ಸಾಗರ: ಸಾಗರದ ಇಂದಿರಾ ಕ್ಯಾಂಟೀನ್ ಸೇವೆಗೆ ಚಾಲನೆ – ಶಾಸಕರು ಹೆಚ್.ಹಾಲಪ್ಪ.
24-05-2021 ರ ಸೋಮವಾರ ಮಧ್ಯಾಹ್ನ 12 ಘಂಟೆಗೆ ಸಾಗರದ ಇಂದಿರಾ ಕ್ಯಾಂಟೀನ್ MSIL ಅಧ್ಯಕ್ಷ ಶಾಸಕ ಹರತಾಳು ಹಾಲಪ್ಪ. ಉದ್ಘಾಟಿಸಿದರು. ಬಡವರು ಸೇವೆಯ ಸದುಪಯೋಗ ಪಡೆದುಕೊಳ್ಳಬೇಕಾಗಿ ಶಾಸಕರು ಹೆಚ್.ಹಾಲಪ್ಪ ವಿನಂತಿಸಿದರು.

ಕೋವಿಡ್ 19 ವೈರಾಣುವಿನ ಹರಡುವಿಕೆಯನ್ನು ತಡೆಗಟ್ಟಲು ರಾಜ್ಯದಲ್ಲಿ ಲಾಕ್ಡೌನ್ ಘೋಷಿಸಿದ್ದು, ಇದರಿಂದ ಬಡವರಿಗೆ ಕೂಲಿಕಾರ್ಮಿಕರಿಗೆ ಆಹಾರ ಸಿಗದೇ ಕಷ್ಟಪಡುವಂತಾಗಿದೆ.ಹೀಗಾಗಿ ಈ ಲಾಕ್ಡೌನ್ ಅವಧಿಯಲ್ಲಿ ಇಂದಿರಾ ಕ್ಯಾಂಟೀನ್‌ಗಳಲ್ಲಿ ಉಚಿತವಾಗಿ ಆಹಾರವನ್ನು ಒದಗಿಸುವಂತೆ ಸರ್ಕಾರ ಆದೇಶಿಸಿತ್ತು.

ಈ ಸಂದರ್ಭದಲ್ಲಿ ಸಾಗರ ಉಪ ವಿಭಾಗೀಯ ಅಧಿಕಾರಿ ನಾಗರಾಜ್ ಎಲ್. ನಗರಸಭೆ ಆಯುಕ್ತರು ನಾಗಪ್ಪ ಹೆಚ್ ಕೆ, ನಗರಸಭೆ ಪರಿಸರ ಅಭಿಯಂತರು ಮದನ್ ಕೆ, ನಗರಸಭೆ ಅಧ್ಯಕ್ಷೆ ಮಧುರ ಶಿವಾನಂದ್, ನಗರಸಭಾ ಉಪಾಧ್ಯಕ್ಷ ಮಹೇಶ್ ವಿ, ನಗರಸಭೆಯ ಸರ್ವ ಸದಸ್ಯರು. .ನಗರಸಭೆ ಅರೋಗ್ಯ ನಿರೀಕ್ಷಕ ಶೈಲೇಶ್.ನಗರಸಭೆ ಕಿರಿಯ ಆರೋಗ್ಯ ನಿರಕ್ಷಕಿ ರಚನಾ.ಮೊದಲಾದವರು ಉಪಸ್ಥಿತರಿದ್ದರು.

ವರದಿ: ಸಿಸಿಲ್ ಸೋಮನ್

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್ – ಟೆಕ್ ಇಂಟರ್ನ್ಯಾಷನಲ್ Mob: 7619466155.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 7619466155.
