ ಸಮಿತಿಯನ್ನು ರದ್ದುಮಾಡಿ ದೇವಸ್ಥಾನದ ಧರ್ಮದರ್ಶಿಗಳಾದ ಹಾಗೂ ನಮ್ಮ ಸಮಾಜದ ಹಿರಿಯಾರಾದ ಪೂಜ್ಯಶ್ರೀ ಡಾ. ರಾಮಪ್ಪನವರ ಕುಟುಂಬದ ನೇತೃತ್ವದಲ್ಲಿ ನಡೆಯುತ್ತಿರುವ ದೇವಸ್ಥಾನ ಆಡಳಿತ ವಿಷಯದಲ್ಲಿ ಸರ್ಕಾರ ಯಾವುದೇ ಕಾರಣಕ್ಕೂ ಹಸ್ತಕ್ಷೇಪ ಮಾಡಬಾರದು .
- ಈಡಿಗ , ಬಿಲ್ಲವ ಹಾಗೂ ನಾಮಧಾರಿ ಸಮಾಜದ 26 ಉಪ ಪಂಗಡಗಳ ಒಳಗೊಂಡ ಸಮುದಾಯಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಿ ಕನಿಷ್ಠ 500 ಕೋಟಿ ರೂಪಾಯಿಗಳನ್ನು ಮೀಸಲಿಡಬೇಕು.
- ಶರಾವತಿ , ಲಿಂಗನಮಕ್ಕಿ ಮುಳಗಡೆಯ ಸಂತ್ರಸ್ಥರಿಗೆ ಹಾಗೂ ಭೂ ರಹಿತ ರೈತರಿಗೆ ಸರ್ಕಾರಿ ಜಮೀನನ್ನು ಮಂಜೂರು ಮಾಡಿ ಮತ್ತು ಮನೆ ನಿವೇಶನ ಹಕ್ಕುಪತ್ರ ನೀಡುವುದರ ಜೊತೆಗೆ ಸಮಾಜದ ಜನರಿಗೆ ಮನೆಯನ್ನು ನಿರ್ಮಾಣ ಮಾಡಿಕೊಡಬೇಕು.
- ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತುಳುನಾಡಿನ ಕಾರಣಿಕ ಪುರುಷರಾದ ಕೋಟಿ ಚೆನ್ನಯ್ಯರವರ ಹೆಸರಿಡಬೇಕು.
ಈ ಸಂದರ್ಭದಲ್ಲಿ ಸುಧಾಕರ್ ಕುಗ್ವೆ ಬಿಎಸ್ಎನ್ ಡಿಪಿ ಅಧ್ಯಕ್ಷರು ಸಾಗರ ತಾಲ್ಲೂಕು, ನಾಗರಾಜ್ ಕೈಸೋಡಿ
ಪ್ರಧಾನ ಕಾರ್ಯದರ್ಶಿ ಬಿಎಸ್ಎನ್ ಡಿಪಿ. ಶಿವಮೊಗ್ಗ ಜಿಲ್ಲೆ, ಮನೋಜ್ ಕುಮಾ ರ್ಪ್ರಧಾನ ಕಾರ್ಯದರ್ಶಿ ಬಿಎಸ್ಎನ್ ಡಿಪಿ . ಸಾಗರ ರವಿ ಕುಗ್ವೆ, ಲಕ್ಷಣ ಕೆ ಎಚ್, ಕನ್ನಪ್ಪ ಬೆಳಮಕ್ಕಿ, ಷಣ್ಮುಖ ಹುಚ್ಚಪ್ಪ, ತಿಮ್ಮಪ್ಪ, ಅಣ್ಣಪ್ಪ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

ವರದಿ: ಸಿಸಿಲ್ ಸೋಮನ್

