2020ರ ವರ್ಷವಿಡೀ ವಿಶ್ವದಾದ್ಯಂತ ಎಲ್ಲರು ಬಾಯಲ್ಲೂ ” ಕೋರಾನ”ದ ಜಪವೇ!! ಅದರಿಂದ ಮುಕ್ತಿಗಾಗಿ ನಡೆಯಿತು ವಿಜ್ಞಾನದ ತಪವು..

ಕೋವಿಡ್ 19 ಪಿಡುಗಿನಿಂದ ಯಾವತ್ತೂ ಹೊರಬರುತ್ತೇವೋ ಅನ್ನೋ ಪ್ರಶ್ನೆ ಎಲ್ಲರನ್ನು ತೀವ್ರವಾಗಿ ಕಾಡಿತ್ತು, ರೋಗಿಗಳ ನರಳಾಟದ ನೋವು ಒಂದೆಡೆಯಾದರೆ, ಅಸಹಾಯಕತೆಯಿಂದಾಗಿ ಉಂಟಾದ ದುಗುಡ ಮತ್ತೊಂದೆಡೆ, ಒಟ್ಟಿನಲ್ಲಿ ಸಾಮಾನ್ಯನ ಬದುಕು ಸಮತೋಲನ ಕಳೆದುಕೊಂಡು ಅಸ್ತವ್ಯಸ್ತವಾಗಿದ್ದಂತೂ ನಿಜ..

“ಲಸಿಕೆಯೆ” ಇದಕ್ಕೆ ಪರಿಹಾರಮಾರ್ಗ ಅದು ಬಂದ್ರೆ ಸ್ವಲ್ಪ ಮಟ್ಟಕಾದ್ರು ಜೇವನ ಸರಿಹೋಗುತ್ತೆ, ಬದುಕು ಎಂದಿನಂತೆ ಯಥಾಸ್ಥಿಗೆ ತಲುಪಲಿದ್ದು ಎಲ್ಲಾ ಉದ್ಯಮಗಳು , ವ್ಯವಹಾರ ವಹಿವಾಟುಗಳಲ್ಲಿ ಮತ್ತೆ ಚೇತರಿಕೆ ಕಾಣಳಿದೇ ಎಂಬ ಭರವಸೆ ಎಲ್ಲರಲ್ಲಿತ್ತು..
“ಆ ಭರವಸೆ ಇಂದು ನಿಜಾವಾಗಿದೆ”
ವಿಶ್ವದಾದ್ಯಂತ ವಿಜ್ಞಾನಿಗಳು ಹಗಲು ರಾತ್ರಿಗಳನ್ನ ಲೆಕ್ಕಿಸದೆ,ಲಸಿಕೆಯ ಸಂಶೋಧನೆಯಲ್ಲಿ ತಲ್ಲೀನರಾಗಿದ್ದರು,

ಪ್ರತಿಷ್ಠಿತ ಔಷಧಿ ತಯಾರಿಸುವ ಸಂಸ್ಥೆಗಳಾದ ಬ್ರಿಟನ್ ಮತ್ತು ಸ್ವೀಡೆನ್ನ ಮೂಲದ ” ಆಸ್ಟ್ರಝೆನಿಕ”, ” ಭಾರತ್ ಬಯೋಟೆಕ್”, “ಮಾಡೆರ್ನಾ” ಯಶಸ್ವಿಯಾದವು.
130 ಕೋಟಿಯ ಬೃಹತ್ ಜನಸಂಖ್ಯೆವುಳ್ಳ ದೇಶ ನಮದಾಗಿದ್ದು ಅಷ್ಟು ಜನಕ್ಕೆ ವ್ಯವಸ್ಥಿತವಾಗಿ ಲಸಿಕೆ ದೊರೆಯುವಂತೆ ಮಾಡುವುದು 100 ಅಶ್ವಮೇಧಯಗವನ್ನ ಏಕಕಾಲಕ್ಕೆ ಮಾಡುದಷ್ಟು ಕ್ಲಿಷ್ಟದ ಕಾರ್ಯ. ಅಂತಹ ಜವಾಬ್ಧಾರಿಯನ್ನು ನಿಭಯಿಸಲು ನಮ್ಮ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿಯವರು ಕೈಗೊಂಡು, ಪ್ರಥಮ ಸೋಪಾನ ದಾಟುವುದರಲ್ಲೂ ಜಯಶೀಲರಾಗಿದ್ದರೆ.

16/01/2021 ಶನಿವಾರದಂದು ಭಾರತದಾದ್ಯಂತ 3 ಕೋಟಿಗು ಅಧಿಕ ನಾಗರಿಕರಿಗೆ ಮದಲನೆ ಹಂತದ ಕೊರೊನಾ ಲಸಿಕೆಯನ್ನ ಉಚಿತವಾಗಿ (ಚುಚ್ಚುಮದ್ದು) ನೀಡುವಲ್ಲಿ ಯಶಸ್ವಿಯಾಗಿದ್ದರೆ, ಈ ಅಭಿಯಾನ ಯಶಸ್ವಿಯಾಗಲು ವೈದ್ಯಕೀಯ ಬಳಗ, ಕವಿಡ್ ವಾರಿಯರ್ ಗಳು ಹಾಗೂ ವಿವಿಧ ಸರಕಾರಿ(ಕೇಂದ್ರ ಮತ್ತು ರಾಜ್ಯ) ನೌಕರರು ಕಂಕಣ ತೊಟ್ಟು ಯಾಗ ನಡೆಸಿದಷ್ಟೇ ಶ್ರದ್ಧೆಯಿಂದ ಕಾಯ ವಾಚ ಮನಸಾ ಶ್ರಮಿಸಿದ್ದಾರೆ.
2020ರ ಉದ್ದಗಲಕ್ಕಿನ ಬಿಕ್ಕಟ್ಟು ಪರಿಸ್ತಿಯಲ್ಲಿ ತಮ್ಮ ಆರೋಗ್ಯವನ್ನ ಲೆಕ್ಕಿಸದೆ ಸಮಾಜದ ಆರೋಗ್ಯ ಮತ್ತು ಹಿತಕ್ಕಾಗಿ ಸೇವೆ ಸಲ್ಲಿಸಿದ ವೈದ್ಯರು, ಪೊಲೀಸ ವಿಭಾಗ, ಕರ್ಮಚಾರೋಗಳಿಗೆ, ಆಶಾ ಕಾರ್ಯಕರ್ತರು ಹಾಗೂ ಕೋವಿಡ್ ವಾರಿಯಗಳಿಗೆ ಆದ್ಯತೆ ಮೇರೆಗೆ ಲಸಿಕೆಯನ್ನ ನೀಡಲಾಯಿತು..

ಪ್ರಪಂಚದಲ್ಲಿನ 100ಕ್ಕು ಹೆಚ್ಚಿನ ದೇಶಗಳ ಜನಸಂಖ್ಯೆ 3 ಕೋಟಿಗೂ ಅಧಿಕವಿಲ್ಲ, ಕೇವಲ 2 ಕೋಟಿಗು ಕಡಿಮೆ ಜನಸಂಖ್ಯೆ ಇರುವ ಸಿಂಗಪೂರ್, ಸ್ವೀಡೆನ್, ಬ್ರಿಟನ್, ಇಟಲಿಯಂತಹ ಎಷ್ಟೋ ಸಿರಿವಂತ ದೇಶಗಳೇ ತಮ್ಮ ದೇಶವಾಸಿಗಳಿಗೆ ಲಸಿಕೆ ಹಂಚುವಲ್ಲಿ, ಕೋವಿಡ್ ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ! ಅನ್ನೋದು ವಾಸ್ತವಾಂಶ.. ಅವರಿಗೆ ಹೋಲಿಸಿದರೆ ನಮ್ಮ ದೇಶದಲ್ಲಿನ ಸುವ್ಯವಸ್ಥೆ ಮೇಲುಗೈ ಸಾಧಿಸಿದೆ ಎಂದು ಹೆಮ್ಮೆಯಿಂದ ಹೇಳಬಹುದು, ಪೂನೆಯ ಸಿರುಮ್ ಇನ್ಸ್ಟಿಟ್ಯೂಟ್ ವರ್ಷಕ್ಕೆ 100ಕೋಟಿ ಕೋವಿಡ್ ಲಸಿಕೆ ತಯಾರಿಸುವಷ್ಟು ಸಾಮರ್ಥ್ಯ ಹೊಂದಿದೇ ಅನ್ನೋದು ನಮಗೆ ಮತ್ತೊಂದು ಹೆಚ್ಚುಗಾರಿಕೆ.
“ದೇಶದ ಪ್ರಜೆಗಳ ಆರೋಗ್ಯವೇ ದೇಶದ ಅತಿದೊಡ್ಡ ಭಾಗ್ಯ” ಅನ್ನೋ ಮಾತು ಮತ್ತೆ ಸಾಬೀತಾಗಿದೆ. ಈ ಅಭಿಯಾನ ಕಲಸುಮೇಲೋಗರವಾಗದಂತೆ ಎಲ್ಲವನ್ನು ಕ್ರಮಬದ್ಧವಾಗಿ ಮೇಳೈಸಿದ್ದಾರೆ, ಈ ದೇಶದ ಪ್ರಜ್ನ್ಯಾವಂತ ಪ್ರಜೆಗಳಾದ ನಾವುಗಳು ನಮ್ಮ ಜವಾಬ್ದಾರಿಯನ್ನ ಅರಿತು ಆರೋಗ್ಯ ಅಭಿಯಾನವನ್ನ ಯಶಸ್ವಿಗೊಳಿಸಲು ಕೈಲಾದ ಸಹಾಯ ಮಾಡಬೇಕೆ ಹೊರೆತು ಕೊಂಕನ್ನು ಹುಡುಕಿ ಕೆಡಕು ರಾಜಕೀಯ ಮಾಡುವುದು ಸಮಂಜಸವಲ್ಲ.

P. ಘನಶ್ಯಾಮ್ – ಬೆಂಗಳೂರು

