ಸಾಗರ: ಉಸಿರಾಗಲಿ ಕನ್ನಡ, ಹಸಿರಾಗಲಿ ಕನ್ನಡ ಕಣ ಕಣದಲ್ಲಿ ಬೆರೆಯಲಿ ಕನ್ನಡ. ಪ್ರಾಚೀನ ಭಾಷೆ ಕನ್ನಡ, ವೈವಿಧ್ಯತೆಯ ನೆಲೆ ಕನ್ನಡ, ಏಕತೆಯ ನಾಡು ಕನ್ನಡ. ಬಳಸಿ ಕನ್ನಡ, ಬೆಳಸಿ ಕನ್ನಡ, ಅಜರಾಮರವಾಗಲಿ ಕನ್ನಡ. ಕರುನಾಡಿನ ಸಮಸ್ತ ಜನತೆಗೆ “ಕನ್ನಡ ರಾಜ್ಯೋತ್ಸವ” ದ ಶುಭಾಶಯಗಳು.

ಕನ್ನಡ ನಾಡು, ನುಡಿ, ಸಂಸ್ಕೃತಿ, ಇತಿಹಾಸ, ಪರಂಪರೆಗಳು ಸದಾ ಬೆಳಗಲಿ, ತಾಯಿ ಭುವನೇಶ್ವರಿಯ ಅನುಗ್ರಹದಿಂದ ಸ್ವಚ್ಛ, ಅರೋಗ್ಯಪೂರ್ಣ ಹಾಗೂ ಸಮೃದ್ಧ ಕನ್ನಡ ನಾಡು ನಿರ್ಮಾಣವಾಗಲಿ.
ಸಾಗರದ ಎಸ್ಎನ್ ನಗರ ಅಪ್ಪು ಆಟೋ ಸ್ಟ್ಯಾಂಡ್ ಆಟೋ ಚಾಲಕ ರಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಸಮಸ್ತ ಕನ್ನಡಿಗರಿಗೆ ೬೫ನೇ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯವನ್ನು ಕೋರಿದರು.
ಈ ಸಂದರ್ಭದಲ್ಲಿ ಸಂಜು, ಶಿವು , ಶಾಹಿದ್ , ಅರ್ಫಾತ್ ಸಮದ್, ಜಾವಿದ್ ಅಹಮದ್, ರಾಜು, ದೇವು, ಉಪಸ್ಥಿತರಿದ್ದರು.

ವರದಿ: ಸಿಸಿಲ್ ಸೋಮನ್
