ಬೆಂಗಳೂರು: ಬೆಂಗಳೂರಿನ ಚಿತ್ರಕಲಾ ಪರಿಷತ್ ನಲ್ಲಿ ಹೊಸನಗರ ವಿಧಾನಸಭಾ ಕ್ಷೇತ್ರ ಹಾಗೂ ಪಶ್ಚಿಮಘಟ್ಟಗಳ ವ್ಯಾಪ್ತಿಗೆ ಬರುವ ವಿಧಾನಸಭಾ ಕ್ಷೇತ್ರಗಳ ಮರು ವಿಂಗಡಣೆಯ ಹೋರಾಟದ ರೂಪುರೇಷೆ ಬಗ್ಗೆ ಚಿಂತನಾ ಸಭೆ.

ಶಾಸಕರಾದ ಶ್ರೀಯುತ ಹೆಚ್. ಹಾಲಪ್ಪ ಹರತಾಳು ರವರ ನೇತೃತ್ವದಲ್ಲಿ ಇಂದು ಬೆಂಗಳೂರಿನ ಚಿತ್ರಕಲಾ ಪರಿಷತ್ ನಲ್ಲಿ ಹೊಸನಗರ ವಿಧಾನಸಭಾ ಕ್ಷೇತ್ರ ಹಾಗೂ ಪಶ್ಚಿಮಘಟ್ಟಗಳ ವ್ಯಾಪ್ತಿಗೆ ಬರುವ ವಿಧಾನಸಭಾ ಕ್ಷೇತ್ರಗಳ ಮರು ವಿಂಗಡಣೆಯ ಹೋರಾಟದ ರೂಪುರೇಷೆ ಬಗ್ಗೆ ಚಿಂತನಾ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಭೆಯಲ್ಲಿ
ಮಾಜಿ ಸಭಾಪತಿ ಯವರಾದ ಬಿ.ಎಲ್. ಶಂಕರ್ ರವರು ಮಾತನಾಡಿ ಕ್ಷೇತ್ರಗಳ ಅವೈಜ್ಞಾನಿಕ ಮರು-ವಿಂಗಡಣೆ ಮತ್ತು ಮುಂದಿರುವ ಮಾರ್ಗೋಪಾಯಗಳ ಬಗ್ಗೆ ಮಾಹಿತಿ ನೀಡಿದರು. ಮಾಜಿ ಸ್ಪೀಕರ್ ಕೆ.ಜಿ.ಭೋಪಯ್ಯ ನವರು ಮರು ವಿಂಗಡಣೆಯಿಂದ ಮಲೆನಾಡಿನ ಮೇಲಾಗಿರುವ ಪರಿಣಾಮಗಳ ಬಗ್ಗೆ ವಿವರಿಸಿದರು.

ಅತೀ ಶೀಘ್ರವಾಗಿ ( ಅಧಿವೇಶನದ ಸಮಯದಲ್ಲೇ) ಪಶ್ಚಿಮ ಘಟ್ಟಗಳ
ಪ್ರದೇಶದ ಸರ್ವ ಶಾಸಕರ ಸಭೆಯನ್ನು ಕರೆಯುವಂತೆ ಸಭಾಧ್ಯಕ್ಷರಲ್ಲಿ ವಿನಂತಿಸಿಕೊಳ್ಳುವ ಬಗ್ಗೆ ಚರ್ಚಿಸಲಾಯಿತು.
ಮಾನ್ಯ ಮುಖ್ಯಮಂತ್ರಿಗಳನ್ನು & ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿಯವರನ್ನು ನಿಯೋಗದೊಂದಿಗೆ ಭೇಟಿಮಾಡುವ ಬಗ್ಗೆಯೂ ಚರ್ಚಿಸಲಾಯಿತು.
ಈ ಸಂಧರ್ಭದಲ್ಲಿ ಮಾಜಿ ಶಾಸಕರಾದ
ಬಿ. ಸ್ವಾಮಿರಾವ್ ತಾ ಪಂ ಅಧ್ಯಕ್ಷರಾದ
ವೀರೇಶ್ ಆಲವಳ್ಳಿ ರವರು, ಜಿ ಪಂ ಸದಸ್ಯರಾದ ಸುರೇಶ್ ಸ್ವಾಮಿರಾವ್, ಹಿರಿಯ ಹೋರಾಟಗಾರರಾದ ಟಿ.ಆರ್. ಕೃಷ್ಣಪ್ಪ, ಮಹೇಶ್ ದೇವರಸಲಿಕೆ ಹಿರಿಯರಾದ
ಕಲ್ಯಾಣಪ್ಪ ಗೌಡ್ರು, ಎಂ.ಡಿ.ಉಸ್ಮಾನ್, ಗ್ರಾ.ಪಂ. ಸದಸ್ಯರಾದ ಸಚಿನ್ ಗೌಡ ಗರ್ತಿಕೆರೆ, ಎಂ.ಎ.ಸಿ ನಿರ್ದೇಶಕರಾದ ತೀರ್ಥೇಶ್, ವಾಟಗದ್ದೆ ದಿನೇಶ್, ಕುಮಾರ ಸ್ವಾಮಿ ವಡಸೊಳ್ಳಿ,ಶಾಬುದ್ದೀನ್, ಸತೀಶ್, ಉಮೇಶ್, ಪೀತಂ,ವಿನಯ್,ರಾಜೇಶ್ ಜೈನ್ ಇತರರು ಉಪಸ್ಥಿತರಿದ್ದರು.

ವರದಿ: ಹರ್ಷ ಸಾಗರ

