ಹೊಸನಗರ: ಹೊಸನಗರದ ಗಾಯಿತ್ರಿ ಮಾಂಗಲ್ಯ ಮಂದಿರದಲ್ಲಿ ತಾಲ್ಲೂಕು ಬಿಜೆಪಿ ವತಿಯಿಂದ ಆಯೋಜಿಸಿದ್ದ ಅಭಿನಂದನಾ ಸಭೆ.

ಹೊಸನಗರದ ಗಾಯಿತ್ರಿ ಮಾಂಗಲ್ಯ ಮಂದಿರದಲ್ಲಿ ತಾಲ್ಲೂಕು ಬಿಜೆಪಿ ವತಿಯಿಂದ ಆಯೋಜಿಸಿದ್ದ ಹೊಸನಗರ ತಾಲ್ಲೂಕಿನಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಅಭ್ಯರ್ಥಿಗಳಾಗಿ ಸ್ಪರ್ಧೆ ಮಾಡಿ ಗೆಲುವು ಸಾಧಿಸಿದ ಹಾಗೂ ಪರಾಜಿತ ಅಭ್ಯರ್ಥಿಗಳಿಗೆ ಅಭಿನಂದನಾ ಸಭೆ ನಡೆಯಿತು.
ಲೋಕಸಭಾ ಸದಸ್ಯರಾದ ಬಿ.ವೈ.ರಾಘವೇಂದ್ರ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರು,ಶಾಸಕರಾದ ಆರಗ ಜ್ನಾನೇಂದ್ರ ರವರು,MSIL ಅಧ್ಯಕ್ಷರು ಶಾಸಕರಾದ
ಹರತಾಳು ಹಾಲಪ್ಪ ರವರು,ಜಿಲ್ಲಾಧ್ಯಕ್ಷರಾದ
ಟಿ.ಡಿ ಮೇಘರಾಜ್ ರವರು,ಮಾಜಿ ಶಾಸಕರಾದ ಬಿ.ಸ್ವಾಮಿರಾವ್ ರವರು, ಬೆಳಗೋಡು ಗಣಪತಿ ರವರು,ತಾ ಪಂ ಅಧ್ಯಕ್ಷರಾದ
ವೀರೇಶ್ ಆಲವಳ್ಳಿ ರವರು, ಜಿ ಪಂ ಸದಸ್ಯರಾದ
ಸುರೇಶ್ ಸ್ವಾಮಿರಾವ್ ರವರು ಹಾಗೂ ಇನ್ನಿತರ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

ವರದಿ: ಹರ್ಷ ಸಾಗರ
