ಸಾಗರ: ಶಾಸಕರಾದ ಹೆಚ್.ಹಾಲಪ್ಪ ನವರ ನೇತೃತ್ವದಲ್ಲಿ, ಸಾಗರ ಮತ್ತು ಹೊಸನಗರ APMC ನಿಯೋಗ ಸಹಕಾರ ಸಚಿವರಾದ ಎಸ್.ಟಿ ಸೋಮಶೇಖರ್ ರವರ ಭೇಟಿ.

ಶಾಸಕರಾದ ಹೆಚ್.ಹಾಲಪ್ಪ ನವರ ನೇತೃತ್ವದಲ್ಲಿ, ಸಾಗರ ಮತ್ತು ಹೊಸನಗರ APMC ನಿಯೋಗ ಸಹಕಾರ ಸಚಿವರಾದ ಎಸ್.ಟಿ ಸೋಮಶೇಖರ್ ರವರನ್ನು ಭೇಟಿಯಾಗಿ, ವರ್ತಕರಿಗೆ APMC ನಿವೇಶನ ಮತ್ತು ಗೋದಾಮುಗಳನ್ನು ಕಡಿಮೆ ದರದಲ್ಲಿ ನೀಡುವಂತೆ, ಗ್ರಾಮೀಣ ಭಾಗಗಳಲ್ಲಿ ಗೋದಾಮುಗಳನ್ನು ನಿರ್ಮಿಸುವ ಬಗ್ಗೆ ಹಾಗೂ APMC ಸಮಸ್ಯೆಗಳ ಬಗ್ಗೆ ಚರ್ಚಿಸಿದರು. ಮಾಜಿ ಶಾಸಕರಾದ ಬಿ.ಸ್ವಾಮಿರಾವ್, ಚೇತನ್ ರಾಜ್ ಕಣ್ಣೂರು, ಅಶೋಕ್, ಕೆ.ವೈ.ರಾಮಚಂದ್ರಪ್ಪ, ಕಲ್ಯಾಣಪ್ಪ ಗೌಡ್ರು, ಸೂರ್ಯನಾರಾಯಣ, MS ನಾಗರಾಜ್, ಈಶ್ವರಪ್ಪ ಗೌಡ, ಗುರುದತ್ತ, ಇಂದೂಧರ ಗೌಡ್ರು, ಎಂ.ಡಿ.ಉಸ್ಮಾನ್ ರವರು ಮತ್ತಿತರರು ಉಪಸ್ಥಿತರಿದ್ದರು.

ವರದಿ: ಗೌತಮ್ ಕೆ.ಎಸ್

