ಸಾಗರ : ಹುಬ್ಬಳ್ಳಿ ಮಾರ್ಗ ಬರುತ್ತಿದ್ದ ಸ್ವಿಫ್ಟ್ ಡಿಸೈರ್ ಕಾರನ್ನು ಅಡ್ಡಹಾಕಿ ಲಕ್ಷಾಂತರ ರೂ ದೋಚಿದ ಸಾಗರ ಯುವ ಪ್ರಭಾವಿ ಕಾಂಗ್ರೇಸ್ ಮುಖಂಡರು ಕನ್ನಪ್ಪ ಮುಳುಕೇರಿ ಹಾಗೂ ವಿಶ್ವ ಅಲಿಯಾಸ್ ವಿಶ್ವ.
ಇಂದು ಸಾಗರದ ಕಾಂಗ್ರೇಸ್ ಕಾರ್ಯಕರ್ತ ಕನ್ನಪ್ಪ ಮುಳುಕೇರಿ ಮತ್ತು ವಿಶ್ವನಾಥ್ ಎನ್ನುವ ಇಬ್ಬರು ಸೊರಬ ತಾಲ್ಲೂಕಿನ ಆನವಟ್ಟಿ ಸರಹದ್ದಿಗೆ ಬರುವ ತವನಂದಿಯ ಬಳಿ ಹುಬ್ಬಳ್ಳಿ ಯಿಂದ ಸಾಗರಕ್ಕೆ ಅಡಿಕೆ ವ್ಯವಹಾರಕ್ಕಾಗಿ ಹಣ ತರುತ್ತಿದ್ದಾಗ ಸಾಗರದ ಈ ಇಬ್ಬರು ವ್ಯಕ್ತಿಗಳು ಸೇರಿ ಸುಮಾರು 15ಲಕ್ಷ ರೂಪಾಯಿಗಳ ಹಣವನ್ನು ದೋಚಿದ್ದಾರೆ ಹಾಗೂ ಇವರನ್ನು ಅರೆಸ್ಟ್ ಮಾಡಲಾಗಿದೆ. ಈ ಸುದ್ದಿ ರಾಜ್ಯಮಟ್ಟದ ಪತ್ರಿಕೆಯಲ್ಲೂ ಛಾಪಿಸಲಾಗಿತ್ತು. ಹೆಚ್ಚಿನ ವಿವರ ನೀಡಿರಲಿಲ್ಲ. ಈ ಸುದ್ದಿ ಪೋಲೀಸರಿಗೆ ತಿಳಿದಿದೆ. ಈ ಬಗ್ಗೆ ಸಾಗರದ ಡಿವೈಎಸ್’ಪಿ ಕಾರ್ಯಾಚರಣೆಯಲ್ಲಿ ಇದ್ದರೆಂಬ ಮಾಹಿತಿಯು ಇತ್ತು. ಇನ್ನೂ ಇಲ್ಲಿನ ಯೂಟ್ಯೂಬ್ ಚಾನಲ್ ಈ ಸುದ್ದಿಯನ್ನು ಪ್ರಸಾರ ಮಾಡಿ ಡಿಲಿಟ್ ಮಾಡಿರುವುದು ಸುದ್ದಿ ಮಾಡುವಲ್ಲೇನಾದರೂ ಸ್ಪಷ್ಟನೆ ಇಲ್ಲದೇ ರಿಮೂವ್ ಮಾಡಿತೆ?, 15ಲಕ್ಷ ಎನ್ನುವವರು ಸತ್ಯ ಸಂಗತಿಯೋ, ಅಥವಾ ಇನ್ನೂ ಹೆಚ್ಚಿನ ಮೊತ್ತದ ಲೂಟಿಯೋ ಯಾರು ಹೇಳುವವರು. ತನಿಖೆ ನಿಷ್ಪಕ್ಷಪಾತವಾಗಿ ನಡೆಸಬೇಕಾದವರು ಪೋಲಿಸರು ಅವರಿಗೇನಾದರೂ ತನಿಖೆಗೆ ತೊಡಕಾಗಬಹುದೆಂದು ಈ ಸುದ್ದಿಯನ್ನು ಡಿಲಿಟ್ ಮಾಡಲಾಯಿತೇ?
ಆನವಟ್ಟಿ ವ್ಯಾಪ್ತಿಗೆ ಈ ಪ್ರಕರಣ ಒಳಪಡುತ್ತದೆ.

ವರದಿ: ಹರ್ಷ ಸಾಗರ
