ಸಾಗರ: ಸಾಗರ ಉಪವಿಭಾಗಿಯ ಆಸ್ಪತ್ರೆ ವ್ಯವಸ್ಥೆ ಬಗ್ಗೆ ಸಾರ್ವಜನಿಕ ದೂರು ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಭೇಟಿನೆಡೆಸಿದ ಶಾಸಕರಾದ ಹೆಚ್.ಹಾಲಪ್ಪ
ಸಾಗರ ಉಪವಿಭಾಗಿಯ ಆಸ್ಪತ್ರೆ ವ್ಯವಸ್ಥೆ ಬಗ್ಗೆ ಸಾರ್ವಜನಿಕ ದೂರು ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಭೇಟಿ ವೈದ್ಯರೊಂದಿಗೆ ಸಭೆ ನೆಡೆಸಿ, ಸೀಜರಿನ್ ಮಾಡಲು 8 ಸಾವಿರ ಹಣ ಪಡೆಯುತ್ತಿರುವುದು ಗಮನಕ್ಕೆ ಬಂದಿದೆ ಇದು ಒಳ್ಳೆಯ ಬೆಳವಣಿಗೆಯಲ್ಲ, ಜಿಲ್ಲಾಸ್ಪತ್ರೆ ನಂತರದ ಸ್ಥಾನ ಸಾಗರದ ಆಸ್ಪತ್ರೆಗೆ ಇದೆ, ಸಾವಿರಾರು ಜನ ಚಿಕಿತ್ಸೆ ಆಗಮಿಸುತ್ತಾರೆ, ಅವರಿಗೆ ಸೂಕ್ತವಾಗಿ ಸ್ಪಂದಿಸಿ ಆಸ್ಪತ್ರೆಯ ಹೆಸರನ್ನು ಉಳಿಸಬೇಕಾಗಿದ್ದು ವೈದ್ಯರ ಕರ್ತವ್ಯ ನಿರ್ದಿಷ್ಟ ಸಮಯಕ್ಕೆ ಕೆಲಸಕ್ಕೆ ಹಾಜರಾಗದ ಸಿಬ್ಬಂದಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಯಿತು.

ವರದಿ: ಹರ್ಷ ಸಾಗರ
