ಸಾಗರ: ಡಿ.ಕೆ ಶಿವಕುಮಾರ್ ಅವರಿಗೆ ರಾಮ ಹಾಗು ಹಿಂದೂಗಳ ಬಗ್ಗೆ ಮಾತಾಡೋ ಯಾವ ನೈತಿಕತೆ ಇದೆ – ಕೆ.ಆರ್. ಗಣೇಶ್ ಪ್ರಸಾದ್, ಸಾಗರ ಬಿಜೆಪಿ ನಗರ ಮಂಡಲ ಅಧ್ಯಕ್ಷರು.

ಅಭಿನವ ಸುಬ್ರಹ್ಮಣ್ಯ ರ ವಾಲ್ ನಿಂದ 2012 ರಲ್ಲಿ ಎರಡು ಕೋಟಿಗೆ ಬೇರೆಯವರು ಖರೀದಿ ಮಾಡಲು ಒಪ್ಪಂದ ಆಗಿದ್ದ ಜಮೀನು ಈಗ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ 18 ಕೋಟಿಗೆ ಖರೀದಿ ಮಾಡಿರುವುದು ಸತ್ಯ.
2012 ರಲ್ಲಿ ಅದರ ಪಕ್ಕದ ಜಮೀನಿನ (ರಾಮಜನ್ಮಭೂಮಿ) ವಿವಾದ ಸುಪ್ರೀಂ ಕೋರ್ಟ್‌ನಲ್ಲಿತ್ತು , ಅಯೋಧ್ಯೆಯಲ್ಲಿ ಇವತ್ತು ನಡೆಯುತ್ತಿರುವ ಅಭಿವೃದ್ಧಿಯ ಮಹಾಪೂರವು ಇರಲಿಲ್ಲ ಹಾಗಾಗಿ ಆಗ ಎರಡು ಕೋಟಿಗೆ ಖರೀದಿ ಮಾಡುವ ಒಪ್ಪಂದ ಆಗಿತ್ತು .
ಆದರೆ ಸುಮಾರು ಹತ್ತು ವರ್ಷದ ನಂತರ .. ಈಗ ಪರಿಸ್ಥಿತಿ ಪೂರ್ಣ ಬದಲಾವಣೆ ಆಗಿದೆ , ಉತ್ತರ ಪ್ರದೇಶ ಸರಕಾರವೆ ರಿಯಲ್ ವ್ಯಾಲ್ಯುಗಿಂತ ನಾಲ್ಕು ಪಟ್ಟು ಹೆಚ್ಚು ಪರಿಹಾರ ಕೊಟ್ಟು ಭೂಮಿಯನ್ನು ಬಿಡಿಸಿಕೊಂಡಿದೆ .. ಹೀಗಿರುವಾಗ ಈಗ 20 ರಿಂದ 22 ಕೋಟಿ ಬೆಲೆಬಾಳುವ ಆಸ್ತಿಯನ್ನು 18 ಕೋಟಿಗೆ ಟ್ರಸ್ಟ್ ಖರೀದಿ ಮಾಡಿದೆ ಮತ್ತು ಅಷ್ಟು ಹಣದ ವ್ಯವಹಾರ ಬ್ಯಾಂಕ್ ಮೂಲಕವೇ ಮಾಡಿದೆ .
ಇನ್ನು 2012ರಲ್ಲಿ ಯಾವುದೋ ರಿಯಲ್ ಎಸ್ಟೇಟ್ ಮಾಫಿಗಳು ಕುದುರಿಸಿದ ಒಪ್ಪಂದದ ದಾಖಲೆ ಇಟ್ಟುಕೊಂಡು ಚಂಪತ್ ರಾಯರ ಮೇಲೆ ಆರೋಪ ಹೊರಿಸಲು ಬಂದರೆ ಭಾರತ ನಂಬುವುದು ಎಂದು ಅಂದುಕೊಂಡಿದ್ದೀರಾ .. ?? ತನ್ನ ತಾರುಣ್ಯ ವನ್ನೆ ಸಂಘಟನೆಗೆ ಸಮರ್ಪಣೆ ಮಾಡಿದ ಚಂಪತ್ ರಾಯರಿಗೆ ಅವರ ಜೀವನದ ಸಂಧ್ಯಾ ಕಾಲದಲ್ಲಿ ರಾಷ್ಟ್ರ ಮಂದಿರ ನಿರ್ಮಾಣದ ಹೊಣೆಯನ್ನು ಸಂಘಟನೆ ಅವರ ಹೆಗಲಿಗೆ ಹೊರಿಸಿದೆ … ಇಂತಹ ಪುಣ್ಯ ಕಾರ್ಯದಲ್ಲಿ ಎಳ್ಳಷ್ಟೂ ಲೋಪವನ್ನು ಮಾಡವುದು ಬಿಡಿ .. ಅಂತಹ ಯೋಚನೆಯನ್ನು ಅವರು ಅರೆಕ್ಷಣವು ಮಾಡುವುದಿಲ್ಲ ಎನ್ನುವ ನಂಬಿಕೆ ನಮಗಿದೆ .
ಇನ್ನು ಆರೋಪ ಮಾಡಿದ ಸಂಜಯ ಸಿಂಗರ ಯೋಗ್ಯತೆ ಏನು … ???
ರಾಮಜನ್ಮಭೂಮಿಯಲ್ಲಿ ಬಾಬರಿ ಮಸೀದಿ ತಲೆ ಎತ್ತಿ ನಿಂತಿದ್ದಾಗ .. ಅದು ಬಾಬರ ಕಟ್ಟಿದ ಜಾತ್ಯಾತೀತತೆಯ ಸಂಕೇತ ಎಂದು ಹೊಗಳಿ ಹಾಡಿದ್ದೊ … ???
ಹಿಂದೂವಿನ ಸ್ವಾಭಿಮಾನ ಜಾಗೃತವಾಗಿ ಬಾಬರಿ ನೆಲಕ್ಕುರುಳಿದಾಗ .. ಕೋಮುವಾದಿಗಳು ಎಂದು ರಾಮಭಕ್ತರನ್ನು ಜರೆದಿದ್ದೊ…. ??
ಮಂದಿರ ನಿರ್ಮಾಣದ ತೀರ್ಪು ಬಂದಾಗ ಇದು ಜಾತ್ಯಾತೀತತೆಯ ಸಾವು ಎಂದು ಭಾರತವನ್ನು ಅವಮಾನಿಸಿದ್ದೊ .. .. ???
ಅಲ್ಲೆಲ್ಲೂ ಕಾಣದ ರಾಮ ಭಕ್ತಿ …. ರಾಮನಿಗೆ ಭಾರತದ ಕೋಟಿ ಕೋಟಿ ಮನಗಳು ಅರ್ಪಿಸಿದ ನಿಧಿಯ ಮೇಲೆ ಯಾಕೆ ಬಂತು … ??

ವರದಿ: ಸಿಸಿಲ್ ಸೋಮನ್

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್ – ಟೆಕ್ ಇಂಟರ್ನ್ಯಾಷನಲ್ Mob: 7619466155.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 7619466155.
