ಸಾಗರ: ಸಾಗರ ಬಿಜೆಪಿ ಕಚೇರಿಯಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆ.

ಸಾಗರ ಬಿಜೆಪಿ ಕಚೇರಿಯಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಸಾಗರ ನಗರ ಮಂಡಲ ಅಧ್ಯಕ್ಷರಾದ ಶ್ರೀ ಗಣೇಶ್ ಪ್ರಸಾದ್ ರವರು ಧ್ವಜಾರೋಹಣ ನೆರವೇರಿಸಿದರು.

ಮಾನ್ಯ ಶಾಸಕರಾದ ಶ್ರೀ ಹೆಚ್ ಹಾಲಪ್ಪ ಹರತಾಳುರವರು, ಮಾನ್ಯ ನಗರಸಭಾ ಅಧ್ಯಕ್ಷರಾದ ಶ್ರೀಮತಿ ಮಧುರ ಶಿವಾನಂದರವರು, ಉಪಾಧ್ಯಕ್ಷರಾದ ವಿ. ಮಹೇಶ್ ರವರು, ಸ್ಥಾಯಿ ಸಮಿತಿ ಅಧ್ಯಕ್ಷರಾದ ತುಕಾರಾಮ್ ಡಿ. ರವರು, ರಾಜ್ಯ ಹಿರಿಯ ನಾಗರಿಕರ ಪ್ರಕೋಷ್ಠ ಸದಸ್ಯರಾದ ಯು.ಹೆಚ್.ರಾಮಪ್ಪನವರು, ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿಗಳಾದ ಪ್ರಸನ್ನ ಕೆರೆಕೈರವರು, ಪಕ್ಷದ ಎಲ್ಲಾ ಸ್ಥರದ ಪದಾಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

ರಾಷ್ಟ್ರಪ್ರಶಸ್ತಿ ಭಾಜನರಾದ ಹೆಮ್ಮೆಯ ಯೋಗಪಟು ಕುಮಾರಿ ಸಂಧ್ಯಾರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ವರದಿ: ಸಿಸಿಲ್ ಸೋಮನ್

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್- ಟೆಕ್ ಇಂಟರ್ನ್ಯಾಷನಲ್ Mob: 7619466155.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 7619466155.
