ಬೆಂಗಳೂರು : ರಾಜ್ಯದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಬೆಳ್ಳಂದೂರು ಐ.ಟಿ ಕಾರಿಡಾರ್ ಕೆಐಎಡಿಬಿ ಭೂಸ್ವಾಧೀನ ಡಿನೋಟಿಫಿಕೇಶನ್ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ರಾಜಿನಾಮೆ ನೀಡಬೇಕೆಂದು ಆಗ್ರಹಿಸಿ ಪ್ರತಿಭಟನೆ.
ರಾಜ್ಯದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಬೆಳ್ಳಂದೂರು ಐ.ಟಿ ಕಾರಿಡಾರ್ ಕೆಐಎಡಿಬಿ ಭೂಸ್ವಾಧೀನ ಡಿನೋಟಿಫಿಕೇಶನ್ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಕೂಡಲೇ ಹೈಕೋರ್ಟ್ ಆದೇಶಕ್ಕೆ ತಲೆಬಾಗಿ ರಾಜಿನಾಮೆ ನೀಡಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು. ಡಿನೋಟಿಫಿಕೇಷನ್ ಹಗರಣದಲ್ಲಿ ದಾಖಲೆ ನಿರ್ಮಿಸಿರುವ ಬಿಜೆಪಿ ಸರ್ಕಾರ ಹಾಗೂ ಮಾಜಿ ಮುಖ್ಯಮಂತ್ರಿ ಪ್ರಸ್ತುತ ರಾಜ್ಯದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನವರ ಡಿನೋಟಿಫಿಕೇಶನ್ ಅಕ್ರಮ ಪ್ರಕರಣದಲ್ಲಿ ಹೈಕೋರ್ಟ್ ನೀಡಿರುವ ಆದೇಶಕ್ಕೆ ತಲೆಬಾಗಿ ರಾಜೀನಾಮೆ ನೀಡಬೇಕು ಬಿಜೆಪಿ ಭ್ರಷ್ಟಾಚಾರದ ಪ್ರಮುಖ ಮುಖ ಎಂಬುದು ತಿಳಿದಿದ್ದರೂ ಬಿ.ಎಸ್. ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಸುವುದು ಬಿಜೆಪಿ ಪಕ್ಷಕ್ಕೆ ಅನಿವಾರ್ಯವೇ ಎಂಬುದನ್ನು ಬಿಜೆಪಿ ಜನತೆಗೆ ತಿಳಿಸ ಬೇಕು. ನರೇಂದ್ರ ಮೋದಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುತ್ತವೆ ಎಂಬ ಮಾತು ಸುಳ್ಳು ಇದು ಜನರನ್ನು ವಂಚಿಸುವ ಹೇಳಿಕೆಯಾಗಿದೆ ಕೇವಲ ಚುನಾವಣೆ ಪ್ರಚಾರಕ್ಕೆ ಮಾತ್ರ ಬಳಸುವ ಘೋಷಣೆಯಾಗಿ ಉಳಿದಿದೆ ನಾನು ತಿನ್ನಲ್ಲ ತಿನ್ನಕ್ಕೆ ಬಿಡುವುದಿಲ್ಲ ಎಂದು ಹೇಳುತ್ತಲೇ ತಾನೂ ತಿಂದು ತನ್ನ ಪಕ್ಷದ ಮುಖ್ಯಮಂತ್ರಿಯನ್ನು ತಿನ್ನಲು ಬಿಟ್ಟರುವ ಉದಾಹರಣೆ ಮತ್ತೊಂದಿಲ್ಲ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿ ಪಕ್ಷಕ್ಕೆ ಇಲ್ಲವೇ ಇಲ್ಲ ಕೂಡಲೇ ಈ ಹಗರಣದಲ್ಲಿ ನ್ಯಾಯಾಲಯ ನೀಡಿರುವ ತೀರ್ಪು ಅತ್ಯಂತ ಮಹತ್ವವಾಗಿದ್ದು ನ್ಯಾಯಾಲಯ ತನಿಖೆ ನಡೆಸಲು ನ್ಯಾಯಾಲಯದ ಅಧೀನದಲ್ಲಿ ನಡೆಯಬೇಕೆಂದು ನೀಡಿರುವ ಸೂಚನೆ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ನೀಡಿರುವ ನಿರ್ದೇಶನ ಎಂಬುದನ್ನು ಅರಿತು ಕೂಡಲೇ ಬಿಜೆಪಿ ವರಿಷ್ಠ ಮಂಡಲಿ ಯಡಿಯೂರಪ್ಪನನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಬೇಕೆಂದು ಇಂದು 26/12/2020 ಆಗ್ರಹಿಸಿ ಮಹಾತ್ಮಗಾಂಧಿ ಪ್ರತಿಮೆ ಬಳಿ ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಈ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಎಸ್ ಮನೋಹರ್, ಜಿ ಜನಾರ್ದನ್, ಎ ಆನಂದ್, ಎಂ.ಎ ಸಲೀಂ – ಮಾಧ್ಯಮ ಕಾರ್ಯದರ್ಶಿ, ಈ ಶೇಖರ್, ಜಯಸಿಂಹ ,ಶಶಿಭೂಷಣ, ಚಂದ್ರಶೇಖರ್, ಶ್ರೀಮತಿ ಶೀಲಾ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮುಖಂಡರು ಭಾಗವಹಿಸಿದ್ದರು.

ವರದಿ: ಸಿಸಿಲ್ ಸೋಮನ್
