ಶಿವಮೊಗ್ಗ: ಮಾಜಿ ಸಾಗರ ಶಾಸಕರಾದ ಗೋಪಾಲ ಕೃಷ್ಣ ಬೇಳೂರು ಅವರಿಗೆ ರಿಪ್ಪನ್ ಪೇಟೆಯ ಕಲಾ ಕಸ್ತುಬಾ ಕನ್ನಡ ಸಂಘದ ವತಿಯಿಂದ ಅದ್ದೂರಿಯಾದ ಸ್ವಾಗತವನ್ನು ನೀಡಲಾಯಿತು.

ಶಿವಮೊಗ್ಗದ ರಿಪ್ಪನ್ ಪೇಟೆಯಲ್ಲಿ ಕಲಾ ಕಸ್ತುಬಾ ಕನ್ನಡ ಸಂಘದ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ, ನಮ್ಮ ನಿಮ್ಮೆಲ್ಲರ ಮೆಚ್ಚಿನ ನಾಯಕರಾದ ಮಾಜಿ ಸಾಗರ ಹೊಸನಗರ ಶಾಸಕರು , ಕೆಪಿಸಿಸಿ ವಕ್ತಾರರು ಆದಂತಹ ಗೋಪಾಲ ಕೃಷ್ಣ ಬೇಳೂರು ಅವರು ಆಗಮಿಸಿದ್ದರು. ಕನ್ನಡ ನಾಡು ನುಡಿಯ ಬಗ್ಗೆ ನಾಲ್ಕು ಮಾತನಾಡಿ ಕಾರ್ಯಕ್ರಮವನ್ನು ಚಂದಗಾಣಿಸಿಕೊಟ್ಟರು. ಮುಖ್ಯ ಅತಿಥಿ ಯಾಗೆ ಆಗಮಿಸಿದ್ದ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ವರದಿ: ಸಿಸಿಲ್ ಸೋಮನ್
