ಸಾಗರ: ವಿಶ್ವ ಹಿಂದೂ ಪರಿಷತ್ ಬಜರಂಗದಳ ಸಾಗರ ತಾಲ್ಲೂಕು ಘಟಕದ ವತಿಯಿಂದ ರಕ್ತದಾನ ಶಿಬಿರವನ್ನು ಸಾಗರ ಸಕಾ೯ರಿ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಯಿತು. ರಾಘವೇಂದ್ರ ಕಾಮತ್ ಅವರು ಸ್ವಾಗತ ಕೋರಿದರು.

“ರಕ್ತದಾನ ಮಹಾದಾನ”

ವಿಶ್ವ ಹಿಂದೂ ಪರಿಷತ್ ಬಜರಂಗದಳ ಸಾಗರ ತಾಲ್ಲೂಕು ಘಟಕದ ವತಿಯಿಂದ ಅಯೋಧ್ಯೆಯಲ್ಲಿ ಬಲಿದಾನವಾದ ನಮ್ಮ ಕಾರ್ಯಕತ೯ರ ನೆನಪು ಮತ್ತು ತ್ಯಾಗಕ್ಕೆ ಗೌರವ ಸಲ್ಲಿಸುವ ಸಲುವಾಗಿ ರಕ್ತದಾನ ಶಿಬಿರವನ್ನು ಸಕಾ೯ರಿ ಆಸ್ಪತ್ರೆ ಸಾಗರ ಹಮ್ಮಿಕೊಳ್ಳಲಾಯಿತು.

ರಕ್ತದಾನ ಶಿಬಿರ ಸಹಕರಿಸಿದ ಎಲ್ಲಾ ಹಿಂದೂ ಬಾಂದವರು ನಮ್ಮ ಎಲ್ಲಾ ಹಿಂದೂ ಸಂಘಟನೆಯ ಪ್ರಮುಖರು, ಕಾರ್ಯಕತ೯ರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ಎಲ್ಲಾ ಕಾರ್ಯಕರ್ತರಿಗೆ ವಿಶ್ವ ಹಿಂದೂ ಪರಿಷತ್ ಬಜರಂಗದಳ ಸಾಗರ ತಾಲ್ಲೂಕು ಘಟಕದ ವತಿಯಿಂದ ಧನ್ಯವಾದಗಳನ್ನು ಕೋರಿದರು.

ಈ ಸಂದರ್ಭದಲ್ಲಿ ರಾಘವೇಂದ್ರ ಭಟ್, ಐ ವಿ ಹೆಗಡೆ, ಸಂತೋಷ್ ಶಿವಾಜಿ, ವಿಹೆಚ್ ರಾಮಪ್ಪ, ಹಾಗೂ ರೋಟರಿ ಕ್ಲಬ್ ವತಿಯಿಂದ ಶಿವಕುಮಾರ್ ಉಪಸ್ಥಿತರಿದ್ದರು.

ವರದಿ: ಹರ್ಷ ಸಾಗರ
