ಸಾಗರ : ಗ್ರಾಮೀಣ ಭಾಗದ ಜನರಿಗೆ ಅನುಕೂಲ ಕಲ್ಪಿಸಲು ಕೋಟ್ಯಂತರ ರೂ ವೆಚ್ಚದಲ್ಲಿ ಶಾಶ್ವತ ರಸ್ತೆ ನಿರ್ಮಾಣವಾಗುತ್ತಿದೆ ”ಅರಣ್ಯಾಧಿಕಾರಿಗಳ ಸಮಸ್ಯೆ” ಸಮಸ್ಯೆ ಮಾಡುತ್ತಿದ್ದು ಸ್ಥಳ ಪರಿಶೀಲಿಸಿದ ಶಾಸಕರಾದ ಹೆಚ್.ಹಾಲಪ್ಪ .

ಮುತ್ತೂರು – ಬ್ರಹ್ಮೆಶ್ವರಕ್ಕೆ 485.47 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ PMGSY ರಸ್ತೆ(5.76 Km) ಕಾಮಗಾರಿಗೆ ಮರಗಳನ್ನು ತೆರವು ಮಾಡಲು ಅರಣ್ಯಾಧಿಕಾರಿಗಳು ಸಮಸ್ಯೆ ಮಾಡುತ್ತಿದ್ದು ಸ್ಥಳ ಪರಿಶೀಲಿಸಿ,
ಗ್ರಾಮೀಣ ಭಾಗದ ಜನರಿಗೆ ಅನುಕೂಲ ಕಲ್ಪಿಸಲು ಕೋಟ್ಯಂತರ ರೂ ವೆಚ್ಚದಲ್ಲಿ ಶಾಶ್ವತ ರಸ್ತೆ ನಿರ್ಮಾಣವಾಗುತ್ತಿದೆ, ಪರಿಸರಕ್ಕೆ ಧಕ್ಕೆಯಾಗದಂತೆ ರಸ್ತೆಯ ಮಧ್ಯಭಾಗದಲ್ಲಿ ಬರುವ ಮರಗಳನ್ನು ಅಗತ್ಯತೆಗೆ ತಕ್ಕಂತೆ ತೆರವು ಮಾಡಿ, ಅನಗತ್ಯವಾಗಿ ಮರಗಳನ್ನು ಕಡಿಯಬೇಡಿ, ಅರಣ್ಯ ಇಲಾಖೆಯವರು ಹಾಗೂ PMGSY ಅಧಿಕಾರಿಗಳು ಸಹಮತದೊಂದಿಗೆ ಕಾಮಗಾರಿ ನೆಡಸಿ ಎಂದು ಸೂಚಿಸಿದರು. ಈ ಸಂಧರ್ಭದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು, PMGSY ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ಪಕ್ಷದ ವಿವಿಧ ಹಂತದ ಮುಖಂಡರು ಉಪಸ್ಥಿತರಿದ್ದರು.

ವರದಿ: ಗೌತಮ್ ಕೆ.ಎಸ್
