ಸೊರಬ: ಸೊರಬ ತಾಲ್ಲೂಕು ಆರ್ಯ ಈಡಿಗರ ಸಂಘ ಸಮುದಾಯ ಭವನದ ಗುದ್ದಲಿ ಪೂಜೆಯನ್ನು ನೆರವೇರಿಸಲಾಯಿತು – ಶಾಸಕ ಕುಮಾರ್ ಬಂಗಾರಪ್ಪ.

ದಿನಾಂಕ 27.08.2021 ರ ಶುಕ್ರವಾರದಂದು ಸೊರಬ ಪಟ್ಟಣದಲ್ಲಿ , ಸೊರಬ ತಾಲ್ಲೂಕು ಆರ್ಯ ಈಡಿಗರ ಸಂಘ , ಈಡಿಗರ ಸಮುದಾಯ ಭವನದ ಗುದ್ದಲಿ ಪೂಜೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೆ.ಎಸ್ ಈಶ್ವರಪ್ಪ ನವರು, ಮಾನ್ಯ ಸಂಸದರಾದ ಶ್ರೀ ಬಿ.ವೈ ರಾಘವೇಂದ್ರ ರವರು, ಮಾಜಿ ಸಚಿವರಾದ ಶ್ರೀ ಕಾಗೋಡು ತಿಮ್ಮಪ್ಪನವರೊಂದಿಗೆ ನೆರವೇರಿಸಿದೆನು.

ಈ ಸಂಧರ್ಭದಲ್ಲಿ ಸಿಗಂದೂರು ಧರ್ಮದರ್ಶಿಗಳಾದ ಶ್ರೀ ರಾಮಪ್ಪನವರು, ಮಾಜಿ ಶಾಸಕರಾದ ಶ್ರೀ ಬೇಳೂರು ಗೋಪಾಲಕೃಷ್ಣ ರವರು, ತಾಲ್ಲೂಕು ಆರ್ಯ ಈಡಿಗರ (ಧೀವರ) ಸಂಘದ ಅಧ್ಯಕ್ಷರಾದ ಶ್ರೀ ಅಜ್ಜಪ್ಪನವರು ,

ಪುರಸಭೆ ಅಧ್ಯಕ್ಷರಾದ ಶ್ರೀ ಎಂ.ಡಿ ಉಮೇಶ್ ರವರು, ಈಡಿಗ ಸಂಘದ ಪದಾಧಿಕಾರಿಗಳು, ಗಣ್ಯಾತಿಗಣ್ಯರು, ವಿವಿಧ ಸಮುದಾಯದ ಮುಖಂಡರುಗಳು, ಸಮಾಜ ಬಾಂಧವರು ಉಪಸ್ಥಿತರಿದ್ದರು.

ವರದಿ: ಸಿಸಿಲ್ ಸೋಮನ್

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್- ಟೆಕ್ ಇಂಟರ್ನ್ಯಾಷನಲ್ Mob: 7619466155.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 7619466155.
