ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಸರ್ಕಾರ 2020 ರಲ್ಲಿ ದೇಶದ ಜನರಿಗೆ ನೀಡಿದ ಕೊಡುಗೆಗಳನ್ನು ಮೋದಿ ರವರೆಗೆ ಪ್ಯಾಕ್ ಮಾಡಿ (ಪೆಟ್ರೋಲ್. ಡೀಸೆಲ್. ಗ್ಯಾಸ್. ಆಹಾರ ಪದಾರ್ಥಗಳು. ಕರೋನಾ. ರೈತ ವಿರೋಧಿ ಮಸೂದೆ ವಿಷಯಗಳ ಸಂಗ್ರಹ) 2021 ಹೊಸ ವರ್ಷಕ್ಕೆ ಪ್ರಧಾನಿ ಮೋದಿರವರಿಗೆ ರವಾನೆ ಮಾಡುವ ಮೂಲಕ ವಿನೂತನ ಪ್ರತಿಭಟನೆ – ಕಾಂಗ್ರೆಸ್ ಪಕ್ಷದ ಮುಖಂಡರಾದ ಎಸ್. ಮನೋಹರ್.

ಪ್ರಧಾನಿ ನರೇಂದ್ರ ಮೋದಿ ಸರ್ಕಾರ 2020 ರಲ್ಲಿ ದೇಶದ ಜನರಿಗೆ ನೀಡಿದ ಕೊಡುಗೆಗಳನ್ನು ಮೋದಿ ರವರೆಗೆ ಪ್ಯಾಕ್ ಮಾಡಿ (ಪೆಟ್ರೋಲ್. ಡೀಸೆಲ್. ಗ್ಯಾಸ್. ಆಹಾರ ಪದಾರ್ಥಗಳು. ಕರೋನಾ. ರೈತ ವಿರೋಧಿ ಮಸೂದೆ ವಿಷಯಗಳ ಸಂಗ್ರಹ) 2021 ಹೊಸ ವರ್ಷಕ್ಕೆ ಪ್ರಧಾನಿ ಮೋದಿರವರಿಗೆ ರವಾನೆ ಮಾಡುವ ಮೂಲಕ ವಿನೂತನ ಪ್ರತಿಭಟನೆಯನ್ನು 31/12/2020 ಇಂದು ನಡೆಸಲಾಯಿತು. ನರೇಂದ್ರ ಮೋದಿ ರವರ ಆಡಳಿತದಲ್ಲಿ ದೇಶ ಅಭಿವೃದ್ಧಿಯಲ್ಲಿ ಹಿಂದೆ ಹೋಗಿದ್ದು ಜಿಡಿಪಿ ದರ ಕುಸಿತ ಉದ್ಯೋಗ ನಷ್ಟ ರೈತರಿಗೆ ಪರಿಹಾರವಿಲ್ಲದೆ ನಿರ್ಲಕ್ಷ್ಯತನ ಕರೋನ ಹೆಸರಿನಲ್ಲಿ ಕೇಂದ್ರ ಹಾಗೂ ರಾಜ್ಯದಲ್ಲಿ ಹಗಲು ದರೋಡೆ ಅನವಶ್ಯಕವಾದ ಮಸೂದೆಗಳನ್ನು ಜಾರಿ ಮಾಡುವುದರ ಮೂಲಕ ಜನರ ಗಮನವನ್ನು ಬೇರೆಡೆ ಸೆಳೆದು ಸಿ. ಎ.ಎ ಎನ್.ಅರ್.ಸಿ ಗೋ ಹತ್ಯೆ ಪ್ರಕರಣಗಳನ್ನು ಮುಂದಿಟ್ಟು ಅಭಿವೃದ್ಧಿಯನ್ನು ಬಿಜೆಪಿ ಸರ್ಕಾರ ಮರೆಮಾಚುತ್ತಿದೆ. ಪ್ರತಿವರ್ಷವೂ ಒಂದೊಂದು ಭರವಸೆಗಳನ್ನು ನೀಡಿ ರಾಜ್ಯದ ದೇಶದ ಜನರನ್ನು ವಂಚಿಸುತ್ತಿರುವ ಬಿಜೆಪಿ ಕಪ್ಪು ಹಣ ತರಲಿಲ್ಲ ಬಡವರ ಖಾತೆಗೆ ಹಣ ಹಾಕಲಿಲ್ಲ ಡೀಸೆಲ್ ಪೆಟ್ರೋಲ್ ದರವನ್ನು ಇಳಿಸಲಿಲ್ಲ ಗ್ಯಾಸ್ ದರವನ್ನು ಏಕಾಏಕಿ ಏರಿಸುವ ಮೂಲಕ ಬಡವರ ಜೀವನಕ್ಕೆ ಅಪಾಯವನ್ನು ತಂದಿದೆ ಇಂತಹ ಬೇಜವಾಬ್ದಾರಿ ಸರ್ಕಾರ ಸ್ವಾತಂತ್ರ್ಯ ನಂತರ ದೇಶದಲ್ಲಿ ಬಂದಿರಲಿಲ್ಲ ನರೇಂದ್ರ ಮೋದಿ ಕೇವಲ ಪ್ರಚಾರದಲ್ಲೇ ಮುಳುಗಿ ದೇಶದ ಜನರ ಸಂಪತ್ತನ್ನು ಹಾಗೂ ಸಂಸ್ಥೆಗಳನ್ನು ಅಡ ಇಟ್ಟು ಮಾರಾಟ ಮಾಡಿ ಸರ್ಕಾರ ನಡೆಸುತ್ತಿದ್ದಾರೆ ಇಂತಹ ಅದೋಗತಿ ತಂದಿರುವ ನರೇಂದ್ರ ಮೋದಿ ರವರ ನೇತೃತ್ವದ ಬಿಜೆಪಿ ಸರ್ಕಾರ ದೇಶದ ಜನರಿಗೆ ದಿನನಿತ್ಯ ದರ ಏರಿಕೆಯ ಹೊರೆಯನ್ನು ಹೊರೆಸಿ ಕರೋನ ತಡೆಯಲು ಸಂಪೂರ್ಣವಾಗಿ ವಿಫಲವಾಗಿದ್ದಾರೆ ಇಂದು ರೂಪಾಂತರ ಕರೋನ ದೇಶಕ್ಕೆ ಕಾಲಿಟ್ಟರು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಇದರ ಬಗ್ಗೆ ಮುಂಜಾಗ್ರತೆ ಕ್ರಮ ಕೈಗೊಳ್ಳದೆ ವಿದೇಶದಿಂದ ಬರುವ ವಿಮಾನವನ್ನು ಸಹ ಸ್ಥಗಿತಗೊಳಿಸದೆ ರೋಗ ದೇಶವ್ಯಾಪ್ತಿ ಹರಡಿದ ನಂತರ ಕ್ರಮಕೈಗೊಳ್ಳುವುದಾಗಿ ಹೇಳುತ್ತಾರೆ ಈ ಕರೋನ ಹಗರಣದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಹಗಲು ದರೋಡೆ ನಡೆಸಿ ಜನರನ್ನು ವಂಚಿಸುತ್ತಿದೆ ಈ ಸರ್ಕಾರ ತೊಲಗಬೇಕು ದೇಶದ ಜನರಿಗೆ ನೆಮ್ಮದಿ ತರಬೇಕೆಂದು ಈ ವಿನೂತನ ಪ್ರತಿಭಟನೆಯನ್ನು ಮಹಾತ್ಮಗಾಂಧಿ ಪ್ರತಿಮೆ ಬಳಿ ನಡೆಸಲಾಯಿತು.ಈ ಪ್ರತಿಭಟನೆಯಲ್ಲಿ ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿ ಮುಖ್ಯಸ್ಥರಾದ ಎಸ್ ಮನೋಹರ್, ಎಂ.ಎ ಸಲೀಂ – ಮಾಧ್ಯಮ ಕಾರ್ಯದರ್ಶಿ,ಜಿ ಜನಾರ್ದನ್, ಎ ಆನಂದ್, ಈ ಶೇಖರ್, ಪ್ರಕಾಶ್, ಮಹೇಶ್, ಪುಟ್ಟರಾಜು, ಶಶಿಭೂಸಣ್, ಕೋದಂಡರಾಮ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

ವರದಿ: ಸಿಸಿಲ್ ಸೋಮನ್
