ಸಾಗರ: ಸಾಗರ ನಗರದ ಹೃದಯ ಭಾಗದಲ್ಲಿ ಇರುವ ಗಣಪತಿ ಕೆರೆಯ ಜಾಗದ ಒತ್ತುವರಿ ನಿರ್ಮಾಣ ಕಾಮಗಾರಿಯನ್ನು ನಿಲಿಸುವಂತೆ ವಿಶ್ವ ಹಿಂದೂ ಪರಿಷತ್ ಬಜರಂಗದಳ ಸಾಗರ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು.

ಸಾಗರ ನಗರದ ಹೃದಯ ಭಾಗದಲ್ಲಿ ಇರುವ ಗಣಪತಿ ಕೆರೆಯ ಜಾಗದ ಒತ್ತುವರಿ ತೆರೆವುಗೊಳಿಸುವಂತೆ ಕೋರಿ ಮಾನ್ಯ ಉಚ್ಚ ನ್ಯಾಯಾಲಯ , ಬೆಂಗಳೂರು ಇವರಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಯುತ್ತಿದ್ದು ಸದರಿ ನ್ಯಾಯಾಲಯದ ಇದುವರೆಗಿನ ನಡಾವಳಿಗಳು ತಮ್ಮ ಗಮನದಲ್ಲಿ ಇರುತ್ತದೆ ಹೀಗಿದ್ದರೂ ಸತ ತಾವು ಮತ್ತು ತಮ್ಮ ನಗರಸಭೆಯ ಪ್ರತಿ ನಿಧಿಗಳು ಸೇರಿ ರಾಷ್ಟ್ರೀಯ ಹೆದ್ದಾರಿಯ ದಕ್ಷಿಣ ದಿಕ್ಕಿನಲ್ಲಿ ಸ.ನಂ 6 ಕೆರೆಯ ಜಾಗದಲ್ಲಿ ನೂತನವಾಗಿ ಪಾರ್ಕ್ ನಿರ್ಮಾಣದ ಕಾರ್ಯ ಮಾಡುತ್ತಿರುವುದು ಕಾನೂನಿಗೆ ವಿರುದ್ಧವಾಗಿರುತ್ತದೆ.

ಈ ರೀತಿಯ ಕಾನೂನು ಬಾಹಿರ ಕೆಲಸದಿಂದ ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟಾಗುತ್ತಿದ್ದು ಅದಕ್ಕೆ ಸಾಗರ ನಗರಸಭೆಯ ಅಧಿಕಾರಿಗಳು ನೇರ ಹೊಣೆಯಾಗುತ್ತಾರೆ. ಘನ ನ್ಯಾಯಾಲಯದ ಆದೇಶದ ಮೇರೆಗೆ ಸರ್ವೆ ಕಾರ್ಯ ಮಾಡುವ ದಿನದಂದು ಹಾಗೂ ನಂತರ ಕಾಮಗಾರಿ ಮುಂದುವರೆಸಿರುವುದು ತಮ್ಮ ಕರ್ತವ್ಯ ನ್ಯೂನತೆಗಳನ್ನು ಎತ್ತಿ ತೋರಿಸುತ್ತದೆ. ಈ ಬಗ್ಗೆ ಸೂಕ್ತ ಕ್ರಮ ಕೋರಿ ತಮ್ಮ ವಿರುದ್ಧ ನ್ಯಾಯಾಲಯದಲ್ಲಿ ದೂರು ಸಲ್ಲಿಸಲಾಗುವುದು. ಧ್ವಜಸ್ಥಂಬ ಸ್ಥಳದಲ್ಲಿ ತಕ್ಷಣ ಕಾಮಗಾರಿಯನ್ನು ನಿಲಿಸುವಂತೆ ಮತ್ತು ಕಾಮಗಾರಿಯ ಯಾವುದೇ ಹಣ ಬಿಡುಗಡೆ ಮಾಡಬಾರದೆಂದು ಈ ಮೂಲಕ ವಿಶ್ವ ಹಿಂದೂ ಪರಿಷತ್ ಬಜರಂಗದಳ ಸಾಗರ ಆಗ್ರಹಿಸುತ್ತದೆ.
ಹಿಂದು ಪರಿಷತ್ ಅಧ್ಯಕ್ಷರು ರವೀಶ್ ವಕೀಲರು, ಕಾರ್ಯದರ್ಶಿ ಕಿರಣ್ ಗೌಡ. ಮಾತೃ ಮಂಡಳಿ ಅಧ್ಯಕ್ಷರು ಪ್ರತಿಮಾ ಸತೀಶ್, ಜೋಗಿ ಜಿಲ್ಲಾ ಸಹಕಾರ್ಯದರ್ಶಿ ರಾಘವೇಂದ್ರ ಕಾಮತ್, ವಿನಯ್ ಶೇಟ್, ಸುದರ್ಶನ್ ವಕೀಲರು. ಪ್ರದೀಪ ಹಾಜರಿದ್ದರು.

ವರದಿ: ಸಿಸಿಲ್ ಸೋಮನ್
