ಬೆಂಗಳೂರು: ಮರಿಯಾದ ಪುರಿಷ ಶ್ರೀ ರಾಮ ಅಂತ ನಾವು ಪೂಜಿಸೋ ರಾಮನಿಗೆ ಅವರೂರಲ್ಲೇ ಮಂದಿರ..

ಶ್ರೀ ರಾಮ ಚಂದ್ರ ಪ್ರಭುವಿಗೆ ಭಾರತವಷ್ಟೇ ಅಲ್ಲದೇ ಪ್ರಪಂಚದಾದ್ಯಂತ ಬೃಹತ್ ಮಂದಿರಗಳನ್ನ ನಿರ್ಮಿಸಿ, ಭಕ್ತಿ ಸಮರ್ಪಿಸುತ್ತಾ ನಿತ್ಯ ಕರ್ಮಾನುಷ್ಠಾನ ಅರ್ಪಣೆಯಾಗಿದೆ. ಆದ್ರೆ ರಾಮನು ಜನ್ಮವೆತ್ತ ಭೂಮಿಯಾದ ” ಅಯೋಧ್ಯಾ” ನಗರಿಯಲ್ಲಿ ನಿರ್ಮಾಣವಾಗಬೇಕಿದ್ದ ಮಹಾಮಂದಿರ 400 ವರ್ಷಗಳಿಂದ ನಾನಾ ಕಾರಣಗಳಿಂದ ನಾಂದಿ ಯಾಗದೆ ಸ್ಥಗಿತಗೊಂಡಿತ್ತು. ಸುಪ್ರೀಂ ಕೋರ್ಟ್ನಲ್ಲಿ ಐತಿಹಾಸಿಕ ತೀರ್ಪು ಹೊರ ಬಂದ ಬಳಿಕ ಅಯೋಧ್ಯೆಯಲ್ಲೇ ಆಗಸ್ಟ್ 5 ನೆ ತಾರಿಕಿನಂದು ರಾಮಮಂದಿರ ನಿರ್ಮಾಣಕ್ಕಾಗಿ ಭೂಮಿ ಪೂಜನ್ ಕಾರ್ಯಕ್ರಮ ನೆರವೇರಿತು.ಮಂದಿರ ಕಟ್ಟಡದ ನೀರ್ಮಾಣದ ಸಲುವಾಗಿ ಮೊದಲ ಇಟ್ಟಿಗೆಯಿಟ್ಟು ಹೋಮ ಹವನಾದಿ ಪೂಜೆ ಸಲ್ಲಿಸಿದ್ರು ಪ್ರಧಾನಿ ಶ್ರೀ ನರೇಂದ್ರಮೋದಿಯವರು “ರಾಮಲಲ್ಲಾ ” ವಿಗ್ರಹಕ್ಕೆ ಶಿರಾಸಾಬಾಗಿ ಭಕ್ತಿಯಿಂದ ಪ್ರಾಣಮ ಅರ್ಪಿಸಿದರು.

ಅದಾದ ಬಳಿಕ ಕೋಟ್ಯಾನು ಕೋಟಿ ರಾಮನ ಭಕ್ತರು , ಮಂದಿರ ನಿರ್ಮಾಣಕ್ಕೆ ಎಟುಕುವ ವೆಚ್ಚವನ್ನ ಭರಿಸುವುದಾಗಿ ಸರದಿಯಲ್ಲಿ ನಿಂತು ನಾ ಮುಂದು ತಾಮುಂದೆಂದರು. ನಿಧಿ ಸಮರ್ಪಣೆಗಾಗಿ ವ್ಯವಸ್ಥಿತ ಕ್ರಮಭದ್ದ ಮಾರ್ಗವನ್ನ ಸರ್ಕಾರ ಆಯೋಜಿಸಿದ್ದು, ಅದರ ಅನುಸಾರ ನಿರ್ವಹಣೆ ಮಾಡಬೇಕಾಗಿ ಸೂಚಿಸಿದೆ. ಸೇವಾ ಟ್ರಸ್ಟ್ S.B.I ಬ್ಯಾಂಕ್ ಖಾತೆ ಸಂಖ್ಯೆಯಾದ”39161 495808″ ಗೆ ಇಷ್ಟಾರ್ಥ ನಿಧಿಯ ಅರ್ಪಿಸ್ ಬಹುದು, ಅದಾಗದಿದ್ದಲ್ಲಿ ರಾಮ ಜನ್ಮ ಸೇವಾ ಟ್ರಸ್ಟಿನ ಸ್ವಯಂ ಸೇವಕರು ದೇಶದಾದ್ಯಂತ ಖುದ್ದ ಅವರೇ ಮನೆ ಮನೆಗು ತೆರಳಿ,ಅಲ್ಲಿನ ಸ್ಥಳೀಯ ನಿವಾಸಿಗಳಿಂದ ರಾಮನ ನಿವಾಸದ ನಿರ್ಮಾಣಕ್ಕೆ ನಿಧಿ ಸಂಗ್ರಹಿಸಹಲು ಮುಂದಾಗಿದ್ದಾರೆ, ಹಾಗೆ ಅರ್ಪಿಸಿದ ನಗದಿಗೆ ರಸೀತಿಯನ್ನ ತಕ್ಷಣವೇ ನೀಡಲಾಗುತ್ತದೆ. ಲಕ್ಷಾಂತರ ಸ್ವಯಂ ಸೇವಾ ಕಾರ್ಯಕರ್ತರು ಮನೆಗಳಿಗೆ ಭೇಟಿ ನೀಡಿ ವರ್ತಮಾನವನ್ನು ತಿಳಿಸಿದಾಕ್ಷಣ, ಮರು ಚಿಂತಿಸದೆ ಭಕ್ತರು ತಮ್ಮ ತುಂಬು ಹೃದಯದಿಂದ ಯಥಾಶಕ್ತಿ ನಗದನ್ನ ನೀಡಿದ್ದಾರೆ.ಒಂದು ಸಮುದಾಯ, ಧರ್ಮಕ್ಕೆ ಸೀಮಿತವಾಗದೆ ಈ ಅಭಿಯಾಅನ್ ಇಡೀ ಭಾರತ ಖಂಡ ಏಕಮನೋಚಿತ್ತವಾಗಿ ಒಮ್ಮತದ ಇಟ್ಟಿಗೆಯನ್ನ ಧಾರೆ ಎರೆದಿದೆ. ಜನವರಿ 16 ರಿಂದ ಪ್ರಾರಂಭವಾದ ಈ ಅಭಿಯಾನ ಫೆಬ್ರವರಿ 05 ತಾರೀಕಿನವರೆಗೂ(20 ದಿನಗಳ ಕಾಲ) ಸಾಗಲಿದೆ.

ಪರಮೇಶ್ವರನ ವಿಗ್ರಹದ ಸ್ಪರ್ಶದಿಂದ ಜಲವು “ತೀರ್ಥವಾಯ್ತು”
ವಿಷ್ಣುವಿಗೆ ನೈವೇದ್ಯೆ ಮಾಡಿದ ಬಳಿಕ
ಶಾಲ್ಯಾನ್ನ “ಪರಮಾನ್ನ” ಪ್ರಸಾದವಾಯ್ತು.!!!
ಅಸುರರಾದ ಮಾರಿಚ ಸುಬಾಹುವನ್ನ ಮರ್ದಿಸಿ ಕೋದಂಡ ಪಿಡಿದ ಆದೇ ಕೈ ಶಭರಿಯ ನಿವೇದನೆಗೆ ಶರಣಾಗಿ ನಮಸ್ಕರಿಸಿತು. ಬದುಕಲ್ಲಿ ಆದರ್ಶ, ಸಿದ್ದಾಂತವನ್ನ ತನ್ನ ಬಾಣದ ಗುರಿಯಂತೆ ದಿಟ್ಟವಾಗಿ ರೂಡಿಸಿಕೊಂಡು ಪಾಲಿಸಿದ ಪುರುಷೋತ್ತಮ ಶ್ರೀ ರಾಮನ ನೆರಳು ಮತ್ತು ಪಾದಸ್ಪರ್ಶದಿಂದ ಅಯ್ಯೊಧ್ಯ ನಗರಿಯ ಮಣ್ಣು ಮೃತ್ತಿಕೆಯಾಯಿತು. ಇನ್ನು ಆ ಮಂದಿರದ ಕಟ್ಟಡ ಬರಿ ಗೋಡೆಯಲ್ಲ ರಾಮ ಚರಿತೆ ಸಾರುವ ಭಕ್ತಿ ಫಲಕವಾಗುವುದು….

ವರದಿ: P. ಘನಶ್ಯಾಮ್ – ಬೆಂಗಳೂರು

