ಸಾಗರ: ಸಾಗರ ನಗರದಲ್ಲಿ ಮೂರು ಕರೋನ ಪಾಸಿಟಿವ್, ಸಾಗರದ ಹಲವು ವಾರ್ಡುಗಳು ಸೀಲ್ ಡೌನ್ ಆಗುವುದು ಖಚಿತ.

ಸಾಗರ ನಗರದಲ್ಲಿ 3 ಕರೋನ ಪಾಸಿಟಿವ್, ಗ್ರಾಮಾಂತರ ಭಾಗದಲ್ಲಿ 27 ಪಾಸಿಟಿವ್, ಸಾಗರದ ಹಲವು ವಾರ್ಡುಗಳು ಸೀಲ್ ಡೌನ್ ಆಗುವುದು ಖಚಿತ.

ಸಾಗರದಲ್ಲಿ ದಿನದಿನಕ್ಕೂ ಹೆಚ್ಚಾಗುತ್ತಿದೆ ಕೊರೊನಾ ಸೋಂಕು ಆದರೂ ಎಚ್ಚೆತ್ತುಕೊಳ್ಳದ ಜನ ತಿರುಗಾಟ ವೋ ತಿರುಗಾಟ, ಮಾಸ್ಕ ಧರಿಸಿ ಅಂತರ ಕಾಪಾಡಿ ಅನಾವಶ್ಯಕ ವಾಗಿ ತಿರುಗಾಡಬೇಡಿ ಎಂದು ಸಾಗರ ಪೊಲೀಸರು ಎಚ್ಚರಿಕೆ ಕೊಟ್ಟರು ಕೂಡ ಎಚ್ಚೆತ್ತುಕೊಳ್ಳದೆ ಕೋವಿಡ್-19 ರ ನಿಯಮಗಳ ಉಲ್ಲಂಘನೆ ಮಾಡಿರುವವರ ವಿರುದ್ಧ ಕೇಸು ದಾಖಲಿಸಿರುತ್ತಾರೆ.

ಈ ಕಾರ್ಯಾಚರಣೆಯಲ್ಲಿ ಸಾಗರ ಪೇಟೆ ಠಾಣೆ ಪೋಲಿಸ್ ಇನ್ಸ್ಪೆಕ್ಟರ್ ಅಶೋಕ್ ಕುಮಾರ್. ಸಬ್ ಇನ್ಸ್ಪೆಕ್ಟರ್ ಟಿ. ಡಿ. ಸಾಗರ್ಕರ್.ಸಿಬ್ಬಂದಿಗಳಾದ ಕಾಳನಾಯ್ಕ್. ಮಲ್ಲೇಶ್.ಜಿ. ಕೃಷ್ಣಪ್ಪ ಪ್ರವೀಣ್ ಕುಮಾರ್.ಅಬ್ದುಲ್ ಶುಕುರ್.ವಿಶ್ವನಾಥ್.ಸೈದು ನದಾಫ್ ಮೊದಲಾದವರು ಉಪಸ್ಥಿತರಿದ್ದರು.
ಮಾಸ್ಕ ಧರಿಸಿ ಅಂತರ ಕಾಪಾಡಿ ಅನಾವಶ್ಯಕ ವಾಗಿ ತಿರುಗಾಡಬೇಡಿ, ಕೋವಿಡ್ ನಿಯಮಗಳನ್ನು ಪಾಲಿಸಿ. ಕೊರೋನ ಮುಕ್ತ ಭಾರತವನ್ನು ನಿರ್ಮಿಸಲು ಸಂಕಲ್ಪ ಮಾಡೋಣ.

ವರದಿ: ಸಿಸಿಲ್ ಸೋಮನ್

