ಸಾಗರ: ಹೆಮ್ಮಾರಿ ಕೋರೋನ ನಿಯಂತ್ರಣಕ್ಕೆ ಬರಲು ರಾಜ್ಯ ಸುಭಿಕ್ಷೆಗಾಗಿ ಸಾಗರದ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ.

ಕೊರೋನಕ್ಕೆ ತುತ್ತಾಗಿ ಮೃತಪಟ್ಟ ಸರ್ವಧರ್ಮದವರಿಗೆ ದೇವರು ಶಾಂತಿ ನೀಡಿ ಸ್ವರ್ಗ ಪ್ರಾಪ್ತಿಗಾಗಿ (ಝೀಕರ್ ಮಜಿಲಿಸ್) ಪ್ರಾರ್ಥಿನೆ…ಮೌಲಾನ ರಂಝಾನ್ ಅಲಿ.
ದೇಶಾದ್ಯಂತ ಮಹಾಮಾರಿ ಸಾಂಕ್ರಾಮಿಕ ರೋಗ ಕೊರೋನ ವೈರಸ್ ಎರಡನೇ ಅಲೆ ಅಟ್ಟಹಾಸ ಮೆರೆಯುತ್ತಿದ್ದು ಈ ನಿಟ್ಟಿನಲ್ಲಿ ಸಾಗರದ ಎಸ್.ಎನ್ ಸರ್ಕಲ್ ಬಳಿಯಿರುವ ಹಜರತ್ ಸೈಯದ್ ರಾಜ್ ಬಕ್ಷ್ ವಲಿ ಅಲ್ಲಾಃ (ರ,ಅ) ದರ್ಗಾದಲ್ಲಿ ರಾಷ್ಟ್ರದ ಸುಭಿಕ್ಷೆಗಾಗಿ ನಾಡಿನ ಒಳಿತಿಗಾಗಿ ಯೋಗಕ್ಷೇಮಕ್ಕಾಗಿ ಶುಕ್ರವಾರ ಸಂಜೆ ವಿಶೇಷ ಪ್ರಾರ್ಥನೆ(ಝೀಕರ್ ಮಜಿಲಿಸ್) ಸಲ್ಲಿಸಲಾಯಿತು.
ಈ ವಿಶೇಷ ಪ್ರಾರ್ಥನೆ (ಝೀಕರ್ ಮಜಿಲಿಸ್) ಸಂದರ್ಭದಲ್ಲಿ ಸರ್ಕಾರದ ಆದೇಶದಂತೆ ದರ್ಗಾ ಕಮೀಟಿಯ ಕೇವಲ ಏಳು ಸದಸ್ಯರು ಭಾಗವಹಿಸಿ ಕೊರೋನ ನಿಯಮ ಪಾಲಿಸಿ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಪೊಜೆ ಸಲ್ಲಿಸಲಾಯಿತು.
ಈ ಸಮಯದಲ್ಲಿ ಮಾತನಾಡಿದ.ಮೌಲಾನ ರಂಝಾನ್ ಅಲಿ. ದೇಶದಾದ್ಯಂತ ಹಾಗೂ ರಾಜ್ಯದಲ್ಲಿ ಕೊರೋನ ಎರಡನೇ ಅಲೆ ಅಟ್ಟಹಾಸ ಮೆರೆಯುತ್ತಿದೆ , ಸೋಂಕಿನ ಸಂಖ್ಯೆ ತಡೆಗಟ್ಟಲು ರಾಜ್ಯ ಸರ್ಕಾರ ಲಾಕ್ ಡೌನ್ ಘೋಷಣೆ ಮಾಡಿದೆ. ಮತ್ತು ಆರೋಗ್ಯ ಇಲಾಖೆ ಸಹ ಹಲವು ಪ್ರಯತ್ನಗಳು ನಡೆಸುತ್ತಿದೆ. ಇಂದು ನಾವು
ರಾಷ್ಟ್ರದ ಯೋಗಕ್ಷೇಮಕ್ಕಾಗಿ ನಾಡಿನ ಸುಭಿಕ್ಷೆಗಾಗಿ ವಿಶೇಷ ಪೂಜೆ (ಝೀಕರ್ ಮಜಿಲಿಸ್) ನಡೆಸಿದ್ದೇವೆ , ಕೊರೋನಕ್ಕೆ ತುತ್ತಾಗಿ ಮೃತಪಟ್ಟ ಸರ್ವದರ್ಮದವರಿಗೆ ದೇವರು ಶಾಂತಿ ನೀಡಿ.ಸ್ವರ್ಗ ಪ್ರಾಪ್ತಿಗಾಗಿ ಮತ್ತು ಅವರ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಈ ಪ್ರಾರ್ಥಿನೆಯನ್ನು ನಡೆಸಲಾಗಿದೆ. ಎಂದ ಅವರು
ಕೊರೋನ ತಡೆಗಟ್ಟಲು.(ದವಾಯಿ ಭಿ ಔರ್ ದುವಾ ಭಿ) ಪೊಜೆಯ ಜೊತೆಗೆ ಔಷಧಿಗಳನ್ನು ತೆಗೆದುಕೊಳ್ಳಬೇಕು. ಸಾರ್ವಜನಿಕರು ಸರ್ಕಾರದ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಬೇಕು, ಯಾವುದೇ ತಪ್ಪು ಸಂದೇಶಗಳಿಗೆ ತಲೆಕೆಡಿಸಿಕೊಳ್ಳದೆ ವ್ಯಾಕ್ಸಿನ್ ಲಸಿಕೆ ಹಾಕಿಸಿಕೊಳ್ಳಬೇಕು.ಎಂದು ಜನತೆಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಇರ್ಫಾನ್ ರಜ್ವಿ, ಸಮೀವುಲ್ಲಾ, ಸಯ್ಯದ್ ಮೂಜಾಮಿಲ್, ಮುಹಮ್ಮದ್ ಅಯ್ಯೂಬ್, ನ್ಯಾಮತ್ ಅರ್ಫಾದ್ ಹಾಜರಿದ್ದರು.

ವರದಿ: ಸಿಸಿಲ್ ಸೋಮನ್

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್ – ಟೆಕ್ ಇಂಟರ್ನ್ಯಾಷನಲ್ Mob: 7619466155.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 7619466155.
