ಆವಿನಹಳ್ಳಿ: ಮದ್ಯಪಾನ ವಿರೋಧಿ ಹೋರಾಟ ಸಮಿತಿ ”ಆವಿನಹಳ್ಳಿ ಹೋಬಳಿ” ಆವಿನಹಳ್ಳಿ ಸಿಗಂದೂರು ಹೆದ್ದಾರಿ ರಸ್ತೆ ತಡೆ ನವೆಂಬರ್ 7-11-2020

ನಮ್ಮ ಸಂಘಟನೆ ವತಿಯಿಂದ ಆವಿನಹಳ್ಳಿ ಕಲ್ಮನೆ ಕೋಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಧಿಕೃತ ಮತ್ತು ಅನಧಿಕೃತ ಮದ್ಯ ಮಾರಾಟ ನಿಲ್ಲಿಸಲು ಹೋರಾಟ ಮಾಡಿಕೊಂಡು ಬಂದಿರುವುದು ತಮಗೆ ತಿಳಿದಿರುವ ವಿಷಯ. ಅಬಕಾರಿ ಅಧಿಕಾರಿಗಳು ಬೇಜವಾಬ್ದಾರಿ ತನದಿಂದ ಅನಧಿಕೃತ ಮದ್ಯ ಮಾರಾಟಕ್ಕೆ ಕುಮ್ಮಕ್ಕು ನೀಡಿ ಸಮಾಜದ ನೆಮ್ಮದಿ ಹಾಳು ಮಾಡುತ್ತಿದ್ದುದು ಅಲ್ಲದೆ ಈಗ ಹೊಸನಗರ ತಾಲೂಕಿನ ಒಂದು ಬಾರ್ ಅಂಡ್ ರೆಸ್ಟೋರೆಂಟ್ ನ್ನು ಆವಿನಹಳ್ಳಿ ಗೆ ಸ್ಥಳಾಂತರಿಸಲು ಅನುಮತಿ ಮಾಡಿರುವುದು ಜನರಿಗೆ ಮಾಡಿದ ವಂಚನೆ ಆಗಿದೆ. ಇಲ್ಲಿಯವರೆಗೆ ಪಾದಯಾತ್ರೆ ಪ್ರತಿಭಟನೆ ಮಾಡುವ ಮೂಲಕ ಮನವಿ ನೀಡುತ್ತಿದ್ದೆವು ಆದರೆ ಇದಕ್ಕೆ ಅಧಿಕಾರಿಗಳು ಪುರಸ್ಕಾರ ನೀಡದ ಕಾರಣ ಹೆದ್ದಾರಿ ಬಂದ್ ಮಾಡಿ ಗಮನ ಸೆಳೆದು ನಮ್ಮ ಹೋರಾಟ ಯಶಸ್ಸು ಕಾಣಬೇಕಾದ ಅನಿವಾರ್ಯ ಬಂದಿದೆ, ಆದ್ದರಿಂದ ದಿನಾಂಕ 07-11-2020ರ ಶನಿವಾರ ಬೆಳಿಗ್ಗೆ 9 ಗಂಟೆಯಿಂದ ಬೇಡಿಕೆ ಈಡೇರುವ ತನಕ ಅನಿರ್ದಿಷ್ಟ ಕಾಲ ಹೆದ್ದಾರಿ ತಡೆ ಮಾಡಿ ಪ್ರತಿಭಟನೆ ಮಾಡುತ್ತಿದ್ದೆವೆ.
ಈ ಹೋರಾಟಕ್ಕೆ ಮಹಿಳಾ ಸಂಘಟನೆ ಸ್ವಸಹಾಯ ಗುಂಪುಗಳು ರೈತ ಸಂಘಟನೆಗಳು ಹಾಗೂ ಜನಪ್ರತಿನಿಧಿಗಳು ಎಲ್ಲರೂ ಸಹಕಾರ ನೀಡಬೇಕಾಗಿ ವಿನಂತಿ.
ಹೋರಾಟ ಸಮಿತಿ ಪರವಾಗಿ ಲೋಕೇಶ್ ಹುಣಾಲುಮಡಿಕೆ

ವರದಿ: ಹರ್ಷ ಸಾಗರ
