ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಅಬಕಾರಿ ಇಲಾಖೆಯಿಂದ ಮಿಂಚಿನ ಕಾರ್ಯಾಚರಣೆ 4,60,000/- ಅಕ್ರಮ ಮದ್ಯ ವಶ.
ಗ್ರಾಮ ಪಂಚಾಯ್ತಿ ಚುನಾವಣೆ-2020 ನಿಮಿತ್ತ ಚುನಾವಣೆಯನ್ನು ಮುಕ್ತ ಹಾಗೂ ನಿಷ್ಟಕ್ಷಪಾತವಾಗಿ ನಡೆಸುವ ನಿಟ್ಟಿನಲ್ಲಿ ಶಿವಮೊಗ್ಗ ಜಿಲ್ಲಾ ಅಬಕಾರಿ ಇಲಾಖೆಯು ಖಚಿತ ಮಾಹಿತಿಯನ್ನು ಸಂಗ್ರಹಿಸಿ ಕ್ಯಾಪ್ಟನ್ ಅಜಿತ್ ಕುಮಾರ್, ಅಬಕಾರಿ ಉಪ ಆಯುಕ್ತರು, ಶಿವಮೊಗ್ಗ ಜಿಲ್ಲೆ ಶಿವಮೊಗ್ಗ ರವರ ಮಾರ್ಗದರ್ಶನದಲ್ಲಿ ಆರೋಪಿಯು ಕರ್ನಾಟಕ ರಾಜ್ಯದಲ್ಲಿ ತೆರಿಗೆಯನ್ನು ವಂಚಿಸಿ ಹೊರರಾಜ್ಯದ ತೆರಿಗೆ ಪಾವತಿಸದ ಅಕ್ರಮ ಮದ್ಯವನ್ನು ಗ್ರಾಮ ಪಂಚಾಯ್ತಿ ಚುನಾವಣೆಗೆ ಬಳಸುವ ಉದ್ದೇಶದಿಂದ ಕೆಎ-15-8249 ಆಟೋರಿಕ್ಷಾದಲ್ಲಿ ಗೋವಾ ರಾಜ್ಯದಲ್ಲಿ ತಯಾರಾದ ಮೆಕ್ಡೊನಾಲ್ಡ್ ವಿಸ್ಕಿ, ಇಂಪೀರಿಯಲ್ ವಿಸ್ಕಿ, ಗೋವಾ ಫೆನ್ನಿ ಸೇರಿದಂತೆ ಅಕ್ರಮವಾಗಿ 71 ಲೀಟರ್ ಗೋವಾ ಮದ್ಯ ಸಾಗಾಣಿಕೆ ಮಾಡುತ್ತಿರುವುದನ್ನು ಪತ್ತೆಹಚ್ಚಲಾಗಿರುತ್ತದೆ. ಶ್ರೀ ಹನುಮಂತಪ್ಪ ಡಿ ಎನ್, ಅಬಕಾರಿ ನಿರೀಕ್ಷಕರು, ಜಿಲ್ಲಾ ವಿಚಕ್ಷಣಾ ದಳ ಇವರು ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಿಸಿರುತ್ತಾರೆ.
ಸದರಿ ಪ್ರಕರಣದಲ್ಲಿ ಜಪ್ತಾದ ವಾಹನದ ಅಂದಾಜು ಮೌಲ್ಯ ರೂ-1,50,000 ಮತ್ತು ಗೋವಾ ಮದ್ಯದ ಮೌಲ್ಯ ರೂ.80,000/- ಗಳಾಗಿದ್ದು ಒಟ್ಟು ಮೌಲ್ಯ 2,30,000/-ಗಳಾಗಿರುತ್ತದೆ. ಸದರಿ ಪ್ರಕರಣದ ಆರೋಪಿಯಾದ ಮೊಹಮ್ಮದ್ ಸಿರಾಜ್ ಬಿನ್ ಹುಸೇನ್ ಸಾಬ್ ಅಲಿಯಾಸ್ ಸಿರಾಜ್ ಇವನನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಪ್ರಕರಣದಲ್ಲಿ ಹೆಚ್ಚಿನ ತನಿಖೆ ನಡೆಸಲು ಸೂಚಿಸಲಾಗಿರುತ್ತದೆ
ಕಾರ್ಯಾಚರಣೆಯಲ್ಲಿ ಶ್ರೀ ಹನುಮಂತಪ್ಪ ಡಿ ಎನ್, ಅಬಕಾರಿ ನಿರೀಕ್ಷಕರು, ಶ್ರೀ ಸೈಯದ್ ತಫ್ಜಿಲ್ ಉಲ್ಲಾ, ಅಬಕಾರಿ ನಿರೀಕ್ಷಕರು, ಅಬಕಾರಿ ಉಪ ನಿರೀಕ್ಷರುಗಳಾದ ಶ್ರೀ ಅಣ್ಣಪ್ಪ ಜಿ, ಜಾನ್ ಪಿ ಜೆ ಮತ್ತು ಅಬಕಾರಿ ರಕ್ಷಕರಾದ ಚಂದ್ರಪ್ಪ, ರಾಜಮ್ಮ, ನಾಗರಾಜ್ ಹಾಗೂ ವಾಹನ ಚಾಲಕ ಅರ್ಜುನ್ ಭಾಗವಹಿಸಿದ್ದರು.

ವರದಿ: ಹರ್ಷ ಸಾಗರ
