ಬೆಂಗಳೂರು: ಸಂಸತ್ತಿನೊಳಗೆ ಮೊಬೈಲ್ ಬಳಕೆ.. ಸ್ಪೀಕರ್ ತೀವ್ರ ಅಸಮಾಧಾನ.
“ಮೊಬೈಲ್ ಫೋನ್ ಬಳಕೆ ನಿಷೇಧ”!! ಸಾಮಾನ್ಯವಾಗಿ ದೇವಸ್ಥಾನ, ಶಾಲಾ ಆವರಣದಲ್ಲಿ ಅಥವಾ ಆಸ್ಪತ್ರೆಗಳಲ್ಲಿ ಈ ನಾಮಫಲಕಗಳನ್ನು ಕಂಡಿರುತ್ತಿವಿ, ಅಂತೆಯೇ ಸಂಸತ್ತಿನೊಳಗೂ ಅಧಿವೇಶನದ ಸಮಯದಲ್ಲಿ ಮೊಬೈಲ್ ಬಳಕೆ ಸಲ್ಲದು. ನೆನ್ನೆ ರಾಜ್ಯಸಭಾ ಮೇಲ್ಮನೆಯ ಸಭೆಯಲ್ಲಿ ಕೃಷಿ ಖಾಯ್ದೆಯ ತಿದ್ದುಪಡಿ ಕುರಿತಾದ ಚರ್ಚೆ ವಾದಗಳು ನಡೆಯುತ್ತಿದ್ದವು, ವಿರೋಧ ಪಕ್ಷದ ಕೆಲವು ಸದಸ್ಯರು ಆ ಸನ್ನಿವೇಶವನ್ನು ತಮ್ಮ ಮೊಬೈಲ್ ಫೋನ್ ಬಳಸಿ ರೆಕಾರ್ಡ್ ಮಾಡುವುದರ ಜೊತೆಗೆ ಅದನ್ನ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟಿದ್ದಾರೆ, ಉಪ ರಾಷ್ಟ್ರಪತಿ ಸ್ಪೀಕರ್ ಎಂ. ವೆಂಕಯ್ಯ ನಾಯ್ಡು ಅವರ ಗಮನಕ್ಕೆ ಇದು ಬಂದ ಬಳಿಕ ಸದಸ್ಯರನ್ನ ತೀವ್ರ ತರಾಟೆಗೆ ತೆಗೆದುಕೊಂಡರು.” ಉರಿಯೋ ಬೆಂಕಿಗೆ ತುಪ್ಪ ಹಾಕಿ, ಚಿವುಟಿ ಮಜಾ ತೆಗೂಡುಕೊಳ್ಳು ಕೆಲಸ ಮಾಡಿದ್ದಾರೆ”. ನಮ್ಮನ್ನಾಳುವ, ದೇಶ ಕಟ್ಟುವಲ್ಲಿ ಮುಂದಾಳತ್ವ ವಹಿಸುವ ಪ್ರತಿನಿಧಿಗಳು ಪಾರ್ಲಿಮೆಂಟ್ ನಲ್ಲಿ ನಿಯಮ ಉಲ್ಲಂಘನೆಗೆ, ಉಡಾಫೆ ತನಕ್ಕೆ ಮಾತು ಕೇಳ್ತಾರೆ ಅಂದ್ರೆ ಅದು ಶುದ್ಧ ಅವಮಾನ. ಶಿಸ್ತು , ವಿವೇಚನೆ ಎರಡನ್ನು ಸ್ವಾಭಾವವಾಗಿ ರೂಡಿಸಿಕೊಳ್ಳದೇ ಇದ್ದಾಗ ಇಂತಹ ಸಂಗತಿ ಸಹಜ. ಇಂತಹ ವಿವೇಕ ಹೀನರು ಆ ಸ್ಥಾನದಲ್ಲಿ ಕುಳಿತುರುವದು ನಮ್ಮಗಳ ದುರ್ದೈವವೇ ಹೌದು.

ವರದಿ: P. ಘನಶ್ಯಾಮ್ – ಬೆಂಗಳೂರು

