ಸಾಗರ: ಸಾಗರ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ, ಮಧುರಾ ಶಿವಾನಂದ ಮತ್ತು ವಿ ಮಹೇಶ’ ರವರಿಂದ ನಾಮಪತ್ರ ಸಲ್ಲಿಕೆ.

ಇಂದು (29-10-2020) ಸಾಗರ ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ಪ್ರಯುಕ್ತ MSIL ಅಧ್ಯಕ್ಷರು ಹಾಗೂ ಶಾಸಕರಾದ ಶ್ರೀ ಹೆಚ್.ಹಾಲಪ್ಪ ನವರು ಅಧ್ಯಕ್ಷ ಸ್ಥಾನಕ್ಕೆ ಶ್ರೀಮತಿ ಮಧುರ ಶಿವಾನಂದ್ (ವಾರ್ಡ್ 20) ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಶ್ರೀ ವಿ.ಮಹೇಶ್ (ವಾರ್ಡ್ 16) ರವರ ಉಮೇದುವಾರಿಕೆ ಸಲ್ಲಿಕೆ ವೇಳೆ ಹಾಜರಿದ್ದು ಶುಭ ಹಾರೈಸಿದರು.

ಈ ಸಂಧರ್ಭದಲ್ಲಿ ಉಪವಿಭಾಗಧಿಕಾರಿಗಳು, ನಗರಸಭೆ ಆಯುಕ್ತರು, ಜಿಲ್ಲಾಧ್ಯಕ್ಷರು, ನಗರ ಮಂಡಲದ ಅಧ್ಯಕ್ಷರು, ನಗರಸಭೆ ಸದಸ್ಯರುಗಳು, ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

ವರದಿ: ಗೌತಮ್ ಕೆ.ಎಸ್
