ಹೊಸನಗರ : BSNDP ಸಂಘಟನೆಯಿಂದ ಹೊಸನಗರ ತಾಲ್ಲೂಕು ತಹಸಿಲ್ದಾರವರಿಗೆ ನಮ್ಮ ಸಮಾಜದ ವಿವಿದ ಬೇಡಿಕೆಗಳನ್ನು ಇಡೇರಿಸುವಂತೆ ಮನವಿ ಸಲ್ಲಿಸಲಾಯಿತು.
ಇಂದು BSNDP ಸಂಘಟನೆಯಿಂದ ಹೊಸನಗರ ತಾಲ್ಲೂಕು ತಹಸಿಲ್ದಾರವರಿಗೆ ನಮ್ಮ ಸಮಾಜದ ವಿವಿದ ಬೇಡಿಕೆಗಳನ್ನು ಇಡೇರಿಸುವಂತೆ ಮನವಿ ಸಲ್ಲಿಸಲಾಯಿತು.
ಸಮಾಜದ ಬೇಡಿಕೆಗಳು:-
- ನಮ್ಮ ಸಮಾಜದ ಸಿಗಂದೂರು ಶ್ರೀ ಚೌಡೇಶ್ವರಿ ದೇವಾಲಯಕ್ಕೆ ಸರ್ಕಾರ ನೇಮಿಸಿರುವ ಮೇಲ್ವಿಚಾರಣ ಹಾಗೂ ಸಲಹ ಸಮಿತಿಯನ್ನು ರದ್ದುಮಾಡಿ ದೇವಸ್ಥಾನದ ಧರ್ಮದರ್ಶಿಗಳಾದ ಹಾಗೂ ನಮ್ಮ ಸಮಾಜದ ಹಿರಿಯಾರಾದ ಪೂಜ್ಯಶ್ರೀ ಡಾ. ರಾಮಪ್ಪನವರ ಕುಟುಂಬದ ನೇತೃತ್ವದಲ್ಲಿ ನಡೆಯುತ್ತಿರುವ ದೇವಸ್ಥಾನ ಆಡಳಿತ ವಿಷಯದಲ್ಲಿ ಸರ್ಕಾರ ಯಾವುದೇ ಕಾರಣಕ್ಕೂ ಹಸ್ತಕ್ಷೇಪ ಮಾಡಬಾರದು .
- ಈಡಿಗ , ಬಿಲ್ಲವ ಹಾಗೂ ನಾಮಧಾರಿ ಸಮಾಜದ 26 ಉಪ ಪಂಗಡಗಳ ಒಳಗೊಂಡ ಸಮುದಾಯಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಿ ಕನಿಷ್ಠ 500 ಕೋಟಿ ರೂಪಾಯಿಗಳನ್ನು ಮೀಸಲಿಡಬೇಕು.
- ಶರಾವತಿ , ಲಿಂಗನಮಕ್ಕಿ ಮುಳಗಡೆಯ ಸಂತ್ರಸ್ಥರಿಗೆ ಹಾಗೂ ಭೂ ರಹಿತ ರೈತರಿಗೆ ಸರ್ಕಾರಿ ಜಮೀನನ್ನು ಮಂಜೂರು ಮಾಡಿ ಮತ್ತು ಮನೆ ನಿವೇಶನ ಹಕ್ಕುಪತ್ರ ನೀಡುವುದರ ಜೊತೆಗೆ ಸಮಾಜದ ಜನರಿಗೆ ಮನೆಯನ್ನು ನಿರ್ಮಾಣ ಮಾಡಿಕೊಡಬೇಕು.
- ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತುಳುನಾಡಿನ ಕಾರಣಿಕ ಪುರುಷರಾದ ಕೋಟಿ ಚೆನ್ನಯ್ಯರವರ ಹೆಸರಿಡಬೇಕು.

ವರದಿ: ಸಿಸಿಲ್ ಸೋಮನ್

