ಪ್ರಧಾನಮಂತ್ರಿ ಕೃಷಿ ಸಿಂಚಾಯ ಯೋಜನೆ ಅಡಿಯಲ್ಲಿ ತೋಟಗಾರಿಕಾ ಸಸಿಗಳ ವಿತರಣೆ.

ಹೊಸನಗರ: ಪ್ರಧಾನಮಂತ್ರಿ ಕೃಷಿ ಸಿಂಚಾಯ ಯೋಜನೆ ಅಡಿಯಲ್ಲಿ ಕೃಷಿ ಇಲಾಖೆ,ಹೊಸನಗರ. ಜಲಾನಯನ ಸಮಿತಿ,ಸೊನಲೆ ಇವರ ಸಂಯುಕ್ತ ಆಶ್ರಯದಲ್ಲಿ ಕೊಳಗಿ ಯಲ್ಲಿ ತೋಟಗಾರಿಕಾ ಸಸಿಗಳ ವಿತರಣೆ ಹಾಗೂ ತರಕಾರಿ ಬೀಜದ ಕಿರುಚೀಲಗಳ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾ ಪಂ ಅಧ್ಯಕ್ಷರಾದ ವೀರೇಶ್ ಆಲವಳ್ಳಿ ಯವರು ವಹಿಸಿಕೊಂಡು ಫಲಾನುಭವಿಗಳಿಗೆ ಸಸಿಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಜಿ ಪಂ ಕೃ & ಕೈ ಸ್ಥಾ ಸ ಅಧ್ಯಕ್ಷರಾದ ಸುರೇಶ್ ಸ್ವಾಮಿರಾವ್, ಜಿ ಪಂ ಸದಸ್ಯರಾದ ಕಲಗೋಡು ರತ್ನಾಕರ್,ಸುಬ್ರಹ್ಮಣ್ಯ ಸ್ವಾಮಿರಾವ್,ಕೃಷಿ ಇಲಾಖೆಯ ಅಧಿಕಾರಿಗಳು,ಜಲಾನಯನ ಸಮಿತಿಯ ಸದಸ್ಯರುಗಳು ಉಪಸ್ಥಿತರಿದ್ದರು.

ವರದಿ: ಹರ್ಷ ಕುಮಾರ್
