ಸಾಗರ: ಕೋಮುಭಾವನೆ ಕೆರಳಿಸುವ ಕೆಲಸಕ್ಕೆ ಮುಂದಾದ ಕಿಡಿಗೇಡಿ ಯುವಕರ ಬಂಧನ.

ಸಾಗರ ಗ್ರಾಮಾಂತರ ಠಾಣೆಯಲ್ಲಿ ಇಕ್ಕೇರಿ ಗ್ರಾಮದ ವಾಸಿ ಕಲ್ಮನೆ ಗ್ರಾಮ ಪಂಚಾಯಿತಿ ಸದಸ್ಯ ಮಹಾಬಲೇಶ್ವರ ಬಿನ್ ಡಿ ಶ್ರೀಧರ ರವರು ನೀಡಿದ ದೂರಿನ ಮೇರೆಗೆ,ಅರ್ಜನ್,ಅರ್ಪತ್, ಅಬ್ದುಲ್ ತೌಸಿಫ್,ಅಕ್ಮಲ್ ಖಾನ್ ಎಲ್ಲಾ ವಾಸ ಎಸ್ ಎನ್ ನಗರದವರು.

ಇಕ್ಕೇರಿ ಅಘೋರೇಶ್ವರ ದೇವಾಲಯದ ಎದುರು ಈದ್’ಮಿಲಾದ್ ಬಾವುಟ ಕಟ್ಟಿದ ಆಟೋಗಳ ಸುತ್ತುವಿಕೆಗೆ ಸಂಬಂಧಿಸಿದಂತೆ ಇಕ್ಕೇರಿಯ ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯತಿ ಕಲ್ಮನೆಗೆ ಸೇರಿದ ಹಲವರು ಇಂದು ಸಾಗರದ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. ಆಟೋಗಳಲ್ಲಿ ಬಂದವರು ಇಕ್ಕೇರಿ ಅಘೋರೇಶ್ವರ ದೇವಾಲಯದ ಎದುರು ಮುಸ್ಲಿಂ ಧರ್ಮಕ್ಕೆ ಸೇರಿದ ಧ್ವಜಗಳನ್ನು ಹೊಂದಿದ ಆಟೋಗಳನ್ನು ಸುತ್ತಾಡಿಸಿದ್ದು,ಇದು ವ್ಯಾಟ್ಸಪ್ ಮೂಲಕ ವೈರಲ್ ಆಗಿದೆ. ಇದರ ಹಿಂದಿನ ಉದ್ದೇಶವೇನೆಂದು ತಿಳಿಯಬೇಕಿದೆ ಹಾಗೇಯೇ ಈ ಮುಸ್ಲಿಂ ಯುವಕರು ಈ ರೀತಿ ಏಕೆ ಮಾಡಿದರು ಎನ್ನುವ ಬಗ್ಗೆ ವಿಚಾರಣೆ ಮಾಡಬೇಕು ಹಾಗೇಯೇ ಕೋಮುಭಾವನೆ ಕೆರಳಿಸುವ ಕೆಲಸಕ್ಕೆ ಇವರು ಮುಂದಾಗಿದ್ದರಾ ಎನ್ನುವ ಅನುಮಾನ ಗ್ರಾಮಸ್ಥರಿಗೆ ಬಂದಿದ್ದು, ಸಾಗರದ ಗ್ರಾಮಾಂತರ ಪೋಲೀಸ್ ಠಾಣೆಯ ಸಿಪಿಐ ಗಿರೀಶ್‘ ರವರಿಗೆ ದೂರನ್ನು ನೀಡಿದರು.
ಇದೇ ರೀತಿಯಲ್ಲಿ ಮುಂದುವರೆದರೇ, ಮುಂದೊಂದು ದಿನ ಸಾಗರ ಅಶಾಂತಿಯ ಸಾಗರ ಆಗುವುದು ಕಟು ಸತ್ಯ ಈ ಅಶಾಂತಿಯ ಸಾಗರ – ಬರೀತಾ ಸಾಗರ ನಗರಕ್ಕೆ ಸೀಮಿತವಾಗದೇ ಸುತ್ತಮುತ್ತಲಿನ ಗ್ರಾಮಗಳಿಗೂ ಅಶಾಂತಿಯ ಕರಿನೆರಳು ಬೀಳೋದು ಖಚಿತ. ಈ ಶಾಂತಿ ಭಂಗ ಮಾಡುತ್ತಿರುವ ಕಿಡಿಗೇಡಿಗಳ ವಿರುದ್ಧ ಸಂಬಂಧ ಪಟ್ಟ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕಾನೂನು ಕ್ರಮಕ್ಕೆ ಮುಂದಾಗಬೇಕಾಗಿದೆ.
ಈ ಸಂದರ್ಭದಲ್ಲಿ ಮಾಪು, ಅಮರ್ ನಾಥ್ ಇಕ್ಕೇರಿ , ರಾಘವೇಂದ್ರ ಹುಲಿಮನೆ.ಪ್ರದೀಪ್ ಹಳೆಇಕ್ಕೇರಿ, ನಾಗರಾಜ್ ಕಲ್ಮನೆ. ಹರೀಶ್ ಇಕ್ಕೇರಿ ಹಾಗೂ ಗ್ರಾಮಸ್ಥರು ಮತ್ತು ಬಜರಂಗದಳ ಮತ್ತು ವಿಶ್ವಹಿಂದೂಪರಿಷತ್’ನ ಕಾರ್ಯಕರ್ತರು ಹಾಜರಿದ್ದರು.
ಸಾಗರ ” ಶಾಂತಿ ಸಾಗರ” ವಾಗಿಯೇ ಉಳಿಯಲಿ ಎಂಬುದೇ ಸಾಗರೀಕರ ಆಶಯ.

ವರದಿ: ಸಿಸಿಲ್ ಸೋಮನ್

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್- ಟೆಕ್ ಇಂಟರ್ನ್ಯಾಷನಲ್ Mob: 7619466155.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 7619466155.
