ಬೆಂಗಳೂರು: ಮಾನ್ಯ ಸಿದ್ದರಾಮಯ್ಯ ನವರೇ ನಾನು ಆರ್ ಎಸ್ ಎಸ್ ಸಂಸ್ಥಾಪಕ ಅಲ್ಲ, ನಾನೊಬ್ಬ ಸಂಘದ ಸ್ವಯಂಸೇವಕ – ಸಿ ಟಿ ರವಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ.

ಪರಮ ಪೂಜ್ಯ ಡಾ. ಕೇಶವ ಬಲಿರಾಮ ಹೆಡಗೇವಾರ್ ಅವರು ಗುರುವಾಗಿ ಸ್ವೀಕರಿಸಿದ್ದು ಸಹಸ್ರಾರು ವರ್ಷಗಳಿಂದ ಪ್ರೇರಣೆ ನೀಡಿದ ಭಗವದ್ ಧ್ವಜವನ್ನು ಮತ್ತು “ವ್ಯಕ್ತಿಗಿಂತ ತತ್ವ ಶ್ರೇಷ್ಠ” ಎಂಬ ಸಿದ್ದಾಂತವನ್ನು. ಸಂಘ ಸ್ವಯಂಸೇವಕರಿಗೆ ಹೇಳಿಕೊಟ್ಟಿದ್ದು ದೇಶ ಮೊದಲು ಎನ್ನುವ ತತ್ವವನ್ನು. “ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ” ಎಂಬ ಭಾವವನ್ನು.
ಇದು ಅರ್ಥವಾಗಬೇಕಾದರೆ, ಅಸ್ಪೃಶ್ಯತೆಯ, ಜಾತೀಯತೆಯ ಸೋಂಕಿಲ್ಲದೆ ನಾವೆಲ್ಲರೂ ಒಂದು, ಭಾರತಮಾತೆಯ ಮಕ್ಕಳು ಎಂದು ಬದುಕಬೇಕಾದರೆ ನೀವು ಶಾಖೆಗೆ ಬರಬೇಕು.ನಾನು ನಿಮ್ಮ ಹಾಗೆ, ನೀವು ಕಾಂಗ್ರೆಸ್ ಸಂಸ್ಥಾಪಕ AO ಹ್ಯೂಮ್ ರ ಮೊಮ್ಮಗನೋ, ಮರಿಮಗನೋ ಎಂದು ಕೇಳುವುದಿಲ್ಲ. ಇಂದಿರಾ ಗಾಂಧಿಯವರ ದತ್ತುಪುತ್ರ ಎಂದು ಹೇಳುವುದಿಲ್ಲ. ಅಧಿಕಾರಕ್ಕಾಗಿ ಪಕ್ಷ ಬದಲಾಯಿಸಿದರು ಎಂದು ಆರೋಪಿಸುವುದಿಲ್ಲ. ಬದಲಾಗಿ ವಂಶವಾದಕ್ಕಿಂತ, ಜಾತಿವಾದಕ್ಕಿಂತ, ರಾಷ್ಟ್ರವಾದ ದೇಶಕ್ಕೆ ಒಳ್ಳೆಯದು ಎಂದಷ್ಟೇ ಹೇಳಬಯಸುತ್ತೇನೆ.ನೀವಿರುವ ಪಕ್ಷದಲ್ಲಿ ದೇಶಕ್ಕಿಂತ ಮತಬ್ಯಾಂಕ್ ಮುಖ್ಯವಾಗಿದೆ, ಪ್ರಜಾಪ್ರಭುತ್ವಕ್ಕಿಂತ ರಾಜಪ್ರಭುತ್ವದ ಮಾದರಿಯ ಕುಟುಂಬ ರಾಜಕಾರಣವಿದೆ.
ದಾರಿತಪ್ಪಿರುವ ಕಾಂಗ್ರೆಸ್ಸಿಗರಿಗೆ ದೇಶಭಕ್ತಿಯ ಪಾಠ ಹೇಳಿಕೊಡಲು ಯಾರಿದ್ದಾರೆ? ಮಹಾತ್ಮ ಗಾಂಧಿಯವರು ಬದುಕಿಲ್ಲ, ಕಾಂಗ್ರೆಸ್ ಅವರ ತತ್ವಕ್ಕೆ ನೆಹರು ಅವರ ಕಾಲದಲ್ಲಿಯೇ ಎಳ್ಳುನೀರು ಬಿಟ್ಟಾಗಿದೆ.
ದೇಶಭಕ್ತಿ ಸರಳವಾಗಿ ಅರ್ಥವಾಗಲು ಸಂಘದ ಶಾಖೆಗಿಂತ ಬೇರೆ ದಾರಿಯಿಲ್ಲ. ಅದಕ್ಕಾಗಿಯೇ ಸಾರ್ವಜನಿಕ ರೂಪದ ಸಂಪರ್ಕ ಮಾಡಿದ್ದೇನೆ. ಇನ್ನೆಷ್ಟು ದಿನ ನಯವಂಚಕ, ಸ್ವಾರ್ಥದ ರಾಜಕಾರಣ? ನಿಮಗೆ ಬಿಟ್ಟಿದ್ದು ಎಂದು ಸಿಟಿ ರವಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹೇಳಿದರು.

ವರದಿ: ದಿವ್ಯ ಸಿಸಿಲ್
