ಸಾಗರ: ರೋಟರಿ ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್ ನಲ್ಲಿ ಅತಿ ಹೆಚ್ಚು ಬಾರಿ ರಕ್ತ ದಾನ ಮಾಡಿದ ಅಶೋಕ್ ಬೆಳೆಯೂರ, ಪ್ರಮೋದ್ ಪಾಟೀಲ್ ಹಾಗೂ ಗೌತಮ್ ಕೆ.ಎಸ್. ರವರನ್ನೂ ಸನ್ಮಾನಿಸಿ, ಗೌರವಿಸಲಾಯಿತು.
ಲೆಕ್ಕಪತ್ರಕ್ಕೆ ಸಂಬಂಧಿಸಿದಂತೆ ಮೆ. ನಾಗರಾಜ್ ಅವರು ವಿವರಣೆ ನೀಡಿದರು.

ಗೌರವ ಕಾರ್ಯದರ್ಶಿ ವೆಂಕಟೇಶ್. ಜಿ.ಎಸ್. ಹಿಂದಿನ ಸಭಾ ನಡಾವಳಿ ಹಾಗೂ ಇಂದಿನ ಸಭೆಯ ಅಜೆಂಡಾ ಓದಿದರು. ವಾರ್ಷಿಕ ಮಹಾಸಭೆಯನ್ನು ಜನವರಿ 09 ರಂದು ನಡೆಸಲು ತೀರ್ಮಾನಿಸಲಾಗಿದೆ.(ಗ್ರಾಮ ಪಂಚಾಯತ್ ಚುನಾವಣೆ ಇರುವುದರಿಂದ). ರೋಟರಿ ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್ ನಲ್ಲಿ ಅತಿ ಹೆಚ್ಚು ಬಾರಿ ರಕ್ತ ದಾನ ಮಾಡಿದ ಅಶೋಕ್ ಬೆಳೆಯೂರ, ಪ್ರಮೋದ್ ಪಾಟೀಲ್ ಹಾಗೂ ಗೌತಮ್ ಕೆ.ಎಸ್. ರವರನ್ನೂ ಸನ್ಮಾನಿಸಿ, ಗೌರವಿಸಲಾಯಿತು. ಬ್ಲಡ್ ಬ್ಯಾಂಕಿನ ಡಾಕ್ಟರ್ ಹೆಚ್.ಎಮ್. ಶಿವಕುಮಾರ್, ಡಾಕ್ಟರ್ ಬಿ.ಜಿ. ಸಂಗಂ, ತಾಲೂಕು ವೈದ್ಯಾಧಿಕಾರಿ ಡಾಕ್ಟರ್ ಮೋಹನ್ ರವರು ವಿಶೇಷ ಮಾಹಿತಿ ನೀಡಿದರು .
ಕೆ.ಎನ್. ಶ್ರೀಧರ್ ಅಧ್ಯಕ್ಷತೆ ವಹಿಸಿದ್ದರು. ಗೌರವ ಕಾರ್ಯದರ್ಶಿ ವೆಂಕಟೇಶ್ ಜಿ.ಎಸ್. ಸಭೆಗೆ ಅಗತ್ಯ ಮಾಹಿತಿ ನೀಡಿದರು.
ಮುಂದಿನ ಸಭೆ ಶ್ರೀ ಅಶ್ವಿನಿ ಕುಮಾರ್ ರವರ ಮನೆಯಲ್ಲಿ ನಡೆಸಲಾಗುವುದು ಎಂದು ತೀರ್ಮಾನಿಸಲಾಯಿತು ಶ್ರೀಯುತ ಮ.ಸ.ನಂಜುಂಡಸ್ವಾಮಿ, ಅಣ್ಣಪ್ಪ,ಹರೀಶ್,ಜಗದೀಶ್, ವೆಂಕಟೇಶ್ ಕವಲಕೋಡು, ವ.ಶಂ ರಾಮಚಂದ್ರ ಭಟ್, ಅಶ್ವಿನಿ ಕುಮಾರ್,ಪ್ರಕಾಶ್, ದಾನಪ್ಪ ದಳವಾಯಿ, ಡಾಕ್ಟರ್ ಸುರೇಂದ್ರನಾಥ್, ಡಾಕ್ಟರ್ ಪ್ರಕಾಶ್ ಭೋಂಸ್ಲೆ ಶ್ರೀಮತಿ ಕಾನ್ಸೆಪ್ಟ್ ಡಿಕಾಸ್ಟ, ಪ್ರವೀಣ ಪಿ.ಎಸ್. ಮುಂತಾದವರು ಭಾಗವಹಿಸಿದ್ದರು. ಮ.ಸ. ನಂಜುಂಡಸ್ವಾಮಿ ವಂದಿಸಿದರು. ವೆಂಕಟೇಶ್ ಜಿ.ಎಸ್. ಗೌರವ ಕಾರ್ಯದರ್ಶಿ. ರೆಡ್ ಕ್ರಾಸ್ ಸಂಸ್ಥೆ, ಸಾಗರ.

ವರದಿ: ದಿವ್ಯ ಸಿಸಿಲ್
