ತೀರ್ಥಹಳ್ಳಿ :- ಶಿವಮೊಗ್ಗ ಮಹಾತ್ಮಾ ಗಾಂಧಿ ಗ್ರಾಮೀಣ ಅಭಿವೃದ್ದಿ ಮತ್ತು ಸಮಾಜ ಪರಿವರ್ತನಾ ಟ್ರಸ್ಟ್ .ಶಿವಮೊಗ್ಗ ಹೆಲ್ಪಿಂಗ್ ಹ್ಯಾಂಡ್ಸ್ ,ಯೂತ್ ಹಾಸ್ಟಲ್ ಶಿವಮೊಗ್ಗ ಮುಂತಾದ ಸಾಮಾಜಿಕ ಸೇವಾ ಸಂಸ್ಥೆಗಳಿಂದ ತೀರ್ಥಹಳ್ಳಿಯಲ್ಲಿ ಐನೂರು ಆರೋಗ್ಯ ಕಿಟ್ ಗಳ ವಿತರಣೆಗೆ ವ್ಯವಸ್ಥೆ.

ಕೊರೋನಾ ಸಮಸ್ಯೆಗಳಿಂದ ಇಂದು ಸಮಾಜದ ಅನೇಕ ವರ್ಗದ ಜನರು ವಿವಿಧ ರೀತಿಯಲ್ಲಿ ತೊಂದರೆಗೆ ಸಿಲುಕಿದ್ದು ಜೀವನೋಪಾಯಕ್ಕೆ ಕಷ್ಟಕರವಾದ ಸ್ಥಿತಿ ನಮ್ಮ ಮುಂದಿದೆ .ಇದನ್ನರಿತ ಶಿವಮೊಗ್ಗ ಹೆಲ್ಪಿಂಗ್ ಹ್ಯಾಂಡ್ಸ್, ಮಹಾತ್ಮಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಸಮಾಜ ಪರಿವರ್ತನಾ ಟ್ರಸ್ಟ್ ಶಿವಮೊಗ್ಗ, ಯೂತ್ಸ್ ಹಾಸ್ಟೆಲ್ ಶಿವಮೊಗ್ಗ .ಮುಂತಾದ ವಿವಿಧ ಸಾಮಾಜಿಕ ಸೇವಾ ಸಂಸ್ಥೆಗಳು ಜಂಟಿಯಾಗಿ ಜಿಲ್ಲೆಯಲ್ಲಿ ಕೊರೋನಾ ವಾರಿಯರ್ಸ್ ಗಳಿಗೆ ಆರೋಗ್ಯ ಕಿಟ್ ಗಳನ್ನು ಹಂಚುತ್ತಿದ್ದು ಇದರ ಅಂಗವಾಗಿ ತೀರ್ಥಹಳ್ಳಿಯಲ್ಲಿ ಇಂದು ಸುಮಾರು ಐನೂರು ಕಿಟ್ಟುಗಳನ್ನು ಹಂಚುವ ಸಲುವಾಗಿ ,ದೇವಂಗಿ ಸಮೀಪದ ವಾಟಗಾರು ಕೋವಿಡ್ ಚಿಕಿತ್ಸಾ ಸೆಂಟರ್ ನಲ್ಲಿ ತೀರ್ಥಹಳ್ಳಿ ಕ್ಷೇತ್ರದ ಶಾಸಕರಾದ ಆರಗ ಜ್ಞಾನೇಂದ್ರರವರು ಹಸ್ತಾಂತರವನ್ನು ಮಾಡಿದ್ರು .ಈ ಚಿಕ್ಕ ಸಮಾರಂಭದಲ್ಲಿ ಶಿವಮೊಗ್ಗದ ಮಹಾತ್ಮಾಗಾಂಧಿ ಮಹಿಳಾ ಅಭಿವೃದ್ಧಿ ಮತ್ತು ಸಮಾಜ ಪರಿವರ್ತನಾ ಟ್ರಸ್ಟ್ ನ ಬಸವರಾಜ ಮಠ, ನವೀನ್, ದಿಲೀಪ್ ನಾಡಿಗ್ ಮುಂತಾದವರು ಉಪಸ್ಥಿತರಿದ್ದರು.

ವರದಿ: ಲಿಯೋ ಅರೋಜ – ತೀರ್ಥಹಳ್ಳಿ

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್ – ಟೆಕ್ ಇಂಟರ್ನ್ಯಾಷನಲ್ Mob: 7619466155.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 7619466155.
