ವರದಪುರ: ಶ್ರೀ ಶ್ರೀಧರಾಶ್ರಮವನ್ನು ಭಕ್ತಾದಿಗಳಿಗೆ ಶ್ರೀ ಭಗವಾನರ ದರ್ಶನಕ್ಕೆ ಅನುವಾಗುವಂತೆ ತೆರೆಯಲಾಗುತ್ತದೆ.

ದಿನಾಂಕ 07-07-2021ರ ಬುಧವಾರದಿಂದ ಶ್ರೀ ಶ್ರೀಧರಾಶ್ರಮವನ್ನು ಭಕ್ತಾದಿಗಳಿಗೆ ಶ್ರೀ ಭಗವಾನರ ದರ್ಶನಕ್ಕೆ ಅನುವಾಗುವಂತೆ ತೆರೆಯಲಾಗುತ್ತದೆ. ಪ್ರತಿದಿನ ಬೆಳಗ್ಗೆ 7ರಿಂದ 9.30ರ ವರೆಗೆ ಮತ್ತು ಮಧ್ಯಾಹ್ನ 2.30ರಿಂದ 4.30 ರವರೆಗೆ ಭಕ್ತಾದಿಗಳ ಪ್ರವೇಶಕ್ಕೆ ಸಮಯ ನಿಗದಿಪಡಿಸಲಾಗಿದೆ. ಆಶ್ರಮವನ್ನು ಪ್ರವೇಶಿಸುವಾಗ ಕಡ್ಡಾಯವಾಗಿ ಮಾಸ್ಕ್ ನ್ನು ಧರಿಸತಕ್ಕದ್ದು ಮತ್ತು ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು.

ಶ್ರೀ ಭಗವಾನರ ಸಮಾಧಿ ಮಂದಿರದ ಒಳಗೇ ಯಾರಿಗೂ ಪ್ರವೇಶವಿರುವುದಿಲ್ಲ. ಹೊರಗಡೆಯಿಂದಲೇ ದರ್ಶನ ಮಾಡತಕ್ಕದ್ದು ದಯಮಾಡಿ ಶ್ರೀ ಮಹಾಮಂಡಲಕ್ಕೆ ಯಾವುದೇ ರೀತಿಯ ಒತ್ತಡವನ್ನು ತರಬಾರದಾಗಿ ತಮ್ಮಲ್ಲಿ ಕಳಕಳಿಯ ವಿನಂತಿ. ಭಕ್ತಾದಿಗಳು ಇದಕ್ಕೆ ಸಹಕರಿಸುವಿರಾಗಿ ನಂಬಿರುತ್ತೇವೆ.ಈ ಸೌಲಭ್ಯವು ಕರ್ನಾಟಕ ಸರ್ಕಾರದ ಆದೇಶದಂತೆ 19-07-2021 ರವರೆಗೆ ಜಾರಿಯಲ್ಲಿರುತ್ತದೆ. ನಂತರ ಸರ್ಕಾರಿ ಆದೇಶದನ್ವಯ ಬದಲಾವಣೆಯಾಗುತ್ತದೆ.
ವಂದನೆಗಳೊಂದಿಗೆ : ಕಾರ್ಯದರ್ಶಿ
ಶ್ರೀ ಶ್ರೀಧರ ಸೇವಾ ಮಹಾಮಂಡಲ(ರಿ.)
ಶ್ರೀ ಶ್ರೀಧರರಾಶ್ರಮ-ಶ್ರೀಕ್ಷೇತ್ರ ವರದಪುರ

ವರದಿ: ಸಿಸಿಲ್ ಸೋಮನ್

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್ – ಟೆಕ್ ಇಂಟರ್ನ್ಯಾಷನಲ್ Mob: 7619466155.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 7619466155.
