ಸಾಗರ: ಸಾಗರ ಪೊಲೀಸ್ ಪ್ರಕಟಣೆ,ಅನವಶ್ಯಕವಾಗಿ ಮನೆಯಿಂದ ಹೊರ ಬರೋ ಮುನ್ನ ಎಚ್ಚರ…

ಸಾಗರದಲ್ಲಿ ಬಿಗಿಯಾದ ಲಾಕ್ಡೌನ್ ಕೈಗೊಳ್ಳಲು ಜಿಲ್ಲಾ ರಕ್ಷಣಾಧಿಕಾರಿ ಬಿ. ಎನ್. ಲಕ್ಷ್ಮೀ ಪ್ರಸಾದ್ ಆದೇಶ, ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಸ್ವಾತಂತ್ರ್ಯ ನೀಡಿದೆ..ಸಾಗರ ಪೇಟೆ ಠಾಣೆ ಪೋಲಿಸ್ ಇನ್ಸ್ಪೆಕ್ಟರ್ ಅಶೋಕ್ ಕುಮಾರ್ ಸ್ಪಷ್ಟನೆ.!

ಕೊರೋನಾ ಸೋಂಕು ತಡೆಗೆ ಸರ್ಕಾರ ಕಠಿಣ ಲಾಕ್ ಡೌನ್ ಘೋಷಿಸಿದ್ದು, ಮಾನ್ಯ ಜಿಲ್ಲಾ ರಕ್ಷಣಾಧಿಕಾರಿ ಬಿ.ಎನ್ ಲಕ್ಷ್ಮೀಪ್ರಸಾದ್ ರವರ ಆದೇಶದಂತೆ ಸಾಗರ ಪೊಲೀಸ್ ಉಪಾಧೀಕ್ಷಕರಾದ ಶ್ರೀ ವಿನಾಯಕ್ ಶೇಟಗೆರಿ ರವರ ನಿರ್ದೇಶನದಂತೆ. ನಾಳೆಯಿಂದ ಅನಗತ್ಯ ಓಡಾಟ ಸಂಪೂರ್ಣ ಬಂದ್ ಆಗಲಿದೆ.
ಅನಗತ್ಯವಾಗಿ ಓಡಾಡಿದರೆ ಪೊಲೀಸರಿಂದ ಲಾಠಿ ಏಟು ಬೀಳಲಿದೆ. ಈಗಾಗಲೇ ಬೇಕಾಬಿಟ್ಟಿ ಓಡಾಟ ವಾಹನಗಳನ್ನು ಪೊಲಿಸರು ಸೀಜ್ ಮಾಡಿ ಲಾಕ್ ಡೌನ್ ನಂತರ ವಾಹನಗಳನ್ನು ರಿಲೀಸ್ ಮಾಡಲಾಗುವುದು. ಜೊತೆಗೆ ದಂಡವನ್ನೂ ವಿಧಿಸಲಾಗುತ್ತದೆ.

ಎಂದು ಸಾಗರಪೇಟೆ ಪೊಲೀಸ್ ಇನ್ಸ್ಪೆಕ್ಟರ್ ಅಶೋಕ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ನಾಳೆಯಿಂದ ಇನ್ನೂ ಕಠಿಣ ರೂಲ್ಸ್ ಜಾರಿಗೆ ಬರಲಿದೆ,ಬೆಳಗ್ಗೆ 6ರಿಂದ10ರ ವರೆಗೆ ಮಾತ್ರ ಅಗತ್ಯ ವಸ್ತುಗಳ ಅಂಗಡಿಗಳನ್ನು ಮಾತ್ರ ತೆರೆಯಲು ಅನುಮತಿ. ನಾಲ್ಕು ಚಕ್ರ ವಾಹನ ಮತ್ತು ದ್ವಿಚ್ರವಾಹನಗಳ ಓಡಾಟ ಸಂಪೂರ್ಣ ಬಂದ್. ತಳ್ಳುವ ಗಾಡಿ. ಹಾಪ್ ಕಾಮ್ಸ್ ಅಂಗಡಿಗಳು ಮ.12 ವರೆಗೆ ಮಾತ್ರ.. ಎಲ್ಲಾ ದಿನಸಿ ಅಂಗಡಿ ಮುಂದೆ ಡಿಸ್ಟೆನ್ಸ್ ಮೇಂಟೇನ್ ಮಾರ್ಕ್ ಮಾಡಬೇಕು. ಕೋವಿಡ್ ನಿಯಮ ಉಲ್ಲಂಘಿಸಿದರೆ ಅಂಗಡಿ ಬಾಗಿಲು ಹಾಕಿಸಿ,ಅಂಗಡಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಹೀಗಾಗಿ ಸಾರ್ವಜನಿಕರು ಮನೆಯಲ್ಲಿಯೇ ಇರಿ ಹೊರಗಡೆ ಬರಬೇಡಿ.ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಸಾಗರ ಪೇಟೆ ಠಾಣೆ ಪೋಲಿಸ್ ಇನ್ಸ್ಪೆಕ್ಟರ್ ಅಶೋಕ್ ಕುಮಾರ್ ತಿಳಿಸಿದ್ದಾರೆ.
ಸಾಗರ ಪೇಟೆ ಠಾಣೆ ಪೋಲಿಸ್

ವರದಿ: ಸಿಸಿಲ್ ಸೋಮನ್

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್ – ಟೆಕ್ ಇಂಟರ್ನ್ಯಾಷನಲ್ Mob: 7619466155.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 7619466155.
