ಬದುಕಲ್ಲಿ ತೀರದ ನೂರಾರು ಆಸೆಗಳು, ಈಡೇರದ ಕನಸುಗಳು,ಕೆಟ್ಟ ಹಂಬಲ ಎಲ್ಲವೂ ಮೇಳೈಸಿ ಅದರ ಜೊತೆಗೆ ಅಸಹಾಯಕತೆ ತಾಂಡವ ಆಡಿದಾಗ, ತೀವ್ರ ಖಿನ್ನತೆ ನೆಲೆ ಮಾಡುತ್ತದೆ. ಖಿನ್ನತೆ ಎದುರಾದಾಗ ಮನುಷ್ಯ ಸಾಮಾನ್ಯವಾಗಿ ಕುಗ್ಗಿ ಹೋಗ್ತಾನೆ, ಏನೂ ತೋಚದೇ, ದಿಕ್ಕು ಕಾಣದೆ ಎಲ್ಲೆಡೆ ತೀವ್ರ ಅಂಧಕಾರ ಮಾತ್ರ ಗೋಚರಿಸುವುದು. ಅಂತಹ ಅಂಧಕಾರದಲ್ಲಿ ಯಾರು ಬೆಳಕನ್ನು ಕಂಡು, ಮುಂದೆ ಸುಮಾರ್ಗವನ್ನ ರೂಪಿಸಿಕೊಳ್ಳುತ್ತಾರೋ ಅವರೆ ನಿಜವಾದ ಜಯಶೀಲರು, ಅವರ ಬದುಕು ಇತರರಿಗೆ ಮಾದರಿಯಾಗುವುದರ ಜೊತೆಗೆ ಅವರ ಮುಂದಿನ ನಿಲುವು ನಿರ್ಣಯಗಳು ಘನ ಘಟ್ಟಿಯಾಗಿರುವುದು. “ಇದು ಎಲ್ಲರಿಗೂ ಅನ್ವಯಿಸುವ ಜಗದ ನಿಯಮ.
ದಾರಿ ಕಂಡಿಲ್ಲ ಎಂದಾಕ್ಷಣ ಮುಂದೆ ದಾರಿಯಿಲ್ಲವೆಂದಲ್ಲ, ಸಂಯಮ ಕಳೆದುಕೊಂಡು, ಆಲೋಚನೆಯಲ್ಲಿ ನಕಾರಾತ್ಮಕ ಚಿ೦ತನೆಯನ್ನ ಬೆಳಸಿಕೊಂಡು ವಿರಸವನ್ನ ಸೂರಗಿಸಿದ್ರೆ ಎಲ್ಲವೂ ಅಂತ್ಯವೆನ್ನಿಸಿ, ತೊಂದರೆಗಳಿಗೆ ಮುಕ್ತಿ ನೀಡದೆ ಬದಲಿಗೆ ಸಾವಿನ ಮೊರೆ ಹೋಗವ ಧೃಡ ನಿರ್ಧಾರಕ್ಕೆ ಬದ್ದರಾಗ್ತಾರೆ.
ಸ್ವಿಮ್ಮಿಂಗ್ ಪೂಲ್ ನಲ್ಲಿ ಈಜತೀವಿ, ಬದುಕಲ್ಲೂ ಈಜ ಬೆಕು….
“ಅತಿ ವೇಗ ತಿಥಿ ಬೇಗ” ಅನ್ನೋ ಫಲಕಗಳನ್ನ ನಾವು ಹೈವೇ ಗಳಲ್ಲಿ ನೋಡಿರ್ತಿವಿ, ಈಗಿನ ಪೀಳಿಗೆಯ ಹಲವರು ಬದುಕು ಕಟ್ಟಿಕೊಳ್ಳುವ ಪರಿಗೆ ಇದು ಮನವರಿಕೆಯಾಗಬೇಕು, ಅದರ ಅರಿವು ಮತ್ತು ಪಾಲನೆ ಇಲ್ಲದ ಕಾರಣವಾಗಿ ಅನಗತ್ಯ ಹತಾಶೆ, ಜಿಗುಸ್ಪೆಗೆ ಒಳಗಾಗಿ ಅಕಾಲಿಕ ಮರಣ “ಆತ್ಮಹತ್ಯೆಗೆ” ಈಡು ಮಾಡಿಕೊಟ್ಟಿದೆ.
ಕನ್ನಡದ ರಿಯಾಲಿಟಿ ಶೋ ಬಿಗ್ ಬಾಸ್ 2ರ ಸ್ಪರ್ಧಿಯಾದ ನಟಿ ಹಾಗೂ ನೃತ್ಯಗಾರತಿ ಜಯಶ್ರೀ ರಾಮಯ್ಯಾಳ ಆತ್ಮಹತ್ಯೆ ಎಲ್ಲರಿಗೂ ಒಂದು ಪಾಠ ಕಲಿಸುವ ಸಂಗತಿಯಾಗಬೇಕು. ಬಿಗ್ ಬಾಸ್ ಶೋ ಬಳಿಕ ತಕ್ಕ ಮಟ್ಟಿನ ಖ್ಯಾತಿ ಮತ್ತು ಸಿನಿಮಾಗಳಲ್ಲಿ ನಟಿಸುವ ಅವಕಾಶ ಎರಡು ಸಿಕ್ಕಿತು, ಸಿನಿಮಾಗಳಲ್ಲಿ ಅಷ್ಟಾಗೆನು ಹೆಸರು ಮಾಡಲಾಗಲಿಲ್ಲ. ತನಗೆ ಹಲವರಿಂದ ಮೋಸವಾಗಿದೆ, ನoಬಿದವರೆ ಬೆನ್ನಿಗೆ ಚೂರಿ ಹಾಕಿದ್ದಾರೆ, ನನಗೆ ಬದುಕು ಸಾಕಾಗಿದೆ ಅಂತ ವಿಡಿಯೋ ಮಾಡಿ ಎರಡು ತಿಂಗಳ ಕೆಳಗೆ ಅವರ ಫೆಸ್ ಬುಕ್ ಖಾತೆಯಲ್ಲಿ ಹಾಕಿದ್ರು, ಮನಸ್ಸೂ ಹತೋಟಿ ಕಳೆದುಕೊಂಡಿತ್ತು, ಕಟ್ಟಿಕೊಂಡ ಕನಸುಗಳನ್ನ ನಿಭಯಿಸುವಲ್ಲಿ ಸೋತರು.ಬಣ್ಣದ ಲೋಕದಲ್ಲಿ ಕನಸಿನನ್ನ ಬೆನ್ನಿಗೆ ಕಟ್ಟಿಕೊಂಡು ಓಡೋರಿಗೆ ತಾಳ್ಮೆ ಮತ್ತು ಪ್ರಜ್ಞಾವಂತಿಕೆ ಬಲು ಮುಖ್ಯ.ಈಕೆಯ ಸಾವಿಗೆ ನಮ್ಮ ಕಂಬನಿಯಿದೆ ಆದ್ರೆ ಆಕೆಯ ನಿರ್ಣಯ ಸೂಕ್ತವಾದದ್ದಲ್ಲ. ಖಿನ್ನತೆಗೆ ಒಳಗಾದವರು ತಮ್ಮ ಹತ್ತಿರದವರ ಬಳಿ ಅಥವಾ ಮನೋವೈದ್ಯರ ನೆರವು ಪಡೆದು ಎಲ್ಲವನ್ನೂ ಮನಬಿಚ್ಚಿ ಮಾತಾಡಿದ್ರೆ ತಕ್ಕ ಪರಿಹಾರ ಮಾರ್ಗ ಕಾಣ ಬಹುದು…..

ವರದಿ: P. ಘನಶ್ಯಾಮ್ – ಬೆಂಗಳೂರು

