ಹೊಸನಗರ: ಹೊಸನಗರ ತಾಲ್ಲೂಕು ಶ್ರೀ ನಾರಾಯಣಗುರು ವಿಚಾರ ವೇದಿಕೆ SNGV ತಾಲ್ಲೂಕು ಘಟಕದ ಸ್ಥಾಪನೆ ಸಂಬಂಧ ಸಮಾಜ ಬಂಧುಗಳ ಸಮಾಲೋಚನಾ ಸಭೆ – ರಾಜ್ಯ ಕಾರ್ಯಾಧ್ಯಕ್ಷರುಗಳಾದ ಉಮೇಶ್ ತೀರ್ಥಹಳ್ಳಿ.

ವಿದ್ಯೆಯಿಂದ ಸ್ವತಂತ್ರರಾಗಿ ಸಂಘಟನೆಯಿಂದ ಬಲಯುತರಾಗಿ ಎಂಬ ವಿಶ್ವ ಸಂದೇಶದ ಮೂಲಕ ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನು ನಾವೆಲ್ಲರೂ ಸಂಘಟಿಸೋಣ ಎಂಬ ಸಂದೇಶವನ್ನು ನೀಡಿದ ಬ್ರಹ್ಮಶ್ರೀ ನಾರಾಯಣಗುರುಗಳ ಆಶಯದಂತೆ ನಮ್ಮ ಸಮಾಜದ ಎಲ್ಲ 26 ಒಳ ಪಂಗಡಗಳನ್ನು ಸಂಘಟಿಸುವ ಸಲುವಾಗಿ ಶ್ರೀ ನಾರಾಯಣಗುರು ವಿಚಾರ ವೇದಿಕೆ (ರಿ)., ಕರ್ನಾಟಕ SNGV ಕರ್ನಾಟಕ ರಾಜ್ಯದಾದ್ಯಂತ ನೇರ-ದಿಟ್ಟ ಹೋರಾಟಗಾರ, ಪ್ರಬಲ ಸಂಘಟಕ ಶ್ರೀ ಸತ್ಯಜಿತ್ ಸುರತ್ಕಲ್‌ವರ್ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಕಾರ್ಯಾಚರಿಸುತ್ತಿದ್ದು ರಾಜ್ಯಾಧ್ಯಕ್ಷರ ಅಪ್ಪಣೆಯ ಮೇರೆಗೆ ರಾಜ್ಯ ಕಾರ್ಯಾಧ್ಯಕ್ಷರುಗಳಾದ ಉಮೇಶ್ ತೀರ್ಥಹಳ್ಳಿ ಹಾಗೂ ಮುಡುಬಾ ರಾಘವೇಂದ್ರ, ರಾಜ್ಯ ಸಂಘಟನೆಯ ಕಾನೂನು ಸಲಹೆಗಾರ ಉಮೇಶ್ ಕೆ.ಎಲ್ ಇವರುಗಳ ನೇತೃತ್ವದಲ್ಲಿ ಶಿವಮೊಗ್ಗ ಜಿಲ್ಲಾಧ್ಯಕ್ಷ ಪ್ರವೀಣ್ ಹಿರೇಇಡಗೋಡು ಹಾಗೂ ಶಿವಮೊಗ್ಗ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಿವಮೂರ್ತಿ ಹೆಚ್. ವಿ. ಇವರ ಮುಂದಾಳತ್ವದಲ್ಲಿ ಹೊಸನಗರ ತಾಲ್ಲೂಕು ಶ್ರೀ ನಾರಾಯಣಗುರು ವಿಚಾರ ವೇದಿಕೆ SNGV ತಾಲ್ಲೂಕು ಘಟಕದ ಸ್ಥಾಪನೆ ಸಂಬಂಧ ಸಮಾಜ ಬಂಧುಗಳ ಸಮಾಲೋಚನಾ ಸಭೆ ದಿನಾಂಕ 29-08-2021 “ಪ್ರವಾಸಿ ಮಂದಿರ, ಹೊಸನಗರ ( . )” ಇಲ್ಲಿ ಮಧ್ಯಾಹ್ನ 2.30ಕ್ಕೆ ನಡೆಯಲಿದ್ದು ಸಹೃದಯ ಸಮಾಜ ಬಂಧುಗಳು ಸಮಾಜದ ಹಿತಕ್ಕಾಗಿ ತಮ್ಮ ಸಲಹೆ-ಸಹಕಾರ, ಮಾರ್ಗದರ್ಶನ ನೀಡಲು ಬಂಧುಗಳು ಆಗಮಿಸಬೇಕಾಗಿ ಕೋರುವ ಹಾಗೂ ಈ ಸಂಬಂಧ ನಿಮಗೆ ತಿಳಿದಿರುವ ನಮ್ಮ ಸಮಾಜದ ಇತರರಿಗೂ ಈ ಸಮಾಲೋಚನ ಸಭೆಯಲ್ಲಿ ಭಾಗವಹಿಸಲು ತಿಳಿಸಬೇಕಾಗಿ ಕೋರುತ್ತೇವೆ.

ವರದಿ: ಸಿಸಿಲ್ ಸೋಮನ್

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್ – ಟೆಕ್ ಇಂಟರ್ನ್ಯಾಷನಲ್ Mob: 7619466155.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 7619466155.
