ಸಾಗರ: ಸಾಗರ ನಗರ ಹಾಗೂ ಗ್ರಾಮಾಂತರದಲ್ಲಿ ಭಾನುವಾರ ಸೋಮವಾರ ಮಂಗಳವಾರ ಬುಧವಾರ ಸಂಪೂರ್ಣ ಲಾಕ್ ಡೌನ್ – ಸಾಗರ ಪೇಟೆ ಠಾಣೆ ಪೋಲಿಸ್ ಇನ್ಸ್ಪೆಕ್ಟರ್ ಅಶೋಕ್ ಕುಮಾರ್.
ಸಾಗರ ತಾಲೂಕಿನಲ್ಲಿ ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚಳ ಆಗುತ್ತಿರುವ ಹಿನ್ನಲೆಯಲ್ಲಿ, ತಾಲೂಕು ಆಡಳಿತದಿಂದ ಭಾನುವಾರದಿಂದ ನಾಲ್ಕು ದಿನ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಲಾಗಿದೆ.

ಈ ಕುರಿತಂತೆ ಮಾಹಿತಿ ನೀಡಿದ ಸಾಗರ ಪೇಟೆ ಠಾಣೆ ಪೋಲಿಸ್ ಇನ್ಸ್ಪೆಕ್ಟರ್ ಅಶೋಕ್ ಕುಮಾರ್.
ಸಾಗರ ತಾಲೂಕಿನ ಅನೇಕ ಭಾಗಗಳಲ್ಲಿ ಲಾಕ್ ಡೌನ್ ನಡುವೆಯೂ, ಸೋಂಕಿನ ನಿಯಂತ್ರಣ ಮಾತ್ರ ಆಗಿಲ್ಲ. ಸೋಂಕು ನಿಯಂತ್ರಣಕ್ಕಾಗಿ, ತಾಲೂಕು ಆಡಳಿತದಿಂದ ಭಾನುವಾರದಿಂದ ನಾಲ್ಕು ದಿನ ತಾಲೂಕಿನಾಧ್ಯಂತ ಸಂಪೂರ್ಣ ಲಾಕ್ ಡೌನ್ ಮಾಡುವಂತ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದರು.
ಇನ್ನೂ ಭಾನುವಾರ, ಸೋಮವಾರ, ಮಂಗಳವಾರ ಮತ್ತು ಬುಧವಾರ ಸೇರಿದಂತೆ ನಾಲ್ಕು ದಿನ ಸಂಪೂರ್ಣವಾಗಿ ತಾಲೂಕಿನಾಧ್ಯಂತ ಲಾಕ್ ಡೌನ್ ವಿಧಿಸಲಾಗಿದೆ. ತುರ್ತು ಸಂದರ್ಭದಲ್ಲಿ ಮಾತ್ರವೇ ಓಡಾಡೋದಕ್ಕೆ ಅವಕಾಶ ನೀಡಲಾಗಿದೆ. ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡೋದಕ್ಕೆ ಸೂಚಿಸಲಾಗಿದೆ. ಕೇವಲ ಹಾಲು, ಮೆಡಿಕಲ್ ಶಾಪ್, ಪೆಟ್ರೋಲ್ ಬಂಕ್, ಬ್ಯಾಂಕ್ ಸೇರಿದಂತೆ ಕೆಲ ಅಗತ್ಯಸೇವೆ ಒದಗಿಸುವಂತ ಇಲಾಖೆಗಳಿಗೆ ಮಾತ್ರವೇ ಅನುಮತಿಸಲಾಗಿದೆ ಎಂದರು. ಒಂದು ವೇಳೆ ಈ ನಿಯಮ ಮೀರಿ ರಸ್ತೆಗೆ ಇಳಿಯುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.

ಅಂತಹ ವಾಹನಗಳನ್ನು ಪೊಲೀಸರು ಸೀಜ್ ಕೂಡ ಮಾಡಲಿದ್ದಾರೆ.

ತಾಲೂಕಿನ ಜನರು ಕೊರೋನಾ ನಿಯಂತ್ರಣಕ್ಕೆ ಸಹಕರಿಸುವಂತೆ ಸಾಗರ ಪೇಟೆ ಠಾಣೆ ಪೋಲಿಸ್ ಇನ್ಸ್ಪೆಕ್ಟರ್ ಅಶೋಕ್ ಕುಮಾರ್ ಅವರು ಮನವಿ ಮಾಡಿದರು.

ವರದಿ: ಸಿಸಿಲ್ ಸೋಮನ್

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್ – ಟೆಕ್ ಇಂಟರ್ನ್ಯಾಷನಲ್ Mob: 7619466155.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 7619466155.
