ಸಾಗರ: ಎಣ್ಣೆಹೊಳೆಗೆ ಶೀಘ್ರದಲ್ಲಿ ಲಾಂಚ್ ವ್ಯವಸ್ಥೆ – ಶಾಸಕ ಹೆಚ್.ಹಾಲಪ್ಪ.
ಶಾಸಕರಾದ ಹೆಚ್.ಹಾಲಪ್ಪ ನವರು ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಅ.ಮು.ಕಾರ್ಯದರ್ಶಿ ಯವರನ್ನು ಭೇಟಿಯಾಗಿ ಚನ್ನಗೊಂಡ ಗ್ರಾ.ಪಂ ಕೇಂದ್ರ ಸ್ಥಾನ ಕೋಗಾರು ಗ್ರಾಮಕ್ಕೆ ಸಂಪರ್ಕಿಸಲು, ಶಿಗ್ಗಲು ಗ್ರಾಮದ ರೈತರು, ಸಾರ್ವಜನಿಕರು ಕುದುರೂರು, ಸುಳ್ಳಳ್ಳಿ, ಕಟ್ಟಿನಕಾರು ಮೂಲಕ 40Km ಕ್ರಮಿಸಿ ಕೋಗಾರು ತಲುಪಬೇಕಾಗಿದೆ.
ಶಿಗ್ಗಲು-ಕಟ್ಟಿನಕಾರು ಮಧ್ಯದ ಶರಾವತಿ ಹಿನ್ನೀರಿನ ಎಣ್ಣೆಹೊಳೆಗೆ ಲಾಂಚ್ ಸಂಪರ್ಕ ಒದಗಿಸುವುದರಿಂದ 3Km ಅಂತರದಲ್ಲಿ ಕೋಗಾರು ಸಂಪರ್ಕಿಸಬಹುದು ಅಲ್ಲದೆ ಸಕಾಲದಲ್ಲಿ ಸಾರ್ವಜನಿಕರ ಕಾರ್ಯಗಳು ಆಗುವುದರಿಂದ, ಎಣ್ಣೆಹೊಳೆಗೆ ಶೀಘ್ರದಲ್ಲಿ ಲಾಂಚ್ ವ್ಯವಸ್ಥೆ ಕಲ್ಪಿಸುವ ಬಗ್ಗೆ ಚರ್ಚಿಸಿ ಮನವಿ ಮಾಡಿದರು.

ವರದಿ: ಗೌತಮ್ ಕೆ.ಎಸ್

