“ಅನ್ನಪೂರ್ಣೇಶ್ವರಿಯ ಆತ್ಮಜ, ಅಕ್ಷರ ತೋಟದ ಮಾಲೀಕ, ಆಸರೆ ದಾತ.. ತ್ರಿವಿಧ ದಾಸೋಹಿ”
ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರು ಲಿಂಗೈಕ್ಯವಾಗಿ ಇಂದಿಗೆ 3 ವರ್ಷಗಳಾದವು.
“ಉತ್ತರ ಭಾರತದಲ್ಲಿ ಗಂಗಾ, ದಕ್ಷಿಣ ಭಾರತಕ್ಕೆ ಸಿದ್ದಗಂಗಾ” ಈ ಮಾತನ್ನ ಮಜೀ ಪ್ರಧಾನಿಗಳಾದ ವಾಜಪಯ್ ಅವ್ರು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದಾಗ ಹೇಳಿದ್ದರು, ಅದು ಅಕ್ಷರಶಃ ಸತ್ಯ. ಗಂಗಾ ನದಿ ಹೇಗೆ ಉತ್ತರದಲ್ಲಿ ಎಲ್ಲರ ಹಸಿವಿಗೂ ಉತ್ತರವಾಗಿ, ತೃಷ್ಣ ನೀಗಿಸುವ ಅಮೃತವಾಗಿದ್ದಾಳೋ ಅದೇ ಪರಿಯಲ್ಲಿ ನಮ್ಮ ಸ್ವಾಮಿಗಳು ಲಕ್ಷಾಂತರ ಜನರ ಬದುಕಿಗೆ ದಾರಿದೀಪವಾಗಿದ್ದರೆ, ಅನ್ನ ವಿದ್ಯಾಸರೆಯ ಸೇವಾ ಸುಧೆಯನ್ನ ಹರಸಿ ಹರಿಸಿದ್ದಾರೆ. ಭಕ್ತಾದಿಗಳು ಅವರನ್ನ ನಡೆದಾಡೋ ದೇವರೆಂದು ಪೂಜಿಸ್ತಾರೆ, ಮಠದ ಮಕ್ಕಳು- ವಿದ್ಯಾರ್ಥಿಗಳು ಸ್ವಾಮಿಗಳನ್ನ ಗೌರವದಿಂದ ” ಬುದ್ದಿ” ಅಂತಾರೆ. ಈಶಾರಾಧನೆ, ಭಕ್ತಾದಿಗಳಿಗೆ ಆಶೀರ್ವಚನ ಹಾಗೂ ಮಠದ ಮಕ್ಕಳಿಗೆ ಜ್ಞಾನರ್ಜನೆ ,ಶಿಸ್ತು ಸುಸಂಕೃತಯ ಪಾಲನೆಯನ್ನ ಪ್ರೀತಿಯಿ ಪೋಷಣೆ ಅವರ ಬದುಕಿನ ಧ್ಯೇಯವಾಗಿತ್ತು. ಕವಿ ತೋಟ್ಟವರಿಗೆ ಸಂಸಾರವಿರುವುದಿಲ್ಲ ಬದಲಿಗೆ ದೊಡ್ಡ ಸೇವೇ ಶ್ರದ್ಧೆಯ ಪರಂಪರೆಯನ್ನ ನಮಗಾಗಿ ಕಟ್ಟಿ ಹೋಗಿರ್ತಾರೆ ಅನ್ನೋ ಮಾತಿಗೆ ಪರಮಪೂಜ್ಯ ಶ್ರೀ ಶಿವಕುಮಾರ ಸ್ವಾಮಿಜಿಗಳ ಬದುಕು ತಾತ್ಪರ್ಯವಾಗಿದೆ.
ಸ್ವಾಮಿಗಳ ದರ್ಶನಕ್ಕೆ, ಆಶೀರ್ವಾದ ಪಡೆಯಲು ಯಾರೇ ಬಂದರು ಅವರು ಹೇಳ್ತಿದ್ದ ಮಾತು “ಮರೀದೆ ಪ್ರಸಾದ ತಗೊಂಡು ಹೋಗಿ”( ದಾಸೋಹ ಸ್ವೀಕರಿಸಿ)
ಶಿವಗಂಗೆ ಬೆಟ್ಟದ ಎದುರು ಸ್ವಾಮಿಗಳು ಊರುಗೋಲು ಹಿಡಿದು ನಿಂತಿರುವ 30 ಅಡಿ ಎತ್ತರ ದೊಡ್ಡ ಪ್ರತಿಮೆ ನಿರ್ಮಾಣವಾಗಲಿದೆ. ಪ್ರತಿಮೆಯಷ್ಟೇ ಅಲ್ಲದೆ ಆ ಕ್ಷೇತ್ರದಲ್ಲಿ ದೊಡ್ಡ ಉದ್ಯಾನವನ, ಕಾರಂಜಿ, ಗರಂಥಾಲಯ, ವಸ್ತು ಸಂಗ್ರಹಾಲಯ ಹಾಗೂ ಸ್ವಾಮಿಗಳಿಗೆ ಪರಾಮಪ್ರಿಯವಾದ ” ಅನ್ನದಾಸೋಹ” ಭವನದ ನಿರ್ಮಾಣವಾಗಲಿದ್ದು ಅಂತಾರಾಷ್ಟ್ರೀಯ ಗುಣಮಟ್ಟತೆಯನ್ನ ಹೊಂದಿರಲಾಗುವುದು.

ವರದಿ: P. ಘನಶ್ಯಾಮ್ – ಬೆಂಗಳೂರು

