ಬೆಂಗಳೂರು: ಕೊರೊನ ಸಂದರ್ಭದಲ್ಲಿ ಸಾರಿಗೆ ನೌಕರರ ಸೇವೆಯನ್ನು ಸಮಾಜ ಮರೆಯಲು ಸಾಧ್ಯವಿಲ್ಲ – ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್.

ಸಾರಿಗೆ ನೌಕರರ ಪ್ರತಿಭಟನೆ ನಿರ್ವಹಿಸುವುದರಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ಸೋತಿದೆ.
ಪ್ರಯಾಣಿಕರ ಪರದಾಟ,ಅನಾನುಭವಿ ಖಾಸಗಿ ಚಾಲಕರ ಪೀಕಲಾಟ,ಸರ್ಕಾರದ ಮೊಂಡು ಹಠ,ಖಾಸಗಿ ಬಸ್ ಮಾಲೀಕರ ನಿರಾಕರಣೆ, ಲಕ್ಷ್ಮಣ್ ಸಂಗಪ್ಪ ಸವದಿ ಅವರೇ ಬಿಕ್ಕಟ್ಟುಗಳನ್ನ ನಿರ್ವಹಿಸುವುದೆಂದರೆ ಸದನದಲ್ಲಿ ಕೂತು ಮೊಬೈಲ್’ನಲ್ಲಿ “ರೋಮಾಂಚನದ” ಚಿತ್ರ ವೀಕ್ಷಿಸಿದಂತಲ್ಲ!!
ಕೊರೊನ ಸಂದರ್ಭದಲ್ಲಿ ಸಾರಿಗೆ ನೌಕರರ ಸೇವೆಯನ್ನು ಸಮಾಜ ಮರೆಯಲು ಸಾಧ್ಯವಿಲ್ಲ. ಲಾಕ್ ಡೌನ್ ಸಂದರ್ಭದಲ್ಲಿ ವೇತನ ಸಿಗದೆ ನಿಮ್ಮ ಮನೆಯಲ್ಲಿ ತೊಂದರೆಯಾದಾಗ, ಸರ್ಕಾರ ಎಲ್ಲಾ ವೃತ್ತಿಪರ ಕಾರ್ಮಿಕರಿ ಕನಿಷ್ಠ ₹10,000 ಪರಿಹಾರ ಕೊಡುವಂತೆ ಆಗ್ರಹಿಸಿ ಹೋರಾಟ ಮಾಡಿದೆವು. ಆದರೆ ಸರ್ಕಾರ ಸ್ಪಂದಿಸಲೇ ಇಲ್ಲ – ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್

ವರದಿ: ಸಿಸಿಲ್ ಸೋಮನ್
