ಬೆಂಗಳೂರು: ಕಾಂಗ್ರೆಸ್ ಸಂಸ್ಥಾಪನಾ ದಿನದಂದು ಈ ವರ್ಷ ಸಂಘಟನೆ ವರ್ಷ ಅಂತಾ ಘೋಷಿಸಿ, 100 ಕ್ಷೇತ್ರಗಳಲ್ಲಿ ಪಕ್ಷದ ವತಿಯಿಂದ ನಡೆಸಲು ನಿರ್ಧರಿಸಿದ್ದೇವೆ – ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್.
ಕಾಂಗ್ರೆಸ್ ಸಂಸ್ಥಾಪನಾ ದಿನದಂದು ಈ ವರ್ಷ ಸಂಘಟನೆ ವರ್ಷ ಅಂತಾ ಘೋಷಿಸಿ, 100 ಕ್ಷೇತ್ರಗಳಲ್ಲಿ ಪಕ್ಷದ ವತಿಯಿಂದ ನಡೆಸಲು ನಿರ್ಧರಿಸಿದ್ದೇವೆ.
ಎಲ್ಲಿ ನಮ್ಮ ಶಾಸಕರಿಲ್ಲವೋ ಅಲ್ಲಿ ನಾವು ಈ ಹೋರಾಟ ನಡೆಸುತ್ತಿದ್ದೇವೆ. ಇದರ ಅಂಗವಾಗಿ 3ನೇ ತಾರೀಕು ಕಾರ್ಯಕ್ರಮ ಆರಂಭಿಸುತ್ತಿದ್ದೇವೆ. 1ನೇ ತಾರೀಕು ದೇವಾಲಯ ಹಾಗೂ ದರ್ಗಾಕ್ಕೆ ಭೇಟಿ ಮಾಡಿ ಪೂಜೆ ಪ್ರಾರ್ಥನೆ ಸಲ್ಲಿಸಿ, 3ರಂದು ಕಾಂಗ್ರೆಸ್ ಕಚೇರಿಯಿಂದ ಬೆಳಗ್ಗೆ 5 ಗಂಟೆಗೆ ಹೊರಟು ದೇವನಹಳ್ಳಿಗೆ ತಲುಪಿ ಮೊದಲ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ.
ನಂತರ ಸಂಜೆ 3 ಗಂಟೆಗೆ ಚಿಕ್ಕಬಳ್ಳಾಪುರದಲ್ಲಿ ಎರಡನೆ ಕಾರ್ಯಕ್ರಮ ಮಾಡುತ್ತೇವೆ.
ಪ್ರತಿ ಕ್ಷೇತ್ರದಲ್ಲೂ ಜನರ ಮಧ್ಯೆ ಈ ಕಾರ್ಯಕ್ರಮ ಮಾಡುತ್ತೇವೆ. ಈ ಸರ್ಕಾರದಿಂದ ಈ ರಾಜ್ಯದಲ್ಲಿ ಯಾವ ವರ್ಗದ ಜನರಿಗೆ ತೊಂದರೆಯಾಗಿದೆ, ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆ, ವರ್ತಕರು, ರೈತರು, ಕಾರ್ಮಿಕರು ಎಲ್ಲ ವರ್ಗಕ್ಕೂ ಅನ್ಯಾಯ ಆಗುತ್ತಿದೆ.
ತೆರಿಗೆ ವಿಚಾರ ಆಗಿರಲಿ ರಾಜ್ಯದ ಪ್ರತಿ ಕುಟುಂಬಕ್ಕೂ ಒಂದಲ್ಲ ಒಂದು ರೀತಿ ತೊಂದರೆ ನೀಡಿದೆ. ಈ ವಿಚಾರವಾಗಿ ಜನರಲ್ಲಿ ಎಚ್ಚರಿಸಿ, ಅವರ ಧ್ವನಿಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮುಟ್ಟಿಸುತ್ತೇವೆ.
ಎಲ್ಲ ನಗರಗಳ ಮುಖ್ಯರಸ್ತೆಯಲ್ಲಿ ಈ ಪಾದಯಾತ್ರೆ ನಡೆಯುತ್ತದೆ. ಎಲ್ಲ ನಾಯಕರು ಭಾಗವಹಿಸುತ್ತಾರೆ. ನಂತರ ಒಂದು ಜಾಗದಲ್ಲಿ ಭಾಷಣ ಮಾಡುತ್ತಾರೆ.
ಅಧಿವೇಶನ ನಡೆಯಲಿದ್ದು, ಅದಕ್ಕೆ ತೊಂದರೆ ಆಗದಂತೆ ನಮ್ಮ ಕಾರ್ಯಾಧ್ಯಕ್ಷರುಗಳಿಗೆ ಜಿಲ್ಲೆಗಳ ಜವಾಬ್ದಾರಿ ನೀಡಲಾಗಿದೆ. ಜಿಲ್ಲಾಧ್ಯಕ್ಷರ ಜತೆ ಸೇರಿ ಈ ಕಾರ್ಯಕ್ರಮಕ್ಕೆ ತಯಾರಿ ನಡೆಸುತ್ತಾರೆ. ನೀವುಗಳು ಕೂಡ ಇದಕ್ಕೆ ಸಹಕಾರ ನೀಡಬೇಕು.
ಪ್ರಸನ್ನಕುಮಾರ್ ಪಕ್ಷ ಸೇರ್ಪಡೆ
ಪುಲಕೇಶಿ ನಗರದ ನಮ್ಮ ಮಾಜಿ ಶಾಸಕರಾದ ಬಸವಲಿಂಗಪ್ಪನವರ ಸುಪುತ್ರ ಪ್ರಸನ್ನಕುಮಾರ್ ಅವರು ನಮ್ಮ ಪಕ್ಷಕ್ಕೆ ಸೇರಲು ಬಂದಿದ್ದಾರೆ. ಅವರ ಸೇರ್ಪಡೆಗೆ ನಮ್ಮ ಸಮಿತಿಯು ಒಪ್ಪಿಗೆ ನೀಡಿದೆ. ಎಲ್ಲ ನಾಯಕರ ಒಪ್ಪಿಗೆ ಮೇರೆಗೆ ಪಕ್ಷ ಈ ನಿರ್ಧಾರ ತೆಗೆದುಕೊಂದಿದೆ.
ಡಿ.ಜೆ ಹಳ್ಳಿ ಘಟನೆಯಲ್ಲಿ ಸಂಪತ್ ರಾಜ್ ಅವರು ಯಾವುದೇ ರೀತಿಯಲ್ಲೂ ಭಾಗಿಯಾಗಿಲ್ಲ. ಬಿಜೆಪಿ ಸರ್ಕಾರ ಕಾಂಗ್ರೆಸ್ ಪಕ್ಷದ ಮೇಲೆ ಆರೋಪ ಮಾಡಲು ಈ ರೀತಿ ಹೇಳುತ್ತಿದೆ. ಈ ಘಟನೆಯಲ್ಲಿ ಯಾವುದೇ ಕಾಂಗ್ರೆಸ್ ನಾಯಕರು ಭಾಗಿಯಾಗಿಲ್ಲ. ಅಖಂಡ ಶ್ರೀನಿವಾಸಮೂರ್ತಿ ಅವರು ವೈಯಕ್ತಿಕ ವಿಚಾರವಾಗಿ ಮಾತನಾಡಿದ್ದಾರೆ.
ಮೈಸೂರು ಪಾಲಿಕೆ
ಮೈಸೂರು ಪಾಲಿಕೆ ವಿಚಾರದಲ್ಲಿ ಜೆಡಿಎಸ್ ನಮಗೆ ಮೇಯರ್ ಸ್ಥಾನ ಬಿಟ್ಟುಕೊಡಬೇಕಾಗಿತ್ತು. ಅವರು ಕೊಟ್ಟಿಲ್ಲ. ಅವರು ಯಾವ ಕಾರಣಕ್ಕೆ ತಮ್ಮ ಮಾತು ಉಳಿಸಿಕೊಂಡಿಲ್ಲ ಎಂದು ಗೊತ್ತಿಲ್ಲ. ಈ ವಿಚಾರವಾಗಿ ವರದಿ ನೀಡುವಂತೆ ಧೃವನಾರಾಯಣ್ ಅವರಿಗೆ ವರದಿ ಕೇಳಿದ್ದು, ಅವರು ವರದಿ ನೀಡುತ್ತಾರೆ. ಅದಾದ ನಂತರ ನಾನು ಪ್ರತಿಕ್ರಿಯೆ ನೀಡುತ್ತೇನೆ.
ನಮ್ಮ ಒಪ್ಪಂದವನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಸಾರಾ ಮಹೇಶ್ ಅವರ ಜತೆ ಮಾತನಾಡಿದ್ದೆ.

ವರದಿ: ಸಿಸಿಲ್ ಸೋಮನ್

