ಬೆಂಗಳೂರು: ಬಸವನಗುಡಿಯಲ್ಲಿ ಭಾನುವಾರ ಬೆಳ್ಳಂಬೆಳಗ್ಗೆ ರಜೆಯ ದಿನದಂದು ತಂಡೋಪತಂಡವಾಗಿ ಜನ ಸೇರಿದ್ರೆ, ಸಾಮಾನ್ಯವಾಗಿ ಅದು ವಿದ್ಯಾರ್ಥಿ ಭವನದ ಮುಂದೆ ದೋಸೆ ಸವಿಯೋಕೆ ಇಲ್ಲಾಂದ್ರೆ ಡಿ.ವಿ.ಜಿ. ರೋಡ್ ಹಾಗೂ ಗಾಂಧಿ ಬಜಾರ್ ಮಾರುಕಟ್ಟೆಯಲ್ಲಿ ಹಬ್ಬ ಹರಿದಿನದ ಶಾಪಿಂಗ್ ಕಾರಣವಾಗಿ..
ಆದ್ರಿಲ್ಲಿ ಒಂದಷ್ಟು ಪ್ರಜ್ಞಾವಂತರ ಗುಂಪು ಸೇರಿ ಮೊಳೆ ಕೇಳ್ತಾ ಇದ್ರು!!

ಅನಗತ್ಯವಾಗಿ ತುಂಬಾ ಮಾತಾಡೋರನ್ನ “ತಲೆಗೆ ಮೊಳೆ ಹೊಡಿತಾನೆ!” ಅಂತಾರೆ, ಅವರನ್ನಾದರು ಸಹಿಸಿಕೊಳ್ಳಬಹುದು ಆದ್ರೆ ಇಲ್ಲಿ ಕೇಲುವು ದುಷ್ಕರ್ಮಿಗಳು ತಮ್ಮ ಸ್ವಾರ್ಥಕ್ಕಾಗಿ, ಜಾಹಿರಾತು ಅನ್ನೋ ಹೆಸರಲ್ಲಿ ನೂರಾರು ವರ್ಷಗಳಿಂದ ಸ್ವಚ್ಛ ಗಾಳಿ ನೆರಳು ನೀಡ್ತಿರೋ ಹೆಮ್ಮರಗಳಿಗೆ “ಮೊಳೆ” ಹೊಡೆದು ಚೀಟಿ ಫಲಕಗಳನ್ನ (poster & pamphlet)ಅಂಟಿಸುವ ಅವಿವೇಕದ ಕೆಲಸ ಮಾಡಿದ್ದಾರೆ. ಹತ್ತಾರು ಕೊಂಬೆಗಳುಳ್ಳ ಮರದಲ್ಲಿ ಸಾವಿರಾರು ಮೂಳೆ ಸೂಜಿಗಳನ್ನ ಚುಚ್ಚಿ ಜೀವಂತವಿರುವ ಮರಗಳಿಗೆ ರಣಹಿಂಸೆ ನೀಡಿರುವ ತಿಳಿಗೇಡಿಗಳು. ಹೊಗೆಮಾಲಿನ್ಯದ ಜೊತೆಗೆ ಮರಕ್ಕೆ ಮಾನವನಿಂದ ಮತ್ತೊಂದು ಉಡುಗೊರೆ!

ಸರಿ ಈಗ ಅವರನ್ನ ಅಂದೇನು ಪ್ರಯೋಜನವಿಲ್ಲ, ಅದರಿಂದಾಗಿ ಸಮಸ್ಯೆಯೂ ಬಗೆಹರಿಯದು ಎಂದು ಅರಿತ ಬುದ್ದಿವಂತ ನಾಗರಿಕರು, ಆ ಮೊಳೆಗಳನ್ನ ಮರದಿಂದ ಕಿತ್ತು ಹಾಕಿದಲ್ಲಿ ಕಡೆಯ ಪಕ್ಷ ವೃಕ್ಷಕ್ಕ್ಕೆ ಆದ ಗಾಯವನ್ನಾದ್ರೂ ಸರಿ ಪಡಿಸಿಬಹುದೆಂಬ ನಿರ್ಣಯವನ್ನ ಆಯ್ಕೆ ಮಾಡಿ ಅದನ್ನು ಕಾರ್ಯಾರೂಪ್ಪಕ್ಕೆ ತಂದಿದ್ದಾರೆ.
17/01/2021ರ ಭಾನುವಾರದಂದು,ಗಾಂಧಿ ಬಜಾರಿನ ಮುಖ್ಯ ರಸ್ತೆಯಲ್ಲಿ, ಬೆಳಗ್ಗೆ 8 ರಿಂದ ಪ್ರಾರಂಭವಾದ ಈ ಕಾರ್ಯಚರಣೆಯಲ್ಲಿ, ಪರಿಸರ ಪ್ರೇಮಿಗಳು, ಸಮಾಜಮುಖಿಗಳು ತಮ್ಮ ಅಮೂಲ್ಯವಾದ ಸಮಯದೊಂದಿಗೆ ಶ್ರಮವನ್ನು ಸಹ ನೀಡಿದರು.

ಹಸಿರಿನ ಕೊಡೆ ಹಿಡಿದು ಸೇವೆ ಸಲ್ಲಿಸುತ್ತಿರುವ ಪಾದಪಗಳು ಸಾವಿರಾರು ಮೊಳೆಗಳಿಂದ ಮುಕ್ತಿ ಹೊಂದವು. “ಪ್ರತಿಬಿಂಬ”, “ಸಸ್ಯ ಸಂಕ್ಕಲ್ಪ” ಮತ್ತು “ಬೆಂಗಳೂರು ಹುಡುಗರು”ಅನ್ನೊ ಪರಿಸರ ಹಾಗೂ ಸಮಾಜದ ಸ್ವಾಸ್ಥ್ಯಕ್ಕಾಗಿ ಕೆಲಸ ಮಾಡುವ ಸಂಘಗಳ ಸದಸ್ಯರು ಸಹವರ್ತಿಗಳು ಇದರ ರುವಾರಿಯಾಗಿದ್ದರು. ಮರಗಳಿಗೆ ಮೊಳೆ ಹೊಡೆಯುವುದು ಶಿಕ್ಷಾರ್ಹ ಕೃತ್ಯೆ ಎಂಬುದನ್ನ ಮನದಲಿಟ್ಟುಕೊಂಡು, ಇನ್ನು ಮುಂದೆ ಯಾರಾದರೂ ಮರಕ್ಕೆ ಹಾನಿ ಉಂಟು ಮಾಡಿದ್ದಲಿ ಅವರನ್ನ ಭಂದಿಸಿ ಶಿಕ್ಷೆಗೊಳಪಡಿಸಬೇಕೆಂದು ಬಸವನಾಗುಡಿ ಮತ್ತು ಕುಮಾರಸ್ವಾಮಿ ಬಡಾವಣೆಯ ಪೊಲೀಸರಿಗೆ ದೂರು ಸಲ್ಲಿಸಲಾಯ್ತು.
ಸ್ವಚ್ಛ ಭಾರತದ ಹೆಸರಲ್ಲಿ ರಸ್ತೆ ಬದಿಯನ್ನ, ಮೋರಿಯನ್ನ ಗುಡಿಸಿ ಶುಭ್ರವಾಗಿರಿಸಿಕೂಳ್ಳುವುದು ಮುಖ್ಯವಾದರೆ, ನಮ್ಮ ಆರೋಗ್ಯವನ್ನ ಕಾಪಾಡುವ ನಾವು ಉಸಿರಾಡಲು ಗಾಳಿಯ ಕೊಡುವ ಮರಗಳ ಸ್ವಚ್ಛತೆ ಆರೋಗ್ಯವನ್ನ ಕಾಪಡಿಕೊಳ್ಳಿವುದು ಅದಕ್ಕಿಂತ ಅತ್ಯಗತ್ಯ ಹಾಗೂ ನಮ್ಮಗಳ ಹೊಣೆ ಅನ್ನೋ ಸ್ಪಷ್ಟ ಸಂದೇಶ ರವಾನಿಸಿದ್ರು.

P. ಘನಶ್ಯಾಮ್ – ಬೆಂಗಳೂರು

