ಶಿವಮೊಗ್ಗ: 18 – 44 ವರ್ಷದವರಿಗೆ ಲಸಿಕೆ ನೀಡುವಂತಿಲ್ಲ, ರಾಜ್ಯ NHM ಅಭಿಯಾನ ನಿರ್ದೇಶಕರ ಅಧೇಶ.
ಮಾನ್ಯ ರಾಜ್ಯ NHM ಅಭಿಯಾನ ನಿರ್ದೇಶಕರ ಅಧೇಶದ ಮೇರೆಗೆ, ಶಿವಮೊಗ್ಗ ಜಿಲ್ಲಾ ತರಭೇತಿ ಕೇಂದ್ರ, SIMS, ಜಿಲ್ಲೆಯ ಎಲ್ಲಾ ನಗರ ಅರೋಗ್ಯ ಕೇಂದ್ರಗಳಲ್ಲಿ & ತಾಲ್ಲೂಕಿನ ಸಾರ್ವಜನಿಕ ಅಸ್ಪತ್ರೆಗಳಲ್ಲಿ, ಜಿಲ್ಲೆಯ ಪ್ರಾಥಮಿಕ ಅರೋಗ್ಯ ಕೇಂದ್ರಗಳಲ್ಲಿ ಕೋವಿಡ್-19 ಲಸಿಕಾ ಅಭಿಯಾನದಲ್ಲಿ 2 ನೇ ಡೊಸ್ ಲಸಿಕೆ ನೀಡಲು ಬಹಳ ಫಲಾನುಭವಿಗಳ ಬಾಕಿಯಿದ್ದರೂ ಕೂಡ ಮೊದಲ ಡೋಸ್ ಲಸಿಕೆಯನ್ನು offline ನಲ್ಲಿ ನೀಡುತ್ತಿರುವುದು ಗಮನಿಸಲಾಗಿದೆ.. ಇದು ಇಲಾಖೆಯ ಮತ್ತು ರಾಜ್ಯ ಸರ್ಕಾರದ ಆಧೇಶಗಳ ಉಲ್ಲಂಘನೆಯಾಗಿರುತ್ತದೆ.
ನಾಳೆಯಿಂದ ನಡೆಯುವ ಲಸಿಕಾ ಅಧಿವೇಶನಗಳಲ್ಲಿ ಕೇವಲ ಬಾಕಿಯಿರುವ ಶೇಕಡ 100% 2 ನೇ ಡೋಸ್ ಕೋವಿಶೀಲ್ಡ್ & ಕೋವ್ಯಾಕ್ಸಿನ್ ಲಸಿಕೆ ನೀಡಲು ಸೂಚಿಸಲಾಗಿದೆ..
ಮೊದಲನೆ ಡೋಸ್ ಕೋವಿಶೀಲ್ಡ್ ಲಸಿಕೆ ಪಡೆದು 8 ವಾರದ ಬಾಕಿ ಇರುವವರಿಗೆ ಮೊದಲ ಆದ್ಯತೆ ಮೇಲೆ, 6 ರಿಂದ 8 ವಾರ ಬಾಕಿ ಇರುವವರಿಗೆ 2 ನೇ ಆದ್ಯತೆ ಮತ್ತು 45 ದಿನ ತುಂಬಿದವರಿಗೆ ನಂತರ ಎರಡನೇ ಡೋಸ್ ಲಸಿಕೆ ನೀಡುವುದು,Covaxine ಲಸಿಕೆಯನ್ನು 6 ವಾರ ತುಂಬಿದ ಫಲಾನುಭವಿಗಳಿಗೆ ಮೊದಲ ಆದ್ಯತೆ ಮೇಲೆ ನೀಡುವುದು, 45 ದಿನಕ್ಕಿಂತ ಕಡಿಮೆ ದಿನಗಳಿದ್ದಲ್ಲಿ COWIN portal Entry ಮಾಡಲಾಗುವುದಿಲ್ಲ ಎಂಬುದನ್ನು ಸ್ಪಷ್ಟವಾಗಿ ಫಲಾನುಭವಿಗಳಿಗೆ ತಿಳಿಸಿ..
ನಾಳೆ ಹಾಗೂ ಮುಂದಿನ ದಿನಗಳಲ್ಲಿ 2ನೇ ಡೋಸ್ ಫಲಾನುಭವಿಗಳ ಲಸಿಕೆ ಮುಗಿಯುವವರೆಗೂ ಕೇವಲ 2 ನೇ ಡೋಸ್ ತೆಗೆದುಕೋಳ್ಳಬೇಕಾದ ಫಲಾನುಭವಿಗಳನ್ನು ಮಾತ್ರ ಕಡ್ಡಾಯವಾಗಿ ಕರೆತರಲು ಸೂಚಿಸಿ ಕ್ಷೇತ್ರ ಸಿಬ್ಬಂದಿಯವರಿಗೆ ಮತ್ತು ಆಶಾ ಕಾರ್ಯಕರ್ತೆಯರಿಗೆ ಈ ಮಾಹಿತಿ ತಿಳಿಸಲು ಸೂಚಿಸಿದೆ.
ಆಯಾ ದಿನದ ಲಸಿಕಾ ಅಧಿವೇಶನದಲ್ಲಿ ಮೊದಲು ಫಲಾನುಭವಿಗಳ ಸಂಪೂರ್ಣ ಮಾಹಿತಿ COWIN portal ದಾಖಲಿಸಿದ ನಂತರ ಲಸಿಕೆ ನೀಡುವುದು, ಹಾಗೂ ಅಯಾ ದಿನ ಲಸಿಕೆ ನೀಡಿದ ಫಲಾನುಭವಿಗಳ ಸಂಖ್ಯೆ, Portal ನಲ್ಲಿ ದಾಖಲಿಸಿದ ಸಂಖ್ಯೆ ಮತ್ತು ಖರ್ಚಾದ ಲಸಿಕೆ ದಾಸ್ತಾನು ವಿವರವನ್ನು ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಪ್ರತಿದಿನ Online entry ಮಾಡಿ ಮೇಲ್ವಿಚಾರಣೆ ಮಾಡುವುದರಿಂದ ಲಸಿಕಾ ಅಧಿವೇಶನದ ಸಿಬ್ಬಂದಿ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಲು ಸೂಚಿಸಲಾಗಿದೆ..
ನಾಳೆ 18-44 ವರ್ಷದವರಿಗೆ ಲಸಿಕೆ ನೀಡುವಂತಿಲ್ಲ ಆ ಲಸಿಕೆಯನ್ನು ಎಲ್ಲಾ phc, chc ಗಳಿಗೆ ಹಂಚಿ 45 ವರ್ಷ ಮೇಲ್ಪಟ್ಟವರಿಗೆ 2 ನೇ ಡೋಸ್ ಲಸಿಕೆ ನೀಡಲು ಬಳಸುವುದು
ಇಂದ,
ಜಿಲ್ಲಾ RCHO ಅಧಿಕಾರಿಗಳು
ಶಿವಮೊಗ್ಗ .

ವರದಿ: ಸಿಸಿಲ್ ಸೋಮನ್

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್ – ಟೆಕ್ ಇಂಟರ್ನ್ಯಾಷನಲ್ Mob: 7619466155.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 7619466155.
