ಸಾಗರ: ಸಾಗರ ನಗರಸಭೆ ವತಿಯಿಂದ 10ನೇ ವಾರ್ಡ್ ನಲ್ಲಿ ಸಂಕಷದಲ್ಲಿರುವವರಿಗೆ ಇಂದು ಆಹಾರ ಪುಡ್ ಕಿಟ್ ವಿತರಣೆ – ಕೆ.ಆರ್. ಗಣೇಶ್ ಪ್ರಸಾದ್ ( ನಗರಸಭಾ ಸದಸ್ಯ, ಬಿಜೆಪಿ ನಗರ ಮಂಡಲ ಅಧ್ಯಕ್ಷರು)
ಅನ್ನ ನೀಡುವುದು ಮಹತ್ಕಾರ್ಯದ ಕೆಲಸ , ಬಡ ಮತ್ತು ಮಧ್ಯಮ ವರ್ಗದ ಜನರಿಗೆ ನಗರಸಭೆ ತುರ್ತು ಬದುಕಿಗೆ ನೆರವಾಗಿದೆ. ಕೊರೊನಾದ ಈ ಸಂಧರ್ಭದಲ್ಲಿ ಬಡ ಮತ್ತು ಮಧ್ಯಮ ವರ್ಗ ಸಂಕಷ್ಡದಲ್ಲಿದೆ. ಕೂಲಿಕಾರರು ಕೆಲಸವಿಲ್ಲದೇ ಆದಾಯವಿಲ್ಲದೇ ಜೀವನ ನಡೆಸುವುದು ಕಷ್ಡವಾಗಿದೆ.

ಆದರೆ ಶಾಸಕ ಹಾಲಪ್ಪ ಸಾಗರ-ಹೊಸನಗರ ಕ್ಷೇತ್ರದ ವಿಧಾನ ಸಭಾ ಪ್ರತಿನಿಧಿಯಾಗಿ ನಗರಸಭೆಗೆ ಕೂಡಲೇ ಅನುದಾನವನ್ನು ತಂದು ಊರಿನ ಬಡವರಿಗೆ ಆಹಾರ ನೀಡುವ ಈ ಮಾನವೀಯ ನೆಲೆಯ ಕೆಲಸಕ್ಕೆ ಮುಂದಾಗಿರುವುದು ಅವರ ಜನಪರ ಕಾಳಜಿಗೆ ಹಿಡಿದ ಕೈಗನ್ನಡಿ ಎಂದು ನಗರಸಭೆಯ 10ನೇ ವಾರ್ಡಿನ ಸದಸ್ಯ ಕೆ.ಆರ್. ಗಣೇಶ್’ಪ್ರಸಾದ್ ಹೇಳಿದರು.

ಇಂದು ಸೋಮವಾರ ಸಾಗರ ನಗರಸಭೆ ಗಾಂಧಿ ಮೈದಾನದಲ್ಲಿ ನಗರಸಭೆ ವತಿಯಿಂದ ಕೋರೋನ ಸಂಕಷ್ಟದಲ್ಲಿರುವವರಿಗೆ ಆಹಾರದ ಕಿಟ್ ಆಹಾರದ ಕಿಟ್ ವಿತರಿಸಿ ಮಾತನಾಡಿದ ಶಾಸಕ ಹಾಲಪ್ಪ, ಹಸಿವು ಎಲ್ಲರಿಗೂ ಒಂದೆ. ದಾನಿಗಳು ಸಹ ಈ ಸಮಯದಲ್ಲಿ ಮುಂದೆ ಬಂದು ಬಡವರ ಕಷ್ಟಕ್ಕೆ ನೆರವಾಗಬೇಕು ಎಂದ ಅವರು,ಬಡವರು, ಶ್ರಮಿಕರ ನಡುವೆಯೇ ನಾನು ಬೆಳೆದು ಬಂದವನು.ಆಹಾರ ಇಂದಿನ ಅಗತ್ಯ. ಅದಕ್ಕೆ ಸಾಗರ ನಗರಸಭೆ ಜಿಲ್ಲೆಯಲ್ಲೆ ಮೊದಲ ಬಾರಿಗೆ ಹಣ ಮೀಸಲಿಟ್ಟು ಬಡ ಮತ್ತು ಮಧ್ಯಮ ವರ್ಗದವರ ಹಿತ ಕಾಪಾಡುವತ್ತ ಗಮನ ಹರಿಸಿದೆ ಎಂದು ಹೇಳಿದರು.
ನಗರಸಭಾ ಅಧ್ಯಕ್ಷೆ ಮಧುರಾ ಶಿವಾನಂದ್, ಉಪಾಧ್ಯಕ್ಷ ವಿ. ಮಹೇಶ್, ಸ್ಥಾಯಿಸಮಿತಿ ಅಧ್ಯಕ್ಷ ಡಿ.ತುಕಾರಾಮ, ಸುಧಾ, ಸರೋಜಾ ಭಂಡಾರಿ, ಅರವಿಂದ ರಾಯ್ಕರ್, ಭಾವನ ಸಂತೋಷ್, ಪೌರಾಯುಕ್ತ ನಾಗಪ್ಪ, ನಾಮನಿರ್ದೇಶನ ಸದಸ್ಯ ಪುರುಷೋತ್ತಮ ಬಿ., ರಾಜೇಂದ್ರ ಪೈ ಹಾರಾಡಿ, ದೀಪಕ್ ಮರೂರು ಎಸ್ ಎಂ ಬಾಷಾ ಸಾಬ್.ಸಯ್ಯದ್ ಜಾಕಿರ್. ಇನ್ನಿತರರು ವೇದಿಕೆಯಲ್ಲಿ ಹಾಜರಿದ್ದರು.

ಇದೆ ಸಂದರ್ಭದಲ್ಲಿ ಕೋವಿಡ್ ನಂತಹ ಮಹಾಮಾರಿ ರೋಗದಿಂದ ಲಾಕ್ ಡೌನ್ ಸಂದರ್ಭದಲ್ಲಿ ನಿರಂತರವಾಗಿ ಸಾಮಾಜಿಕ ಸೇವೆ ಗೈದ ಮೂರು ಜನರಿಗೆ. ಛಾಯಾಗ್ರಾಹಕ ಸತೀಶ್ (ಸತೀಶ್ ಸ್ಟುಡಿಯೋ)
ಅಶೋಕ್ ಕುಮಾರ್ ಕೆ.(ನಿವೃತ್ತ ಜಲ ಸಂಪನ್ಮೂಲ) ಉದಯಕುಮಾರ್ ಕುಂಸಿ.(ನಿವೃತ್ತ ಉಪಾದ್ಯಾಯರು ) ಶಾಸಕ ಹಾಗೂ ನಗರಸಭೆ ಯಿಂದ ಸನ್ಮಾನಿಸಿ ಗೌರವಿಸಲಾಯಿತು.

ವರದಿ: ಸಿಸಿಲ್ ಸೋಮನ್

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್ – ಟೆಕ್ ಇಂಟರ್ನ್ಯಾಷನಲ್ Mob: 7619466155.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 7619466155.
